ಏಷ್ಯನ್ ಪ್ಯಾರಾ ಗೇಮ್ಸ್ 2026 ರ ‘ಪ್ಯಾರಾ ಸಂಯೋಜಿತ ಮಿಶ್ರ ತಂಡ’ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿರುವ ಶೀತಲ್ ದೇವಿ ಮತ್ತು ತೋಮನ್ ಕುಮಾರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.
ಈ ಅಮೋಘ ಗೆಲುವು ಕೌಶಲ್ಯ, ಸಂಯಮ ಮತ್ತು ತಂಡದ ಒಗ್ಗಟ್ಟಿನ ಅದ್ಭುತ ಪ್ರದರ್ಶನವಾಗಿದೆ ಎಂದು ಹೇಳುತ್ತಾ ಶ್ರೀ ಮೋದಿ ಅವರು, ಸ್ಪರ್ಧಿಗಳ ಈ ಯಶಸ್ಸಿನಿಂದ ಭಾರತಕ್ಕೆ ಅಪಾರ ಸಂತೋಷವಾಗಿದೆ ಎಂದಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದೆ:
“ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ‘ಪ್ಯಾರಾ ಕಾಂಪೌಂಡ್ ಮಿಕ್ಸೆಡ್ ಟೀಮ್’ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವ ಶೀತಲ್ ದೇವಿ ಮತ್ತು ತೋಮನ್ ಕುಮಾರ್ ಅವರಿಗೆ ಅಭಿನಂದನೆಗಳು! ಅವರ ಈ ಅದ್ಭುತ ಗೆಲುವು ಕೌಶಲ್ಯ, ಸಂಯಮ ಮತ್ತು ತಂಡದ ಒಗ್ಗಟ್ಟಿನ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಯಶಸ್ಸು ಭಾರತಕ್ಕೆ ಅಪಾರ ಸಂತಸ ತಂದಿದೆ: ಪ್ರಧಾನಮಂತ್ರಿ @narendramodi”
*****
Congrats to Sheetal Devi and Toman Kumar on winning Gold in the Para Compound Mixed Team event at the Asian Para Games 2026! Their superb victory was a wonderful display of skill, composure and teamwork. India is delighted by their success: PM @narendramodi
— PMO India (@PMOIndia) October 22, 2026