Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಬೆಳ್ಳಿ ಗೆದ್ದಿರುವ ತೇಜಲ್‌ ಬೆನ್ ದಾಮೋರ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಮಹಿಳೆಯರ 400 ಮೀಟರ್ ಟಿ12 ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಜಯಿಸಿರುವ ತೇಜಲ್‌ ಬೆನ್‌ ದಾಮೋರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

ತೇಜಲ್‌ ಅವರ ವೇಗ, ದೃಢನಿಶ್ಚಯ ಮತ್ತು ಶ್ರೇಷ್ಠತೆಯೆಡೆಗಿನ ಬದ್ಧತೆ ನಿಜಕ್ಕೂ ಶ್ಲಾಘನೀಯ ಎಂದು ಉದ್ಗರಿಸುತ್ತಾ ಶ್ರೀ ಮೋದಿ ಅವರು ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್‌ ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ ಹೀಗಿದೆ:

“ತೇಜಲ್ ಬೆನ್ ದಾಮೋರ್ ಅವರಿಂದ ಮತ್ತೊಂದು ಅತ್ಯಮೋಘ ಪ್ರದರ್ಶನ!

ಏಷ್ಯನ್ ಪ್ಯಾರಾ ಗೇಮ್ಸ್‌ 2026ರ ಮಹಿಳೆಯರ 400 ಮೀಟರ್ ಟಿ 12 ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ.

ಅವರ ವೇಗ, ದೃಢನಿಶ್ಚಯ ಮತ್ತು ಶ್ರೇಷ್ಠತೆ ಸಾಧಿಸುವ ಬದ್ಧತೆ ನಿಜಕ್ಕೂ ಶ್ಲಾಘನೀಯ.

ಈ ಸಾಧನೆಗಾಗಿ ತೇಜಲ್ ಬೆನ್ ಅವರಿಗೆ ಅಭಿನಂದನೆಗಳು: ಪ್ರಧಾನಮಂತ್ರಿ @narendramodi”

 

*****