ಏಷ್ಯನ್ ಪ್ಯಾರಾ ಗೇಮ್ಸ್ 2026 ರ ಪುರುಷರ ಜಾವೆಲಿನ್ ಥ್ರೋ ಎಫ್55 ಸ್ಪರ್ಧೆಯಲ್ಲಿಉತ್ತಮ ಎಸೆತದೊಂದಿಗೆ ಕಂಚಿನ ಪದಕವನ್ನು ಗಳಿಸಿದ ಸುಖ್ಚೈನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.
ಈ ಯಶಸ್ಸು ಅವರ ಸಮರ್ಪಣೆ, ವರ್ಷಗಳ ಕಠಿಣ ತಯಾರಿ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಉತ್ತಮ ಸಾಧನೆ ಮಾಡುವ ದೃಢನಿಶ್ಚಯದ ಪ್ರತಿಬಿಂಬವಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು, ಅವರ ಸಾಧನೆಯು ರಾಷ್ಟ್ರಕ್ಕೆ ಹೆಮ್ಮೆಯನ್ನು ತರುತ್ತದೆ ಮತ್ತು ಇನ್ನೂ ಅನೇಕ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.
ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಈ ರೀತಿ ಹಂಚಿಕೊಂಡಿದೆ:
‘‘ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಸುಖ್ಚೈನ್ ಅವರ ಶ್ಲಾಘನೀಯ ಪ್ರದರ್ಶನ! ಪುರುಷರ ಜಾವೆಲಿನ್ ಥ್ರೋ ಎಫ್ 55 ಸ್ಪರ್ಧೆಯಲ್ಲಿಅವರು ಉತ್ತಮ ಎಸೆತದೊಂದಿಗೆ ಕಂಚಿನ ಪದಕವನ್ನು ಗಳಿಸಿದ್ದಾರೆ. ಈ ಯಶಸ್ಸು ಅವರ ಸಮರ್ಪಣೆ, ವರ್ಷಗಳ ಕಠಿಣ ತಯಾರಿ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿಉತ್ತಮ ಸಾಧನೆ ಮಾಡುವ ದೃಢನಿಶ್ಚಯದ ಪ್ರತಿಬಿಂಬವಾಗಿದೆ. ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಕ್ಕಾಗಿ ಸುಖ್ಚೈನ್ ಅವರಿಗೆ ನನ್ನ ಅಭಿನಂದನೆಗಳು. ಈ ಸಾಧನೆಯು ಇನ್ನೂ ಅನೇಕ ಯಶಸ್ಸಿಗೆ ದಾರಿ ಮಾಡಿಕೊಡಲಿ: ಪ್ರಧಾನಮಂತ್ರಿ @narendramodi’’
*****