ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪಿಲಿಪ್ಪೀನ್ಸ್ ನ ಲಾಸ್ ಬನೋಸ್ ನಲ್ಲಿರುವ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ (ಐ.ಆರ್.ಆರ್.ಐ.)ಗೆ ಭೇಟಿ ನೀಡಿದ್ದರು. ಐ.ಆರ್.ಆರ್.ಐ. ಅಕ್ಕಿ ವಿಜ್ಞಾನದ ಮೂಲಕ ಹಸಿವು ಮತ್ತು ಬಡತನವನ್ನು ತಗ್ಗಿಸಲು; ಭತ್ತ ಬೆಳೆವ ರೈತರ ಮತ್ತು ಗ್ರಾಹಕರ ಆರೋಗ್ಯ ಮತ್ತು ಕ್ಷೇಮವನ್ನು ಸುಧಾರಿಸುವ; ಮತ್ತು ಭವಿಷ್ಯದ ಪೀಳಿಗೆಗೆ ಭತ್ತ ಬೆಳೆವ ಪರಿಸರವನ್ನು ಸಂರಕ್ಷಿಸಲು ಸಮರ್ಪಿತವಾದ ಪ್ರಧಾನ ಸಂಶೋಧನಾ ಸಂಸ್ಥೆಯಾಗಿದೆ.
ಪ್ರವಾಹ ತಾಳಿಕೊಳ್ಳಬಲ್ಲ ಭತ್ತದ ತಳಿ; ಬರ ತಾಳಿಕೊಳ್ಳುವ ಭತ್ತದ ವಿಧ;ಉಪ್ಪಿನಂಶ ತಾಳಿಕೊಳ್ಳುವ ತಳಿ, ಮತ್ತು ಮಹಿಳಾ ಕೃಷಿ ಸಹಕಾರಿಗಳೊಂದಿಗೆ ಐ.ಆರ್.ಆರ್.ಐ ಮಾಡಿರುವ ಕಾರ್ಯ ಕುರಿತ ಛಾಯಾಚಿತ್ರ ಪ್ರದರ್ಶನವನ್ನೂ ಅವರು ಪರಾಮರ್ಶಿಸಿದರು.
ಪ್ರಧಾನಮಂತ್ರಿಯವರು ತಾಳಿಕೊಳ್ಳುವ ಅಕ್ಕಿ ವಿಧಗಳಿಗಾಗಿ ಹೊಸ ಜಮೀನಿನಲ್ಲಿ ಸಾಂಕೇತಿಕವಾಗಿ ಭೂಮಿ ಅಗೆಯುವ ಮೂಲಕ ಚಾಲನೆ ನೀಡಿದರು. ಶ್ರೀ ನರೇಂದ್ರ ಮೋದಿ ಚೇತರಿಕೆಯ ಭತ್ತದ ಗದ್ದೆಯ ಪ್ರಯೋಗ ಶಾಲೆಯನ್ನು ಉದ್ಘಾಟಿಸಲು ಫಲಕ ಅನಾವರಣ ಮಾಡಿದರು. ಐ.ಆರಾ.ಆರ್.ಐ. ವಂಶವಾಹಿ ಬ್ಯಾಂಕ್ ಗೆ ಪ್ರಧಾನಿ ಭಾರತದ ಎರಡು ಭತ್ತದ ತಳಿಗಳ ವಂಶವಾಹಿಯನ್ನು ಕೊಡುಗೆಯಾಗಿ ನೀಡಿದರು.
ಈ ಭೇಟಿಯ ವೇಳೆ ಪ್ರಧಾನಮಂತ್ರಿಯವರು ಐ.ಆರ್.ಆರ್.ಐ.ನಲ್ಲಿ ಕೆಲಸ ಮಾಡುತ್ತಿರುವ ಹಲವು ಭಾರತೀಯ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು.
ಪ್ರಧಾನಮಂತ್ರಿಯವರು ಮನಿಲಾದಲ್ಲಿ ಮಹಾವೀರ್ ಪಿಲಿಪ್ಪೀನ್ ಪ್ರತಿಷ್ಠಾನಕ್ಕೂ ಭೇಟಿ ನೀಡಿದರು. ಇದು ಭಾರತ ಮತ್ತು ಪಿಲಿಪ್ಪೀನ್ಸ್ ನಡುವೆ ದೀರ್ಘ ಕಾಲದಿಂದ ನಡೆಯುತ್ತಿರುವ ಮಾನವೀಯ ಸಹಕಾರದ ಕಾರ್ಯಕ್ರಮವಾಗಿದೆ, ಮತ್ತು ಇದನ್ನು ಮನಿಲಾದ ಭಾರತೀಯ ಮೂಲದ ಮೇಯರ್ ಡಾ. ರಾಮೋನ್ ಭಗತ್ ಸಿಂಗ್ ಅವರು ಸ್ಥಾಪಿಸಿದ್ದಾರೆ. ಈ ಪ್ರತಿಷ್ಠಾನವು ಮಹಾವೀರ್ ವಿಕಲಾಂಗ ಸಹಾಯತಾ ಸಮಿತಿಯೊಂದಿಗೆ ಸಹಯೋಗ ಹೊಂದಿದ್ದು, ಕಾಲಿಲ್ಲದವರಿಗೆ ಜೈಪುರ ಕೃತಕ ಕಾಲುಗಳ ಜೋಡಣೆ ಮಾಡುತ್ತಿದೆ. ಪ್ರಧಾನಮಂತ್ರಿಯವರು ಜೈಪುರ ಕಾಲುಗಳನ್ನು ಅಳವಡಿಸಿಕೊಂಡ ಫಲಾನುಭವಿಗಳೊಂದಿಗೆ ಮಾತುಕತೆ ನಡೆಸಿದರು.
***
My visit to International Rice Research Institute (IRRI) was a great learning experience. Saw the exceptional work IRRI is doing towards mitigating poverty and hunger by improving rice cultivation. Their work benefits many farmers and consumers, particularly in Asia and Africa. pic.twitter.com/siah38KKb4
— Narendra Modi (@narendramodi) November 13, 2017
Saw a detailed exhibition on rice varieties and the impressive work done by IRRI with women farming cooperatives. pic.twitter.com/zoqW86brF2
— Narendra Modi (@narendramodi) November 13, 2017
Interacted with Indian scientists, students, researchers working at IRRI. India’s ICAR and IRRI have been cooperating for four decades. India is also involved in helping IRRI in strategic planning, helping decide key goals and working to overcome hunger as well as poverty. pic.twitter.com/7aHzo3VvjX
— Narendra Modi (@narendramodi) November 13, 2017
A contribution from India to IRRI…presented two Indian rice seed varieties to the IRRI gene bank. pic.twitter.com/AtxKmyu5jS
— Narendra Modi (@narendramodi) November 13, 2017