Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಒಬ್ಬ ವ್ಯಕ್ತಿಯ ಜೀವನವನ್ನು ಬೆಳಗಿಸುವ ಮತ್ತು ವ್ಯಕ್ತಿತ್ವವನ್ನು ನಿರ್ಮಿಸುವ ಎಂಟು ಅಗತ್ಯ ಗುಣಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಧಾನಮಂತ್ರಿಯವರು ಸಂಸ್ಕೃತ ಸುಭಾಷಿತ ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವ್ಯಕ್ತಿಯ ಜೀವನವನ್ನು ಉಜ್ವಲಗೊಳಿಸುವ ಮತ್ತು ವ್ಯಕ್ತಿತ್ವವನ್ನು ನಿರ್ಮಿಸುವ ಎಂಟು ಅಗತ್ಯ ಗುಣಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;

“अष्टौ गुणाः पुरुषं दीपयन्ति प्रज्ञा सुशीलत्वदमौ श्रुतं च।
पराक्रमश्च बहुभाषिता च दानं यथाशक्ति कृतज्ञता च।।”

ಈ ಎಂಟು ಗುಣಗಳು ವ್ಯಕ್ತಿಯ ಜೀವನವನ್ನು ಉಜ್ವಲಗೊಳಿಸುತ್ತದೆ. ಬುದ್ಧಿವಂತಿಕೆಯು ಅವನಿಗೆ ಸರಿಯಾದ ಮಾರ್ಗವನ್ನು ತೋರಿಸುತ್ತದೆ. ಒಳ್ಳೆಯ ನಡತೆಯು ಅವನ ಚಾರಿತ್ರ್ಯವನ್ನು ಪರಿಶುದ್ಧವಾಗಿರಿಸುತ್ತದೆ ಮತ್ತು ಸ್ವನಿಯಂತ್ರಣವು ಅವನನ್ನು ಶಿಸ್ತುಬದ್ಧವಾಗಿ ಇಡುತ್ತದೆ. ಜ್ಞಾನವು ಅವನಿಗೆ ತಿಳಿವಳಿಕೆಯನ್ನು ನೀಡುತ್ತದೆ, ಧೈರ್ಯವು ಕಷ್ಟಕರ ಸಂದರ್ಭಗಳಲ್ಲಿ ದೃಢವಾಗಿ ನಿಲ್ಲಲು ಸಹಾಯ ಮಾಡುತ್ತದೆ ಮತ್ತು ಕೌಶಲ್ಯಪೂರ್ಣ ಮಾತು ಅವನಿಗೆ ಸಮಾಜದಲ್ಲಿ ಗೌರವವನ್ನು ಗಳಿಸುತ್ತದೆ. ಒಬ್ಬರ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡುವುದು ಮತ್ತು ದಯೆಗೆ ಕೃತಜ್ಞರಾಗಿರುವುದು ವ್ಯಕ್ತಿಯನ್ನು ಪರಿಪೂರ್ಣಗೊಳಿಸುತ್ತದೆ.

 

*****