Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಜಕಿಸ್ತಾನಕ್ಕೆ ಭೇಟಿ ನೀಡುತ್ತಿರುವ ಪ್ರಧಾನಮಂತ್ರಿಯವರು, ತಾವು ಅಲ್ಲಿಗೆ ತೆರಳುವ ಮೊದಲು ನೀಡಿರುವ ಹೇಳಿಕೆ ಈ ಕೆಳಕಂಡಂತಿದೆ.


“ಶಾಂಘೈ ಸಹಕಾರ ಸಂಘಟನೆ (ಎಸ್.ಸಿ.ಓ.) ಶೃಂಗಸಭೆಯಲ್ಲಿ ಪಾಲ್ಗೊಳ್ಳಲುನಾನು ಕಜಕಿಸ್ತಾನದ ಆಸ್ತಾನಾಕ್ಕೆ ಜೂನ್ 8-9ರಂದು ಎರಡು ದಿನಗಳ ಪ್ರವಾಸ ಕೈಗೊಳ್ಳುತ್ತಿದ್ದೇನೆ.

ಈ ಸಭೆಯಲ್ಲಿ, ಪ್ರಕ್ರಿಯೆಗಳು ಪೂರ್ಣಗೊಂಡ ತರುವಾಯ ಭಾರತವು, ಎಸ್.ಸಿ.ಓ.ದ ಪೂರ್ಣ ಪ್ರಮಾಣದ ಸದಸ್ಯನಾಗಲಿದೆ. ಎಸ್.ಸಿ.ಓ. ಶೇ.40ರಷ್ಟು ಮನುಕುಲವನ್ನು ಮತ್ತು ಜಾಗತಿಕ ಜಿಡಿಪಿಯ ಶೇ.20ರಷ್ಟನ್ನು ಪ್ರತಿನಿಧಿಸುತ್ತದೆ.

ನಾವು ಪೂರ್ಣ ಪ್ರಮಾಣದ ಸದಸ್ಯತ್ವ ಪ್ರಕ್ರಿಯೆಯನ್ನು ಕಳೆದ ವರ್ಷ ನಡೆದ ಎಸ್.ಸಿ.ಓ.ದ ತಾಷ್ಕೆಂಟ್ ಸಭೆಯಲ್ಲಿ ಆರಂಭಿಸಿದ್ದೆವು. ಆರ್ಥಿಕ, ಸಂಪರ್ಕ ಮತ್ತು ಭಯೋತ್ಪಾದನೆ ನಿಗ್ರಹ ಮತ್ತಿತರ ವಿಷಯಗಳ ಸಹಕಾರಕ್ಕೆ ನೆರವಾಗುವ ಎಸ್.ಸಿ.ಓ.ದಲ್ಲಿ ಭಾರತದ ಸಂಬಂಧವನ್ನು ಆಳಗೊಳಿಸಲು ನಾನು ಎದಿರು ನೋಡುತ್ತಿದ್ದೇನೆ.

ಎಸ್.ಸಿ.ಓ. ಸದಸ್ಯರೊಂದಿಗೆ ನಾವು ದೀರ್ಘಕಾಲೀನ ಬಾಂಧವ್ಯ ಹೊಂದಿದ್ದೇವೆ ಮತ್ತು ಎಸ್.ಸಿ.ಓ. ಮೂಲಕ ಪರಸ್ಪರರ ಲಾಭ ಮತ್ತು ನಮ್ಮ ದೇಶದ ಮತ್ತು ಜನರ ಹೆಚ್ಚಿನ ಪ್ರಗತಿಯನ್ನು ಎದಿರು ನೋಡುತ್ತಿದ್ದೇವೆ.

ಒಟ್ಟಾರೆಯಾಗಿ, ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಕಾರಗೊಳಿಸುವಲ್ಲಿ ಎದುರಾಗುವ ಸಾಮಾನ್ಯ ಸವಾಲುಗಳನ್ನು ಎದುರಿಸಲು ನಾವು ನಮ್ಮ ಪ್ರಯತ್ನ ಇಮ್ಮಡಿಗೊಳಿಸಲಿದ್ದೇವೆ ಮತ್ತು ಪರಸ್ಪರ ಉಪಯುಕ್ತ ಕಾರ್ಯಕ್ರಮಗಳ ಹೊಸ ಅವಕಾಶಗಳನ್ನು ಸೃಷ್ಟಿಸುತ್ತೇವೆ.
ಜೂನ್ 9ರ ಸಂಜೆ ನಾನು, ‘ಭವಿಷ್ಯದ ಇಂಧನ’ ಧ್ಯೇಯ ಶೀರ್ಷಿಕೆಯ ಆಸ್ತಾನಾ ಎಕ್ಸ್ ಪೋ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದೇನೆ.”

****

AKT/NT