Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾನೂನು ಜಾರಿ ತರಬೇತಿ ಕುರಿತಂತೆ ಭಾರತ ಮತ್ತು ಅಮೆರಿಕ ನಡುವೆ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಯು.ಎಸ್.ಎ.ಯ ಫೆಡರಲ್ ಕಾನೂನು ಜಾರಿ ತರಬೇತಿ ಕೇಂದ್ರ (ಎಫ್.ಎಲ್.ಇ.ಟಿ.ಸಿ.) ಮತ್ತು ಭಾರತದ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ (ಬಿಪಿಆರ್ ಅಂಡ್ ಡಿ) ಶಾಖೆ ನಡುವೆ ಕಾನೂನು ಜಾರಿ ತರಬೇತಿಗಾಗಿ ಸಹಕಾರ ಒಪ್ಪಂದ (ಎಂ.ಓ.ಸಿ.)ಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಇದು ಭಾರತ –ಯು.ಎಸ್. ತಾಯ್ನಾಡ ಭದ್ರತೆ ಸಂವಾದದ ಅಡಿಯಲ್ಲಿ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಎರಡೂ ದೇಶಗಳ ನಡುವೆ ಹೆಚ್ಚಿನ ಸಹಕಾರಕ್ಕೆ ಹಾದಿ ಮಾಡಿಕೊಡಲಿದೆ.

ಈ ಎಂ.ಓ.ಸಿ. ತರಬೇತಿಯ ಗುಣಮಟ್ಟ, ತರಬೇತಿಯ ಪರಿಕರಗಳು ಮತ್ತು ತರಬೇತುದಾರರ ಗುಣಮಟ್ಟ ಇತ್ಯಾದಿ ಸುಧಾರಣೆಗೆ ನೆರವಾಗಲಿದೆ. ಇದು ದೇಶದ ಪೊಲೀಸ್ ಪಡೆಗಳ ಕಾರ್ಯಚಟುವಟಿಕೆಯ ಸುಧಾರಣೆ ಮತ್ತು ಸ್ಮಾರ್ಟ್ ಪೊಲೀಸ್ ಕಲ್ಪನೆಯ ಸಾಕಾರಕ್ಕೆ ನೆರವಾಗಲಿದೆ.

ಭಾರತ ಮತ್ತು ಸಂಯುಕ್ತ ಅಮೆರಿಕಾ ಎರಡೂ ಭಯೋತ್ಪಾದನೆ ಮತ್ತು ಬಹುರಾಷ್ಟ್ರೀಯ ಅಪರಾಧದ ಎಲ್ಲ ಸ್ವರೂಪ ಮತ್ತು ಅಭಿವ್ಯಕ್ತಿಗಳ ವಿರುದ್ಧ ಹೋರಾಟಕ್ಕೆ ಮತ್ತು ಭಯೋತ್ಪಾದನೆ ಸಂಘಟನೆಗಳ ನಿರಂತರ ಬೆಳವಣಿಗೆ ತಡೆಯುವ ವಿಚಾರದಲ್ಲಿ ಸಮಾನ ಆಸಕ್ತಿಯನ್ನು ಹೊಂದಿವೆ. ಭಾರತ ಮತ್ತು ಅಮೆರಿಕ ಎರಡೂ ತಾಯ್ನಾಡ ರಕ್ಷಣೆ ಮತ್ತು ಪ್ರಮುಖ ಮೂಲ ಸೌಕರ್ಯ ರಕ್ಷಣೆ ಮತ್ತು ಭಯೋತ್ಪಾದಕ ದಾಳಿಯಿಂದ ಜಾಗತಿಕ ಸರಬರಾಜು ಸರಪಳಿಯ ಅಡೆತಡೆಗಳನ್ನು ತಡೆಗಟ್ಟುವಲ್ಲಿಯೂ ಸಮಾನ ಆಸಕ್ತಿಯನ್ನು ಹಂಚಿಕೊಂಡಿವೆ

ಹಿನ್ನೆಲೆ:

ಅಮೆರಿಕದ ಅಧ್ಯಕ್ಷರು ಭಾರತಕ್ಕೆ 2010ರ ನವೆಂಬರ್ ನಲ್ಲಿ ಭೇಟಿ ನೀಡಿದ್ದ ಸಂದರ್ಭದಲ್ಲಿ, ಎರಡೂ ಕಡೆಯವರು ಭಯೋತ್ಪಾದನೆ ನಿಗ್ರಹದ ಭಾರತ – ಯು.ಎಸ್.ಎ.ಉಪಕ್ರಮಕ್ಕೆ ಸಹಿ ಹಾಕುವುದರ ಉತ್ತರಭಾವಿಯಾಗಿ ತಾಯ್ನಾಡ ಭದ್ರತೆ ಸಂವಾದ (ಎಚ್.ಎಸ್.ಡಿ.) ವ್ಯವಸ್ಥೆಯನ್ನು ಸ್ಥಾಪಿಸಲು ಸಮ್ಮತಿಸಿದ್ದರು.

ಆರು ಉಪ ಗುಂಪುಗಳನ್ನು ತಾಯ್ನಾಡ ಭದ್ರತೆ ಸಂವಾದದ ಅಡಿಯಲ್ಲಿ ರೂಪಾಸಿಲಾಗಿದ್ದು, ಅವು ಕೆಳಗಿನ ಕ್ಷೇತ್ರಗಳನ್ನು ವ್ಯಾಪಿಸಿವೆ: 

  1.             ಜಾಗತಿಕ ಪೂರೈಕೆ ಸರಪಣಿ, ಸಾರಿಗೆ, ಬಂದರು, ಗಡಿ ಮತ್ತು ಕಡಲ ಭದ್ರತೆ,
  2.        ಬೃಹತ್ ನಗರ ಪೊಲೀಸ್ ಸೇವೆ ಮತ್ತು ಒಕ್ಕೂಟ ರಾಷ್ಟ್ರಗಳು ಮತ್ತು ಸ್ಥಳೀಯ ಪಾಲುದಾರರ ನಡುವೆ ಮಾಹಿತಿಯ ವಿನಿಮಯ.

  iii.            ಅಕ್ರಮ ಹಣಕಾಸು, ಅಕ್ರಮ ನಗದು ಕಳ್ಳಸಾಗಾಣಿಕೆ, ಹಣಕಾಸು ವಂಚನೆ ಮತ್ತು ಖೋಟಾ ನೋಟು;

  1.             ಸೈಬರ್ ಮಾಹಿತಿ;
  2.             ಸಾಮರ್ಥ್ಯ ವರ್ಧನೆ; ಮತ್ತು
  3.             ತಂತ್ರಜ್ಞಾನ ಮೇಲ್ದರ್ಜೆಗೇರಿಸುವುದು.

ತಾಯ್ನಾಡ ಭದ್ರತೆ ಸಂವಾದ (ಎಚ್.ಎಸ್.ಡಿ.) ಭಾಗವಾಗಿ, ಎಚ್.ಎಸ್.ಡಿ.ಯಲ್ಲಿ ಸೇರಿರುವ ಎಲ್ಲ ಆರು ಉಪ ಗುಂಪುಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಮೆರಿಕದ ಪ್ರಾಧಿಕಾರಗಳೊಂದಿಗೆ ಕಾನೂನು ಜಾರಿ ಸಂಸ್ಥೆಗಳ ಒಟ್ಟಾರೆ ಸಾಮರ್ಥ್ಯವರ್ಧನೆಗಾಗಿ ಭಾರತ ಮತ್ತು ಯು.ಎಸ್.ಎ. ನಡುವೆ, ಸಾಮರ್ಥ್ಯವರ್ಧನೆಯ ಉಪ ಗುಂಪನ್ನು ಸ್ಥಾಪಿಸಲಾಗಿದೆ. ಭಾರತ ಮತ್ತು ಅಮೆರಿಕದಲ್ಲಿ ಸಾಮರ್ಥ್ಯವರ್ಧನೆಯನ್ನು ನಿರ್ವಹಿಸುತ್ತಿರುವ ಪ್ರಮುಖ ಸಂಸ್ಥೆಗಳ ನಡುವೆ ಸಂರಚಿತ ಸಹಕಾರ ಮಹತ್ವದ್ದು ಎಂದು ಪರಿಗಣಿಸಲಾಗಿದೆ. ಆ ಪ್ರಕಾರವಾಗಿ, ಯು.ಎಸ್.ಎ.ಯಲ್ಲಿ ಎಫ್.ಎಲ್.ಇ.ಟಿ.ಸಿ. ಮತ್ತು ಭಾರತದ ಸಹವರ್ತಿ ಬಿಪಿಆರ್ ಅಂಡ್ ಡಿ ನಡುವೆ ಎಂ.ಓ.ಸಿ.ಗೆ ಯು.ಎಸ್. ಕಡೆಯಿಂದ ಪ್ರಸ್ತಾಪ ಮಾಡಲಾಗಿದೆ.