Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾಮನ್ ವೆಲ್ತ್ ಕ್ರೀಡಾಕೂಟ-2018ರ ಟೇಬಲ್ ಟೆನ್ನಿಸ್ ಪದಕ ವಿಜೇತರ ಜೊತೆ ಪ್ರಧಾನ ಮಂತ್ರಿ ಸಂವಾದ

ಕಾಮನ್ ವೆಲ್ತ್  ಕ್ರೀಡಾಕೂಟ-2018ರ  ಟೇಬಲ್ ಟೆನ್ನಿಸ್ ಪದಕ ವಿಜೇತರ ಜೊತೆ ಪ್ರಧಾನ ಮಂತ್ರಿ ಸಂವಾದ

ಕಾಮನ್ ವೆಲ್ತ್  ಕ್ರೀಡಾಕೂಟ-2018ರ  ಟೇಬಲ್ ಟೆನ್ನಿಸ್ ಪದಕ ವಿಜೇತರ ಜೊತೆ ಪ್ರಧಾನ ಮಂತ್ರಿ ಸಂವಾದ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಾಮನ್ ವೆಲ್ತ್ ಕ್ರೀಡಾಕೂಟ 2018 ರ ಟೇಬಲ್ ಟೆನ್ನಿಸ್ ಪದಕ ವಿಜೇತರ ಜೊತೆ ಸಂವಾದ ನಡೆಸಿದರು. ಕ್ರೀಡಾಳುಗಳು ಹೊಸದಿಲ್ಲಿಯ ಪಾರ್ಲಿಮೆಂಟ್ ಸದನದಲ್ಲಿ ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದ್ದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಅತ್ಯುತ್ತಮ ಸಾಧನೆಯನ್ನು ಪ್ರಧಾನ ಮಂತ್ರಿ ಅವರು ಪ್ರಶಂಸಿಸಿದರು. ಅವರ ಸಾಧನೆಯಿಂದ ಇಡೀಯ ದೇಶ ಹೆಮ್ಮೆ ಪಟ್ಟಿದೆ ಎಂದರು.

ಭಾರತದ ಸಣ್ಣ ಪಟ್ಟಣಗಳಿಂದ ಕ್ರೀಡಾ ಪ್ರತಿಭೆಗಳು ಉದಯಿಸುತ್ತಿರುವುದನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು ಅವುಗಳನ್ನು ನಿರಂತರ ಪೋಷಣೆ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಯುವ ವ್ಯವಹಾರಗಳು ಹಾಗು ಕ್ರೀಡಾ ಖಾತೆ (ಸ್ವತಂತ್ರ ನಿರ್ವಹಣೆ) ಸಹಾಯಕ ಸಚಿವರಾದ ಕರ್ನಲ್ ರಾಜ್ಯವರ್ಧನ ರಾಥೋಡ್ ಈ ಸಂಧರ್ಭ ಹಾಜರಿದ್ದರು.