ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೈಗಾರಿಕೆಗಳ (ತಿದ್ದುಪಡಿ) ಕಾಯಿದೆ 2016ನ್ನು ಸಂಸತ್ತಿನಲ್ಲಿ ಮಂಡಿಸುವ ಮೂಲಕ ಕೈಗಾರಿಕೆಗಳ ಕಾಯಿದೆ 1948ರ ಸೆಕ್ಷನ್ 64 ಮತ್ತು 65 ಹಾಗೂ ಸೆಕ್ಷನ್ 115ರ ಸಾಂದರ್ಭಿಕ ತಿದ್ದುಪಡಿಗಳಿಗೆ ತಿದ್ದುಪಡಿ ತರಲು ತನ್ನ ಪೂರ್ವಾನ್ವಯ ಅನುಮತಿಯನ್ನು ನೀಡಿದೆ.
ಅನುಮೋದಿತ ತಿದ್ದುಪಡಿಯು ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವುದಲ್ಲದೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಗುರಿಯೊಂದಿಗೆ ಸುಲಭವಾಗಿ ವ್ಯಾಪಾರ ಮಾಡಲು ಅವಕಾಶ ಒದಗಿಸುತ್ತದೆ.
ಈ ತಿದ್ದುಪಡಿಗಳು ಹೆಚ್ಚುವರಿ ಕೆಲಸದ (ಓವರ್ ಟೈಮ್) ಅವಧಿಯನ್ನು ಹಾಲಿ ಇರುವ ಪ್ರತಿ ತ್ರೈಮಾಸಿಕಕ್ಕೆ 50 ಗಂಟೆಗಳಿಂದ 100 ಗಂಟೆಗಳಿಗೆ (ಸೆಕ್ಷನ್ 64) ಮತ್ತು ಹಾಲಿ ಪ್ರತಿ ತ್ರೈಮಾಸಿಕಕ್ಕೆ ಇರುವ 75 ಗಂಟೆಗಳಿಂದ 125 ಗಂಟೆಗಳಿಗೆ (ಸೆಕ್ಷನ್ 65) ಹೆಚ್ಚಿಸುವುದಕ್ಕೆ ಸಂಬಂಧಿಸಿದ್ದಾಗಿದೆ.