Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾರ್ಗಿಲ್ ವಿಜಯ ದಿವಸದಂದು ಸೈನಿಕರಿಗೆ ಪ್ರಧಾನ ಮಂತ್ರಿ ನಮನ


ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸಿದ್ದಾರೆ.

“ಕಾರ್ಗಿಲ್ ದಿವಸದಂದು ಆಪರೇಶನ್ ವಿಜಯ ಕಾರ್ಯಾಚರಣೆಯಲ್ಲಿ ದೇಶಕ್ಕಾಗಿ ಪಾಲ್ಗೊಂಡ ಎಲ್ಲ ಸೈನಿಕರಿಗೂ ದೇಶ ಗೌರವ, ಕೃತಜ್ಞತೆಗಳನ್ನು ಸಲ್ಲಿಸುತ್ತದೆ . ನಮ್ಮ ಧೀಮಂತ ಸೈನಿಕರು ಭಾರತ ಸುರಕ್ಷಿತವಾಗಿರುವಂತೆ ನೋಡಿಕೊಂಡದ್ದಲ್ಲದೆ ಶಾಂತಿಯ ವಾತಾವರಣವನ್ನು ಕದಡುವ ಯತ್ನ ಮಾಡಿದವರಿಗೆ ಸೂಕ್ತ ಉತ್ತರ ನೀಡಿದರು.

ಅಟಲ್ ಜೀ ಅವರು ವಿಜಯ ಕಾರ್ಯಾಚರಣೆ ಸಂಧರ್ಭ ನೀಡಿದ ಅತ್ಯುತ್ತಮ ರಾಜಕೀಯ ನಾಯಕತ್ವವನ್ನು ಭಾರತವು ಸದಾ ಕಾಲ ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತದೆ. ಅವರು ಮುಂಚೂಣಿಯಲ್ಲಿ ನಾಯಕತ್ವ ಒದಗಿಸಿದರು ಮತ್ತು ನಮ್ಮ ಸಶಸ್ತ್ರ ಪಡೆಗಳನ್ನು ಬೆಂಬಲಿಸಿದರು ಹಾಗು ವಿಶ್ವದ ಎದುರು ಭಾರತದ ನಿಲುವನ್ನು ಸ್ಪಷ್ಟವಾಗಿ ಪ್ರತಿಪಾದಿಸಿದರು” ಎಂದು ಪ್ರಧಾನ ಮಂತ್ರಿಯವರು ಹೇಳಿದ್ದಾರೆ. .