Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕಾರ್ಮಿಕ ಸಂಘಟನೆಗಳ ಮಾನ್ಯತೆಗೆ ಸಂಬಂಧಿಸಿದ ಅವಕಾಶಗಳಿಗಾಗಿ ಕಾರ್ಮಿಕ ಸಂಘಟನೆ ಕಾಯ್ದೆ 1926 ರ ತಿದ್ದುಪಡಿಗೆ ಸಂಪುಟದ ಅನುಮೋದನೆ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆ ನೀಡುವುದಕ್ಕೆ ಸಂಬಂಧಿಸಿದ  ಅವಕಾಶಗಳನ್ನು ಕಲ್ಪಿಸಲು  ಕಾರ್ಮಿಕ ಕಾಯ್ದೆ , 1926 ರ  ತಿದ್ದುಪಡಿಗೆ ಅನುಮೋದನೆ ನೀಡಿತು.

ಲಾಭಗಳು:

ಮಾನ್ಯತೆಯಿಂದ ಈ ಕೆಳಗಿನ ಪ್ರಯೋಜನಗಳು ಲಭಿಸಲಿವೆ. 

(i) . ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಕಾರ್ಮಿಕ ಸಂಘಟನೆಗಳ ಮಾನ್ಯತೆ.

(ii). ತ್ರಿಪಕ್ಷೀಯ ಮಂಡಳಿಗಳಲ್ಲಿ ಕಾರ್ಮಿಕರಿಗೆ ನೈಜ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವಿಕೆ.

(iii). ಸರಕಾರದಿಂದ ಸ್ವೇಚ್ಛಾನುಸಾರ ಕಾರ್ಮಿಕ ಪ್ರತಿನಿಧಿಗಳ ನಾಮಕರಣದ ಮೇಲೆ ನಿಯಂತ್ರಣ, ಮತ್ತು

(iv) . ಕೈಗಾರಿಕಾ ಅಶಾಂತಿ ಮತ್ತು ಕಾನೂನು ಖಟ್ಲೆಗಳ ಕಡಿತ.

ಉದ್ದೇಶಿತ ಕಾಯ್ದೆಯು ಸರಕಾರದಿಂದ ತ್ರಿಪಕ್ಷೀಯ ಮಂಡಳಿಗಳಲ್ಲಿ ಕಾರ್ಮಿಕರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ನಾಮಕರಣವನ್ನು ಹೆಚ್ಚು ಪಾರದರ್ಶಕವಾಗಿರುವುದನ್ನು ಖಾತ್ರಿಪಡಿಸುತ್ತದೆ. ಹೀಗೆ ಮಾನ್ಯತೆ ಪಡೆದ ಕಾರ್ಮಿಕ ಸಂಘಟನೆಗಳು ಕೈಗಾರಿಕಾ ಸೌಹಾರ್ದತೆಯನ್ನು ಕಾಪಾಡುವ ಉತ್ತರದಾಯಿತ್ವ ಹೊಂದಿರುತ್ತವೆ. ಕೇಂದ್ರ/ರಾಜ್ಯ ಮಟ್ಟದಲ್ಲಿ ಕಾರ್ಮಿಕ ಸಂಘಟನೆಗಳಿಗೆ  ಮಾನ್ಯತೆ ನೀಡುವುದರಿಂದ ವಿವಿಧ ಇಲಾಖೆಗಳು ಇದನ್ನು ಪುನಾರಾವರ್ತಿಸುವುದನ್ನು ನಿಯಂತ್ರಿಸಿದಂತಾಗುತ್ತದೆ. ಮಾನ್ಯತೆ ಪಡೆದ ಕಾರ್ಮಿಕ ಸಂಘಟನೆಗಳಿಗೆ ಕೇಂದ್ರ ಹಾಗು ರಾಜ್ಯ ಮಟ್ಟದಲ್ಲಿ ನಿರ್ದಿಷ್ಟ ಪಾತ್ರವನ್ನು ವಹಿಸಬಹುದಾಗಿದೆ.