ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಕೀನ್ಯಾ ನಡುವೆ ಕೃಷಿ ಮತ್ತು ಪೂರಕ ಕ್ಷೇತ್ರಗಳ ದ್ವಿಪಕ್ಷೀಯ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಸಹಿ ಮಾಡಲು ತನ್ನ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದವು, ಕೃಷಿ ಸಂಶೋಧನೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ, ಜಾನುವಾರು ಮತ್ತು ಮೀನುಗಾರಿಕೆ, ತೋಟಗಾರಿಕೆ, ಸ್ವಾಭಾವಿಕ ಸಂಪನ್ಮೂಲದ ನಿರ್ವಹಣೆ, ನೀರಾವರಿ ಕೃಷಿ ಪದ್ಧತಿ ಅಭಿವೃದ್ಧಿ ಮತ್ತು ಸಮಗ್ರ ಜಲಾಶ್ರಯಗಳ ಅಭಿವೃದ್ಧಿ, ಸಮಗ್ರ ಕೀಟ ನಿರ್ವಹಣೆ, ಕೃಷಿ ಘಟಕ, ಯಂತ್ರೋಪಕರಣ ಮತ್ತು ಸ್ಥಾಪನೆಗಳು, ನೈರ್ಮಲ್ಯ ಮತ್ತು ಗಡಿ ದಾಟುವ ಕೃಷಿ ಉತ್ಪನ್ನ ವಿಚಾರ ಸೇರಿದಂತೆ ಈ ಕ್ಷೇತ್ರಗಳ ವಿವಿಧ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
ಈ ಒಪ್ಪಂದವು ಎರಡೂ ದೇಶಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಕಾರ್ಯ ಗುಂಪು ರಚಿಸಲೂ ಅವಕಾಶ ನೀಡುತ್ತದೆ, ಈ ಗುಂಪು ಎಂ.ಓ.ಯು. ಜಾರಿಯ ನಿಗಾ ವಹಿಸುವುದು ಮತ್ತು ವಿವರವಾದ ಸಹಕಾರ ಕಾರ್ಯಕ್ರಮ ರೂಪಿಸುವುದು ಇದರ ಕರ್ತವ್ಯವಾಗಿದೆ.
ಸಹಿ ಹಾಕಿದ ದಿನದಿಂದ ಈ ಒಪ್ಪಂದ ಅನುಷ್ಠಾನಕ್ಕೆ ಬರುತ್ತದೆ ಮತ್ತು ಐದು ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ ಮತ್ತು ಮತ್ತೊಬ್ಬ ಪಕ್ಷಕಾರನಿಗೆ ಎರಡೂ ಪಕ್ಷದವರು ಈ ಒಪ್ಪಂದವನ್ನು ರದ್ದು ಮಾಡುವ ಇಂಗಿತವನ್ನು, ಒಪ್ಪಂದ ಕೊನೆಗೊಳ್ಳುವ ಆರು ತಿಂಗಳುಗಳ ಮೊದಲೇ ಅಧಿಸೂಚನೆ ನೀಡದ ಹೊರತು ಈ ಒಪ್ಪಂದವು ಮತ್ತೆ ಐದು ವರ್ಷಗಳ ಅವಧಿಗೆ ತಂತಾನೇ ವಿಸ್ತರಣೆಯಾಗುತ್ತದೆ.
AKT/VBA/SH