Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೃಷಿ ಮತ್ತು ಪೂರಕ ಕ್ಷೇತ್ರಗಳಲ್ಲಿ ಭಾರತ ಮತ್ತು ಪೋರ್ಚುಗಲ್ ನಡುವೆ ಎಂ.ಓ.ಯು.ಗೆ ಅಂಕಿತ ಹಾಕಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಪೋರ್ಚುಗಲ್ ನಡುವೆ ಕೃಷಿ ಮತ್ತು ಅದಕ್ಕೆ ಪೂರಕ ವಲಯಗಳಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ಕ್ಷೇತ್ರದಲ್ಲಿನ ವಿವಿಧ ಚಟುವಟಿಕೆಗಳನ್ನು ಈ ಒಪ್ಪಂದ ಒಳಗೊಂಡಿದೆ, ಇದರಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಮಾಹಿತಿ ವಿನಿಮಯ, ಸಸಿ ಮತ್ತು ಸರಿ ಉತ್ಪನ್ನಗಳು, ಗಡಿ ದಾಟುವ ಕೃಷಿ ಉತ್ಪನ್ನಗಳ ಕುರಿತ ಮಾಹಿತಿ ವಿನಿಮಯ, ತರಬೇತಿ ಕಾರ್ಯಕ್ರಮಗಳು, ವಿಚಾರಗೋಷ್ಠಿ ಮತ್ತು ಸಮಾಲೋಚಕರ ಮತ್ತು ತಜ್ಞರ ಭೇಟಿಯನ್ನೂ ಒಳಗೊಂಡಿದೆ.

ಈ ಒಪ್ಪಂದವು ಎರಡೂ ದೇಶಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಕಾರ್ಯ ಗುಂಪು ರಚಿಸಲೂ ಅವಕಾಶ ನೀಡುತ್ತದೆ, ಈ ಗುಂಪು ಹಾಲಿ ಇರುವ ಎಂ.ಓ.ಯು. ಜಾರಿಯ ನಿಗಾ ವಹಿಸುತ್ತದೆ ಮತ್ತು ಕೃಷಿ ಸಹಕಾರಕ್ಕೆ ಸಮಗ್ರ ಪ್ರಸ್ತಾಪಗಳನ್ನು ರಚಿಸುವುದು ಹಾಗೂ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಕೃಷಿ ಮತ್ತು ಪೂರಕ ಕ್ಷೇತ್ರದಲ್ಲಿನ ಭವಿಷ್ಯದ ಸಹಕಾರದ ಆದ್ಯತೆಯನ್ನು ರೂಪಿಸುವುದು ಇದರ ಕರ್ತವ್ಯವಾಗಿದೆ.

ಸಹಿ ಹಾಕಿದ ದಿನದಿಂದ ಈ ಒಪ್ಪಂದ ಜಾರಿಗೆ ಬರುತ್ತದೆ ಮತ್ತು ಐದು ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ ಮತ್ತು ಮತ್ತೊಬ್ಬ ಪಕ್ಷಕಾರನಿಗೆ ಎರಡೂ ಪಕ್ಷದವರು ರಾಜತಾಂತ್ರಿಕ ವಾಹಿನಿಯ ಮೂಲಕ ಲಿಖಿತವಾಗಿ ಈ ಒಪ್ಪಂದವನ್ನು ರದ್ದು ಮಾಡುವ ಇಂಗಿತ ವ್ಯಕ್ತಪಡಿಸಿ, ಒಪ್ಪಂದ ಕೊನೆಗೊಳ್ಳುವ ಆರು ತಿಂಗಳುಗಳ ಮೊದಲೇ ನೋಟಿಸ್ ನೀಡದ ಹೊರತು ಈ ಒಪ್ಪಂದವು ಮತ್ತೆ ಐದು ವರ್ಷಗಳ ಅವಧಿಗೆ ತಂತಾನೇ ವಿಸ್ತರಣೆಯಾಗುತ್ತದೆ.

*******

AKT/VBA/SH