ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಲೆಬನಾನ್ ನಡುವೆ ಕೃಷಿ ಮತ್ತು ಪೂರಕ ವಲಯದ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಕೃಷಿ ವಲಯದ ದ್ವಿಪಕ್ಷೀಯ ಸಹಕಾರ ಎರಡೂ ದೇಶಗಳಿಗೆ ಪರಸ್ಪರ ಲಾಭದಾಯಕವಾಗಿದೆ. ಈ ತಿಳಿವಳಿಕೆ ಒಪ್ಪಂದವು ಎರಡೂ ದೇಶಗಳ ಉತ್ತಮ ಕೃಷಿ ರೂಢಿಗಳನ್ನು ಅರಿಯಲು ಉತ್ತೇಜನ ನೀಡುತ್ತದೆ ಮತ್ತು ರೈತರ ಜಮೀನಿನಲ್ಲಿ ಉತ್ತಮ ಇಳುವರಿಗೆ ಮತ್ತು ಜಾಗತಿಕ ಮಾರುಕಟ್ಟೆ ಸುಧಾರಣೆಗೆ ನೆರವಾಗುತ್ತದೆ.
ವಿಶ್ವಾದ್ಯಂತ ಇರುವ ಮಾರುಕಟ್ಟೆ ಮತ್ತು ಉತ್ತಮ ಪದ್ಧತಿಗಳಿಗೆ ಪ್ರವೇಶ ಒದಗಿಸುವ ಮೂಲಕ ಕೃಷಿ ಉತ್ಪಾದಕತೆ ಮತ್ತು ಇಳುವರಿಯನ್ನು ಹೆಚ್ಚಿಸಲು ಈ ತಿಳಿವಳಿಕೆ ಒಪ್ಪಂದ ನೆರವಾಗಲಿದೆ. ಉತ್ಪಾದಕತೆ ಮತ್ತು ಇಳುವರಿ ಹೆಚ್ಚಳಕ್ಕೆ ನಾವಿನ್ಯ ತಂತ್ರಜ್ಞಾನಕ್ಕೆ ಇದು ಇಂಬು ನೀಡುತ್ತದೆ, ಆ ಮೂಲಕ ಇದು ಆಹಾರ ಭದ್ರತೆಗೂ ಕಾರಣವಾಗುತ್ತದೆ.
*****