Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ( ಎ.ಎಸ್..ಅರ್.ಬಿ.) ಪುನಾರಚನೆಗೆ ಸಂಪುಟದ ಅನುಮೋದನೆ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ( ಎ.ಎಸ್..ಅರ್.ಬಿ.) ಪುನಾರಚನೆಗೆ ಸಂಬಂಧಿಸಿದ  ಪ್ರಸ್ತಾವನೆಗೆ ಅನುಮೋದನೆ ನೀಡಿತು.

 

 ವಿವರಗಳು:

•         ಎ.ಎಸ್.ಆರ್.ಬಿ.ಯು ಇದುವರೆಗೆ  ಮೂರು ಸದಸ್ಯರ ಮಂಡಳಿಯಾಗಿತ್ತು , ಅದೀಗ ನಾಲ್ಕು ಸದಸ್ಯರ ಮಂಡಳಿಯಾಗಲಿದೆ. ಅದು ಅಧ್ಯಕ್ಷರು ಹಾಗು 3 ಸದಸ್ಯರನ್ನು ಒಳಗೊಂಡಿರುತ್ತದೆ.

•         ಎ.ಎಸ್.ಆರ್.ಬಿ.ಯ ಅವಧಿ ಮೂರು ವರ್ಷಗಳದ್ದಾಗಿರುತ್ತದೆ ಅಥವಾ 65 ವರ್ಷ ವಯೋಮಿತಿ ತಲುಪುವವರೆಗೆ –ಇದರಲ್ಲಿ ಯಾವುದು ಮೊದಲೋ ಅದಾಗಿರುತ್ತದೆ. 

•         ಸ್ವಾಯತ್ತೆ , ಗೌಪ್ಯ, ಉತ್ತರದಾಯಿತ್ವ ಮತ್ತು ದಕ್ಷತೆಯ ಕಾರ್ಯನಿರ್ವಹಣೆಗಾಗಿ ಎ.ಎಸ್.ಆರ್.ಬಿ.ಯನ್ನು ಐ.ಸಿ.ಎ.ಆರ್.ನಿಂದ ಬೇರ್ಪಡಿಸಿ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯದ ಅಡಿಯಲ್ಲಿ ಬರುವ  ಕೃಷಿ ಸಂಶೋಧನೆ ಮತ್ತು ಶಿಕ್ಷಣ (ಡಿ.ಎ.ಆರ್. ಇ.) ಇಲಾಖೆಗೆ ಜೋಡಿಸಲಾಗುವುದು.

•        ಎ.ಎಸ್.ಆರ್.ಬಿ.ಗೆ ಬಜೆಟ್ ಶೀರ್ಷಿಕೆಯನ್ನು ಐ.ಸಿ.ಎ.ಆರ್. ನಿಂದ ಬೇರ್ಪಡಿಸಿ ಅದನ್ನು ಡಿ ಎ.ಆರ್.ಇ. ಅಡಿಯಲ್ಲಿ ರಚಿಸಲಾಗುವುದು ಮತ್ತು ಎ.ಎಸ್.ಆರ್.ಬಿ. ತನ್ನದೇ ಆದ ಆಡಳಿತಾತ್ಮಕ ಸಿಬ್ಬಂದಿಗಳನ್ನು ಸಚಿವಾಲಯದಲ್ಲಿ ಹೊಂದಲಿದ್ದು, ಅದಕ್ಕೆ ಸ್ವತಂತ್ರ ಆಡಳಿತಾತ್ಮಕ ನಿಯಂತ್ರಣ ಲಭಿಸಲಿದೆ.

 

ಪರಿಣಾಮ:

ಅಧ್ಯಕ್ಷರು ಮತ್ತು ಮೂವರು ಸದಸ್ಯರನ್ನು ಒಳಗೊಂಡ ನಾಲ್ಕು ಸದಸ್ಯರ ಮಂಡಳಿಯು ಎ.ಎಸ್.ಆರ್.ಬಿ.ಯ ಕಾರ್ಯಚಟುವಟಿಕೆಗಳಲ್ಲಿ ವೇಗ ತರಲು ಸಹಾಯ ಮಾಡಲಿದೆ. ಅದು ಕೃಷಿ ಸಮುದಾಯಕ್ಕೆ  ಮತ್ತು ಕೃಷಿ ಕ್ಷೇತ್ರಕ್ಕೆ ಅನುಕೂಲವಾಗುವಂತೆ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲಿದೆ. ಅದೆಲ್ಲಕ್ಕಿಂತ ಮಿಗಿಲಾಗಿ ಅದು ದೇಶದ  ಕೃಷಿ ಸಂಶೋಧನೆ ಮತ್ತು ಶಿಕ್ಷಣದಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಏಜೆನ್ಸಿಯಾದ ಐ.ಸಿ.ಎ.ಆರ್. ನಲ್ಲಿ ವಿವಿಧ ವೈಜ್ಞಾನಿಕ ಹುದ್ದೆಗಳಿಗೆ ಪ್ರತಿಭಾವಂತ ವಿಜ್ಞಾನಿಗಳನ್ನು ನೇಮಕಾತಿ ಮಾಡಿಕೊಳ್ಳುವಾಗ ಪಾರದರ್ಶಕತೆ , ಮತ್ತು ಪ್ರತಿಭಾವಂತ ವಿಜ್ಞಾನಿಗಳ ನೇಮಕವನ್ನು ಖಾತ್ರಿಪಡಿಸಲಿದೆ.

 

ಹಿನ್ನೆಲೆ:

ಐ.ಸಿ.ಎ.ಆರ್. ಮತ್ತು ಡಿ.ಎ.ಆರ್.ಇ.ಗಳ ಕೃಷಿ ಸಂಶೋಧನಾ ಸೇವೆಗಳ ವಿವಿಧ ಹುದ್ದೆಗಳಿಗೆ  ಮತ್ತು ಸಂಶೋಧನಾ ನಿರ್ವಹಣಾ ಹುದ್ದೆಗಳಿಗೆ ನೇಮಕಾತಿ ಮಾಡಲು ಸ್ವತಂತ್ರ ನೇಮಕಾತಿ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸಲು ಪೂರ್ಣಾವಧಿ ಅಧ್ಯಕ್ಷರನ್ನು ಒಳಗೊಂಡ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯನ್ನು ಸ್ಥಾಪಿಸಲು 1973ರ ನವೆಂಬರ್ ತಿಂಗಳಲ್ಲಿ  ಸಂಪುಟವು ಇತರ ವಿಷಯಗಳ ನಡುವೆ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯನ್ನು ಸ್ಥಾಪಿಸಲು ಒಪ್ಪಿಗೆ ನೀಡಿತ್ತು. ಎ.ಎಸ್.ಆರ್.ಬಿ.ಯ ಕಾರ್ಯ ಒತ್ತಡದಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಮಂಡಳಿಯನ್ನು ಪುನಾರಚಿಸುವ ಪ್ರಸ್ತಾಪ ಮಂಡಿಸಲಾಗಿತ್ತು. ಮತ್ತು ಅದಕ್ಕೆ ಸಂಪುಟವು 1986ರ ಅಕ್ಟೋಬರ್ನಲ್ಲಿ ಅನುಮೋದನೆ ನೀಡಿ ಎ.ಎಸ್.ಆರ್.ಬಿ.ಯ ಸದಸ್ಯಬಲವನ್ನು 1 ರಿಂದ 3 ಕ್ಕೇರಿಸಿತು. ಎ.ಎಸ್.ಆರ್.ಬಿ.ಯ ಕೊನೆಯ ಪುನಾರಚನೆ 1986ರಲ್ಲಿ ನಡೆದ ಬಳಿಕ ಕಾರ್ಯದೊತ್ತಡದಲ್ಲಿ ಮತ್ತಷ್ಟು ಏರಿಕೆಯಾದ ಹಿನ್ನೆಲೆಯಲ್ಲಿ ಮತ್ತು ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ವ್ಯಾಪಕ ಪ್ರಮುಖ ಬದಲಾವಣೆಗಳು ಸಂಭವಿಸಿದ ಹಿನ್ನೆಲೆಯಲ್ಲಿ ಮಂಡಳಿಯ ಸದಸ್ಯ ಬಲವನ್ನು ಹೆಚ್ಚಿಸಿ ಅಧ್ಯಕ್ಷರು ಮತ್ತು ಮಂಡಳಿಯ ಸದಸ್ಯರ ಆಯ್ಕೆಯ ತಜ್ಞತೆಯ ವಲಯವನ್ನು  ವಿಸ್ತರಿಸುವ ಅಗತ್ಯ ಉಂಟಾಯಿತು.