Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇಂದ್ರ ಪಟ್ಟಿಯಲ್ಲಿರುವ ಇತರೆ ಹಿಂದುಳಿದ ವರ್ಗಗಳ ಮರು-ವರ್ಗೀಕರಣ ಕುರಿತಂತೆ ಪರಿಶೀಲಿಸಲು ರಚಿಸಲಾಗಿರುವ ಆಯೋಗದ ಅವಧಿಯನ್ನು 2018ರ ಜೂನ್ 20ರ ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ  ಕೇಂದ್ರ ಪಟ್ಟಿಯಲ್ಲಿರುವ ಇತರೆ ಹಿಂದುಳಿದ ವರ್ಗಗಳ ಮರು-ವರ್ಗೀಕರಣ ಕುರಿತಂತೆ ಪರಿಶೀಲಿಸಲು ರಚಿಸಲಾಗಿರುವ ಆಯೋಗದ ಅವಧಿಯನ್ನು ಎರಡನೇ ಮತ್ತು ಅಂತಿಮ ಬಾರಿಗೆ 2018ರ ಮಾರ್ಚ್ 27ರಿಂದ 12 ವಾರಗಳ ಅವಧಿಗೆ ಅಂದರೆ 2018ರ ಜೂನ್ 20ರ ವರೆಗೆ ವಿಸ್ತರಿಸಲು ಅನುಮೋದನೆ ನೀಡಿತು. 
 
ಹಿನ್ನೆಲೆ: ರಾಷ್ಟ್ರಪತಿ ಅವರ ಅನುಮೋದನೆ ಮೇರೆಗೆ ಸಂವಿಧಾನದ 340ನೇ ಪರಿಚ್ಛೇದದಡಿ 2017ರ ಅಕ್ಟೋಬರ್ 2ರಂದು ಆಯೋಗವನ್ನು ರಚಿಸಲಾಗಿತ್ತು. ನಿವೃತ್ತ ನ್ಯಾಯಮೂರ್ತಿ ಶ್ರೀಮತಿ ರೋಹಿಣಿ ಅವರ ಅಧ್ಯಕ್ಷತೆಯ ಈ ಆಯೋಗ 2017ರ ಅಕ್ಟೋಬರ್ 11ರಿಂದ ಕಾರ್ಯಾರಂಭ ಮಾಡಿತು. ಅದು ಅಂದಿನಿಂದ ಇತರೆ ಹಿಂದುಳಿದ ವರ್ಗಗಳ ಮರು ವರ್ಗೀಕರಣ ಮಾಡಿರುವ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಮತ್ತು ರಾಜ್ಯಗಳ ಹಿಂದುಳಿದ ವರ್ಗಗಳ ಆಯೋಗಗಳೊಂದಿಗೆ ನಿರಂತರವಾಗಿ ಸಂವಾದ ನಡೆಸುತ್ತಿದೆ. ಆಯೋಗ ಕೇಂದ್ರದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಜಾತಿಗಳು ಮತ್ತು ಸಮುದಾಯಗಳಿಗೆ ಮೀಸಲಾತಿಯ ಪ್ರಯೋಜನ ಸಮಾನವಾಗಿ ವಿತರಣೆಯಾಗುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ಮೌಲ್ಯಮಾಪನ ಮಾಡಲು ಅದು ಸರ್ಕಾರದ ಹಣಕಾಸು ಸಂಸ್ಥೆಗಳಲ್ಲಿ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಮತ್ತು ಸರ್ಕಾರಿ ಇಲಾಖೆಗಳಲ್ಲಿ ಒಬಿಸಿ ವ್ಯಕ್ತಿಗಳ ನೇಮಕಾತಿಯ ಅಂಕಿ-ಅಂಶಗಳನ್ನು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗದವರ ಪ್ರವೇಶದ ಕುರಿತು ಮಾಹಿತಿಯನ್ನು ಒದಗಿಸುವಂತೆ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕೋರಿದೆ. 
 
ಎಲ್ಲಾ ಮೂಲಗಳಿಂದ ಬಂದಿರುವ ಅಗಾಧ ಪ್ರಮಾಣದ ಅಂಕಿ-ಅಂಶಗಳನ್ನು ವಿಶ್ಲೇಷಣೆ ಮಾಡಿ, ಸಮಗ್ರ ವರದಿಯನ್ನು ತಯಾರಿಸಲು ಆಯೋಗದ ಅಧಿಕಾರಾವಧಿಯನ್ನು 12 ವಾರಗಳ ವರೆಗೆ ಅಂದರೆ 2018ರ ಜೂನ್ 20ರ ವರೆಗೆ ಅವಧಿಯನ್ನು ವಿಸ್ತರಿಸುವಂತೆ ಕೋರಿತ್ತು. 
 
************