ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋವಿಡ್-19 ನಿಯಂತ್ರಣ ಕುರಿತಂತೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ನವರಾತ್ರಿಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಯವರು ಜನತೆಗೆ ಒಂಬತ್ತು ಮನವಿಗಳನ್ನು ಮಾಡಿದರು.
ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ಜಾಗತಿಕ ಮಹಾಮಾರಿಯ ವಿರುದ್ಧ ಹೋರಾಡಲು ಎಲ್ಲ ಭಾರತೀಯರ ಸಂಕಲ್ಪ ಮತ್ತು ಸಂಯಮ ಮಹತ್ವದ್ದು ಎಂದು ಪ್ರಧಾನಮಂತ್ರಿ ಹೇಳಿದರು. ತ್ವರಿತವಾಗಿ ಹಬ್ಬುತ್ತಿರುವ ವೈರಾಣುವನ್ನು ತಡೆಯಲು ಕೆಲವೊಂದು ಕ್ರಮಗಳನ್ನು ಅನುಸರಿಸುವಂತೆ ಜನತೆಗೆ ಮನವಿ ಮಾಡಿದರು. ಈ ಮಹಾಮಾರಿಯನ್ನು ಹಗುರವಾಗಿ ಪರಿಗಣಿಸದೆ, ಜಾಗೃತರಾಗಿರುವಂತೆ ಮತ್ತು ಕೋವಿಡ್ 19 ತಡೆಯುವ ನಿಟ್ಟಿನಲ್ಲಿ ಸಕ್ರಿಯರಾಗಿರುವಂತೆ ತಿಳಿಸಿದರು.
ನಾವು ಯಾವಾಗ ಆರೋಗ್ಯವಾಗಿರುತ್ತೀವೋ, ಆಗ ಜಗತ್ತೂ ಆರೋಗ್ಯವಾಗಿರುತ್ತದೆ ಎಂಬ ಮಂತ್ರವನ್ನು ಅನುಸರಿಸುವಂತೆ ಪ್ರಧಾನಮಂತ್ರಿ ಮನವಿ ಮಾಡಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತಹ ಕೆಲವೊಂದು ಸ್ವಯಂ ನಿರ್ಬಂಧಗಳನ್ನು ವಿಧಿಸಿಕೊಳ್ಳುವ ಮಹತ್ವವನ್ನು ಅವರು ಒತ್ತಿ ಹೇಳಿದರು. ತಾಳ್ಮೆಯಿಂದ ನಿಯಮಗಳನ್ನು ಪಾಲಿಸುವಂತೆ ನಾಗರಿಕರಿಗೆ ಮನವಿ ಮಾಡಿದ ಅವರು, ಅಗತ್ಯ ಎನಿಸಿದಾಗ ಮಾತ್ರ ಮನೆಯಿಂದ ಹೊರಬರುವಂತೆ ಇಲ್ಲವೇ ಪ್ರತ್ಯೇಕವಾಗಿ ಉಳಿಯುವ ಅಗತ್ಯವನ್ನು ಪ್ರತಿಪಾದಿಸಿದ ಅವರು, ಮನೆಯಿಂದ ಕರ್ತವ್ಯ ನಿರ್ವಹಿಸುವಂತೆ ಮತ್ತು ಅನಗತ್ಯ ಪ್ರಯಾಣ ತಡೆಯುವಂತೆ ಮನವಿ ಮಾಡಿದರು. ಮುಂದಿನ ಕೆಲವು ವಾರಗಳ ಕಾಲ ಮನೆಯಿಂದ ಹೊರಗೆ ಬಾರದಂತೆ 60 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಅವರು ಮನವಿ ಮಾಡಿದರು. ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಒತ್ತಿ ಹೇಳಿದ ಅವರು, ಈ ಸಮಯದಲ್ಲಿ ನಿಯಮಿತವಾದ ತಪಾಸಣೆಯನ್ನು ಸದ್ಯಕ್ಕೆ ಮುಂದೂಡುವಂತೆ ಸಾಧ್ಯವಾದ ಕಡೆಗಳಲ್ಲಿ ಶಸ್ತ್ರಚಿಕಿತ್ಸೆಯ ದಿನಾಂಕವನ್ನು ಮುಂದಕ್ಕೆ ಹಾಕಿಸಲು ಮನವಿ ಮಾಡಿದರು.
‘ಜನತಾ ಕರ್ಪ್ಯೂ’
2020ರ ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಜನತಾ ಕರ್ಪ್ಯೂ ವಿಧಿಸಿಕೊಳ್ಳುವಂತೆ ಮನವಿ ಮಾಡಿದ ಪ್ರಧಾನಮಂತ್ರಿ, ಅವಶ್ಯಕ ಸೇವೆಗಳೊಂದಿಗೆ ಸಂಪರ್ಕಿತರಾದವರ ಹೊರತು ಪಡಿಸಿ ಉಳಿದವರು ಮನೆಯಲ್ಲಿ ಉಳಿಯುವಂತೆ ಮನವಿ ಮಾಡಿದರು. ಇದರಿಂದ ಪಡೆಯುವ ಇಂಥ ಜನಾಂದೋಲನ ಮತ್ತು ಅನುಭವ ಮುಂದಿನ ಸವಾಲುಗಳನ್ನು ಎದುರಿಸಲು ನಮ್ಮನ್ನು ಸಜ್ಜುಗೊಳಿಸುತ್ತವೆ ಎಂದರು. ಮಾರ್ಚ್ 22ರ ನಮ್ಮ ಪ್ರಯತ್ನಗಳು ರಾಷ್ಟ್ರದ ಹಿತದ ದೃಷ್ಟಿಯಿಂದ ಕರ್ತವ್ಯ ನಿರ್ವಹಣೆಯಲ್ಲಿ ನಮ್ಮ ಸ್ವಯಂ ನಿಗ್ರಹ ಮತ್ತು ದೃಢ ಸಂಕಲ್ಪದ ಸಂಕೇತಗಳು ಎಂದು ಹೇಳಿದರು.
ರಾಜ್ಯ ಸರ್ಕಾರಗಳಿಗೆ ಇದರ ನೇತೃತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿದ ಪ್ರಧಾನಮಂತ್ರಿ, ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ನಾಗರಿಕ ಸಮಾಜ, ಎಲ್ಲ ಯುವ ಸಂಘಟನೆಗಳಿಗೆ ಜನತಾ ಕರ್ಪ್ಯೂ ಕುರಿತಂತೆ ಜಾಗೃತಿ ಮೂಡಿಸಲು ಮನವಿ ಮಾಡಿದರು. ಜನತಾ ಕರ್ಪ್ಯೂ ಕುರಿತಂತೆ ಕನಿಷ್ಠ 10 ಜನರಿಗೆ ಪೋನ್ ಮೂಲಕ ಮಾಹಿತಿ ನೀಡುವಂತೆ ಅವರು ಎಲ್ಲರಿಗೂ ಮನವಿ ಮಾಡಿದರು.
ನಿಸ್ವಾರ್ಥ ಸೇವೆ ಸಲ್ಲಿಸುವವರಿಗೆ ಧನ್ಯವಾದ ಸಮರ್ಪಣೆ
ಕೋವಿಡ್ 19 ಮಹಾಮಾರಿಯ ವಿರುದ್ಧ ಹಲವು ಜನರು ದೈರ್ಯವಾಗಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದಾರೆ, ಅವರಲ್ಲಿ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಸರ್ಕಾರಿ ನೌಕರರು, ವಿಮಾನಯಾನ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿ, ಬಸ್, ರೈಲು, ಆಟೋ ಚಾಲಕರು, ಮತ್ತು ಮನೆಗಳಿಗೆ ಸರಕು ಸರಬರಾಜುಮಾಡುವವರು ಸೇರಿದ್ದಾರೆ ಎಂದರು.
ಅವರೆಲ್ಲರಿಗೂ ಸಂಕಷ್ಟದ ಕಾಲದಲ್ಲಿ ಅವರು ಮಾಡುತ್ತಿರುವ ಸೇವೆಗೆ ಗೌರವ ಸಲ್ಲಿಸಲು ಮತ್ತು ಮೆಚ್ಚುಗೆ ವ್ಯಕ್ತಪಡಿಸಲು ಮಾರ್ಚ್ 22ರಂದು 5 ಗಂಟೆಗೆ ಎಲ್ಲ ನಾಗರಿಕರೂ ಸಂಜೆ 5 ಗಂಟೆಗೆ ಮನೆಯ ಬಾಗಿಲಲ್ಲಿ ಅಥವಾ ಛಾವಣಿಯ ಕಿಟಕಿಯ ಬಳಿ ನಿಂತು 5 ನಿಮಿಷಗಳ ಕಾಲ ಚಪ್ಪಾಳೆ ತಟ್ಟಿ, ಗಂಟೆ ಅಥವಾ ಜಾಗಟೆ ಬಾರಿಸಿ ಅವರಿಗೆ ನಮಿಸಲು ಪ್ರಧಾನಮಂತ್ರಿ ತಿಳಿಸಿದರು.
ದೇಶದಾದ್ಯಂತ ಇರುವ ಸ್ಥಳೀಯ ಸರ್ಕಾರಗಳು ಸಂಜೆ 5 ಗಂಟೆಗೆ ಸೈರನ್ ಮೊಳಗಿಸಿ ಇದರ ಸೂಚನೆ ನೀಡುವಂತೆ ಮನವಿ ಮಾಡಿದರು.
ಆರ್ಥಿಕ ಸವಾಲುಗಳನ್ನು ಸರಿದೂಗಿಸಲು
ಮಹಾಮಾರಿಯಿಂದ ಎದುರಾಗಿರುವ ಆರ್ಥಿಕ ಸವಾಲುಗಳನ್ನು ನಿಭಾಯಿಸಲು, ವಿತ್ತ ಸಚಿವರ ನೇತೃತ್ವದಲ್ಲಿ ಕೋವಿಡ್ ಆರ್ಥಿಕ ಸ್ಪಂದನಾ ಕಾರ್ಯ ಪಡೆ ರಚಿಸುವುದಾಗಿ ಪ್ರಧಾನಮಂತ್ರಿ ಪ್ರಕಟಿಸಿದರು. ಈ ಕಾರ್ಯಪಡೆ ಬಾಧ್ಯಸ್ಥರೊಂದಿಗೆ ಸಮಾಲೋಚಿಸಿ, ಅವರ ಪ್ರತಿಕ್ರಿಯೆ ಪಡೆದು, ಅದರ ಆಧಾರದ ಮೇಲೆ ಸವಾಲು ಎದುರಿಸಲು ನಿರ್ಧಾರ ಕೈಗೊಳ್ಳಲಿದೆ.ಈ ಕಾರ್ಯಪಡೆಯು ಈ ಸವಾಲುಗಳನ್ನು ನಿಭಾಯಿಸಲು ಕೈಗೊಳ್ಳುವ ನಿರ್ಧಾರಗಳನ್ನು ಜಾರಿ ಮಾಡುತ್ತದೆ.
ಪ್ರಧಾನಮಂತ್ರಿಯವರು ವಾಣಿಜ್ಯ ಸಮುದಾಯ ಮತ್ತು ಹೆಚ್ಚಿನ ಆದಾಯ ಇರುವ ಗುಂಪುಗಳು ಆರ್ಥಿಕವಾಗಿ ಅಗತ್ಯ ಇರುವವರ ಬಗ್ಗೆ ಅದರಲ್ಲೂ ಕಡಿಮೆ ಆದಾಯದ ಗುಂಪುಗಳ ಅಂದರೆ ವಿವಿಧ ಸೇವೆ ಮಾಡುವವರ ಬಗ್ಗೆ ಮಾನವತೆಯಿಂದ ನೋಡುವಂತೆ, ಅವರು ಕೆಲಸಕ್ಕೆ ಬರಲು ಸಾಧ್ಯವಾಗದ ದಿನಗಳ ಸಂಬಳ ಕಡಿತ ಮಾಡದಂತೆ ಮನವಿ ಮಾಡಿದರು. ಇಂಥ ಸನ್ನಿವೇಶದಲ್ಲಿ ಮಾನವೀಯತೆಯ ಮಹತ್ವವನ್ನು ಪ್ರತಿಪಾದಿಸಿದರು.
ಆಹಾರ, ಹಾಲು, ಔಷಧ ಇತ್ಯಾದಿಯ ಯಾವುದೇ ಕೊರತೆ ಇಲ್ಲ ಎಂದು ದೇಶವಾಸಿಗಳಿಗೆ ಅವರು ಭರವಸೆ ನೀಡಿದರು. ಜನರು ಆತಂಕದಲ್ಲಿ ಖರೀದಿ ಮಾಡದಂತೆ ಅವರು ಮನವಿ ಮಾಡಿದರು.
ಪ್ರತಿಯೊಬ್ಬರೂ ಒಗ್ಗೂಡಿ ಕೋವಿಡ್-19 ಬಿಕ್ಕಟ್ಟಿನಿಂದ ಹೊರಬರಲು ಪ್ರಧಾನಮಂತ್ರಿ ಪ್ರತಿಯೊಬ್ಬರಿಗೂ ಮನವಿ ಮಾಡಿದರು. ತಪ್ಪು ಮಾಹಿತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ ಪ್ರಧಾನಮಂತ್ರಿಯವರು, ಇಂಥ ಜಾಗತಿಕ ಮಹಾಮಾರಿಯ ಸಂದರ್ಭದಲ್ಲಿ ಮಾನವೀಯತೆ ಹಾಗು ಭಾರತದ ಗೆಲ್ಲುವು ಮಹತ್ವ ಎಂದು ಹೇಳಿದರು.
Watch Live! https://t.co/UHSCp7Wcu9
— PMO India (@PMOIndia) March 19, 2020
मेरे प्रिय देशवासियों,
— PMO India (@PMOIndia) March 19, 2020
पूरा विश्व इस समय संकट के बहुत बड़े गंभीर दौर से गुजर रहा है: PM @narendramodi #IndiaFightsCorona
मैं आज प्रत्येक देशवासी से एक और समर्थन मांग रहा हूं।
— PMO India (@PMOIndia) March 19, 2020
ये है जनता-कर्फ्यू।
जनता कर्फ्यू यानि जनता के लिए,
जनता द्वारा खुद पर लगाया गया कर्फ्यू: PM @narendramodi #IndiaFightsCorona
इस रविवार,
— PMO India (@PMOIndia) March 19, 2020
यानि
22 मार्च को,
सुबह 7 बजे से रात
9 बजे तक, सभी देशवासियों को,
जनता-कर्फ्यू का पालन करना है: PM @narendramodi #IndiaFightsCorona
साथियों,
— PMO India (@PMOIndia) March 19, 2020
22 मार्च को हमारा ये प्रयास, हमारे आत्म-संयम,
देशहित में कर्तव्य पालन के संकल्प का एक प्रतीक होगा।
22 मार्च को जनता-कर्फ्यू की सफलता, इसके अनुभव, हमें आने वाली चुनौतियों के लिए भी तैयार करेंगे: PM @narendramodi #IndiaFightsCorona
संभव हो तो हर व्यक्ति प्रतिदिन कम से कम
— PMO India (@PMOIndia) March 19, 2020
10 लोगों को फोन करके कोरोना वायरस से बचाव के उपायों के साथ ही जनता-कर्फ्यू के बारे में भी बताए।
साथियों,
ये जनता कर्फ्यू एक प्रकार से हमारे लिए,
भारत के लिए एक कसौटी की तरह होगा: PM @narendramodi #IndiaFightsCorona
ये कोरोना जैसी वैश्विक महामारी के खिलाफ लड़ाई के लिए भारत कितना तैयार है, ये देखने और परखने का भी समय है।
— PMO India (@PMOIndia) March 19, 2020
आपके इन प्रयासों के बीच, जनता-कर्फ्यू के दिन,
22 मार्च को मैं आपसे एक और सहयोग चाहता हूं: PM @narendramodi #IndiaFightsCorona
मैं चाहता हूं कि
— PMO India (@PMOIndia) March 19, 2020
22 मार्च, रविवार के दिन हम ऐसे सभी लोगों को धन्यवाद अर्पित करें।
रविवार को ठीक
5 बजे,
हम अपने घर के दरवाजे पर खड़े होकर,
बाल्कनी में,
खिड़कियों के
सामने खड़े होकर
5 मिनट तक ऐसे लोगों का आभार व्यक्त करें: PM @narendramodi #IndiaFightsCorona
पूरे देश के स्थानीय प्रशासन से भी मेरा आग्रह है कि
— PMO India (@PMOIndia) March 19, 2020
22 मार्च को
5 बजे,
सायरन की आवाज से इसकी सूचना लोगों तक पहुंचाएं।
सेवा परमो धर्म के हमारे संस्कारों को मानने वाले ऐसे देशवासियों के लिए हमें पूरी श्रद्धा के साथ अपने भाव व्यक्त करने होंगे: PM @narendramodi #IndiaFightsCorona
संकट के इस समय में,
— PMO India (@PMOIndia) March 19, 2020
आपको ये भी ध्यान रखना है कि हमारी आवश्यक सेवाओं पर,
हमारे हॉस्पिटलों पर दबाव भी निरंतर बढ़ रहा है।
इसलिए मेरा आपसे आग्रह ये भी है कि रूटीन चेक-अप के लिए अस्पताल जाने से जितना बच सकते हैं,
उतना बचें: PM @narendramodi #IndiaFightsCorona
कोरोना महामारी से उत्पन्न हो रही आर्थिक चुनौतियों को ध्यान में रखते हुए, वित्त मंत्री के नेतृत्व में सरकार ने एक
— PMO India (@PMOIndia) March 19, 2020
कोविड-19-Economic Response Task Force
के गठन का फैसला लिया है: PM @narendramodi #IndiaFightsCorona
ये टास्क फोर्स,
— PMO India (@PMOIndia) March 19, 2020
ये भी सुनिश्चित करेगी कि, आर्थिक मुश्किलों को कम करने के लिए जितने भी कदम उठाए जाएं,
उन पर प्रभावी रूप से अमल हो: PM @narendramodi #IndiaFightsCorona
संकट के इस समय में मेरा देश के व्यापारी जगत,
— PMO India (@PMOIndia) March 19, 2020
उच्च आय वर्ग से भी आग्रह है कि अगर संभव है तो आप
जिन-जिन लोगों से सेवाएं लेते हैं, उनके आर्थिक हितों का ध्यान रखें: PM @narendramodi #IndiaFightsCorona
मैं देशवासियों को इस बात के लिए भी आश्वस्त करता हूं कि देश में दूध,
— PMO India (@PMOIndia) March 19, 2020
खाने-पीने का सामान, दवाइयां,
जीवन के लिए ज़रूरी ऐसी आवश्यक चीज़ों की कमी ना हो इसके लिए तमाम कदम उठाए जा रहे हैं: PM @narendramodi #IndiaFightsCorona
पिछले दो महीनों में,
— PMO India (@PMOIndia) March 19, 2020
130 करोड़ भारतीयों ने,
देश के हर नागरिक ने,
देश के सामने आए इस संकट को अपना संकट माना है,
भारत के लिए,
समाज के लिए उससे जो बन पड़ा है,
उसने किया है: PM @narendramodi #IndiaFightsCorona
मुझे भरोसा है कि आने वाले समय में भी आप अपने कर्तव्यों का,
— PMO India (@PMOIndia) March 19, 2020
अपने दायित्वों का इसी तरह निर्वहन करते रहेंगे।
हां, मैं मानता हूं कि ऐसे समय में कुछ कठिनाइयां भी आती हैं, आशंकाओं और अफवाहों का वातावरण भी पैदा होता है: PM @narendramodi #IndiaFightsCorona
कुछ दिन में नवरात्रि का पर्व आ रहा है।
— PMO India (@PMOIndia) March 19, 2020
ये शक्ति उपासना का पर्व है।
भारत पूरी शक्ति के साथ आगे बढ़े, यही शुभकामना है: PM @narendramodi #IndiaFightsCorona
On 22nd March 2020, let us observe a Janata Curfew and add strength to the fight against COVID-19. #IndiaFightsCorona. pic.twitter.com/qOqhQaJES5
— Narendra Modi (@narendramodi) March 19, 2020
At 5 PM on 22nd March 2020, the day of the Janata Curfew, I have a special request. Will you all help? #IndiaFightsCorona pic.twitter.com/Qi63adPUJh
— Narendra Modi (@narendramodi) March 19, 2020
At 5 PM on 22nd March 2020, the day of the Janata Curfew, I have a special request. Will you all help? #IndiaFightsCorona pic.twitter.com/Qi63adPUJh
— Narendra Modi (@narendramodi) March 19, 2020
A request to the people of India- please do not indulge in panic buying. #IndiaFightsCorona pic.twitter.com/ZG1ho45hQG
— Narendra Modi (@narendramodi) March 19, 2020