Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೌಶಲ್ಯ, ಕಠಿಣ ಪರಿಶ್ರಮ, ಶಿಕ್ಷಣ ಮತ್ತು ದಯಾಳು ಭಾಷಣದ ಸದ್ಗುಣಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಂಸ್ಕೃತ ಸುಭಾಷಿತ ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದು, ಕೌಶಲ್ಯ, ಕಠಿಣ ಪರಿಶ್ರಮ ಮತ್ತು ಕರುಣೆ ನಮ್ಮ ಜೀವನದಲ್ಲಿ ಅದ್ಭುತ ಶಕ್ತಿಗಳಾಗಿವೆ ಎಂದು ಹೇಳಿದ್ದಾರೆ. ಅವುಗಳ ಮೂಲಕ ನಾವು ಪ್ರತಿಯೊಂದು ಸವಾಲನ್ನು ಗೆಲ್ಲಬಹುದು ಮಾತ್ರವಲ್ಲದೆ ಅವು ನಮ್ಮ ಗುರಿಗಳನ್ನು ಸಾಧಿಸುವಲ್ಲಿಯೂ ಸಹಾಯಕವಾಗಿವೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

ಕೌಶಲ್ಯಪೂರ್ಣ ಜನರಿಗೆ ಯಾವುದೇ ಕೆಲಸ ಕಷ್ಟಕರವಲ್ಲ; ಕಷ್ಟಪಟ್ಟು ದುಡಿಯುವ ಜನರಿಗೆ ಯಾವುದೇ ಗುರಿ ತುಂಬಾ ದೂರವಿಲ್ಲ; ವಿದ್ಯಾವಂತರಿಗೆ, ಅವರ ಸ್ವಂತ ದೇಶ ಮತ್ತು ವಿದೇಶಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ; ಮತ್ತು ದಯೆಯಿಂದ ಮಾತನಾಡುವವರಿಗೆ ಯಾರೂ ಅಪರಿಚಿತರಲ್ಲ ಎಂಬ ಅಂಶಗಳನ್ನೂ ಪ್ರಧಾನಮಂತ್ರಿ ಹಂಚಿಕೊಂಡಿದ್ದಾರೆ.  

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

“कौशल, परिश्रम और करुणा हमारे जीवन की अद्भुत शक्तियां हैं। इनके माध्यम से हम न केवल हर चुनौती को पार कर सकते हैं, बल्कि ये हमारे लक्ष्यों की प्राप्ति में भी मददगार हैं।

को हि भारः समर्थानां किं दूरं व्यवसायिनाम्।
को विदेशः सुविद्यानां कः परः प्रियवादिनाम्॥”

ಕೌಶಲ್ಯಪೂರ್ಣ ಜನರಿಗೆ ಯಾವುದೇ ಕೆಲಸ ಕಷ್ಟಕರವಲ್ಲ; ಕಷ್ಟಪಟ್ಟು ದುಡಿಯುವ ಜನರಿಗೆ ಯಾವುದೇ ಗುರಿಯೂ ದೂರವಿಲ್ಲ; ವಿದ್ಯಾವಂತರಿಗೆ ಅವರ ಸ್ವಂತ ದೇಶ ಮತ್ತು ವಿದೇಶಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಮತ್ತು ದಯೆಯಿಂದ ಮಾತನಾಡುವವರಿಗೆ ಯಾರೂ ಅಪರಿಚಿತರಲ್ಲ.

 

*****