Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಖಾದರ್ ಖಾನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಅವರ ಸಂತಾಪ


ಖಾದರ್ ಖಾನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

“ಖಾದರ್ ಖಾನ್ ಜೀ ಅವರು ತಮ್ಮ ಅದ್ಭುತ ಅಭಿನಯ ಕೌಶಲ್ಯದಿಂದ ಚಿತ್ರಪರದೆಯನ್ನು ಬೆಳಗಿದರು. ಅವರ ಅನನ್ಯ ಹಾಸ್ಯ ಭಾವಕ್ಕಾಗಿ ಧನ್ಯವಾದಗಳು. ಅವರೊಬ್ಬ ಉತ್ತಮ ಚಿತ್ರಕಥೆಗಾರರಾಗಿದ್ದರು ಹಾಗೂ ಹಲವು ಸ್ಮರಣೀಯ ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.” ಎಂದು ಪ್ರಧಾನಮಂತ್ರಿಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

*****