Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಖೇಲೋ ಇಂಡಿಯಾ ಯುವ ಕ್ರೀಡೋತ್ಸವದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಧಾನಮಂತ್ರಿ ಅವರು ಶುಭಾಶಯ ಕೋರಿದ್ದಾರೆ


ಇಂದು ಪೂನಾದಲ್ಲಿ ಪ್ರಾರಂಭವಾಗುವ ಖೇಲೋ ಇಂಡಿಯಾ ಯುವ ಕ್ರೀಡೋತ್ಸವದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದರು.

“ಇಂದು ಪೂನಾದಲ್ಲಿ ಪ್ರಾರಂಭಗೊಳ್ಳಲಿರುವ ಖೇಲೋ ಇಂಡಿಯಾ ಯುವ ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ಯುವ ಗೆಳೆಯರಿಗೆ ನನ್ನ ಹಾರ್ದಿಕ ಶುಭಾಶಯಗಳು. ಈ ಟೂರ್ನಮೆಂಟ್ ನಲ್ಲಿ ಅತ್ಯುತ್ತಮ ಕ್ರೀಡಾ ಪ್ರತಿಭೆಗಳ ಪ್ರದರ್ಶನವಾಗಲಿ ಮತ್ತು ಇದು ನಮ್ಮ ಯುವ ಜನತೆಗೆ ಅವರ ಕ್ರೀಡಾ ಕನಸುಗಳನ್ನು ನನಸಾಗಿಸುವ ವೇದಿಕೆಯಾಗಲಿ”

ಹೆಚ್ಚು ಕ್ರೀಡೆಗಳು, ಉತ್ತಮ ಆರೋಗ್ಯ ಮತ್ತು ಸಶಕ್ತ ದೇಶ ! ಭಾರತದಾದ್ಯಂತ ಸದೃಢತೆಯ ಮಟ್ಟವನ್ನು ಇನ್ನಷ್ಟು ಹೆಚ್ಚುಗೊಳಿಸುವ ನಿಟ್ಟಿನಲ್ಲಿ – “ ಇನ್ನೂ 5 ನಿಮಿಷ” ( 5 ಮಿನಿಟ್ ಔರ್)– ಎಂಬುದು ಮಹತ್ತರ ಪ್ರಯತ್ನವಾಗಿದೆ. ಕ್ರೀಡಾಂಗಣದಲ್ಲಿ ಅತಿಹೆಚ್ಚು ಸಮಯ ಕಳೆದ ಖ್ಯಾತ ಕ್ರೀಡಾಪಟುಗಳು ತಮ್ಮ ಸ್ವಂತ ಅನುಭವಗಳನ್ನು ಇಂದು ವ್ಯಕ್ತಪಡಿಸುತ್ತಿರುವುದು ಅತ್ಯಂತ ಹರ್ಷದಾಯಕವಾಗಿದೆ.” ಎಂದು ಪ್ರಧಾನಮಂತ್ರಿ ಹೇಳಿದ್ದಾರೆ