Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್ ಗೆ ಇಂದು ಪ್ರಧಾನಿ ಭೇಟಿ;ಮಂಗಳವಾರ ಆಫ್ರಿಕನ್ ಅಭಿವೃದ್ಧಿ ಬ್ಯಾಂಕ್ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಗುಜರಾತ್ ಭೇಟಿ ಕೈಗೊಳ್ಳಲಿದ್ದಾರೆ. ಇಂದು ಕಚ್ ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಂಗಳವಾರ ಮೇ 23ರಂದು ಗಾಂಧಿನಗರದಲ್ಲಿ ಪ್ರಧಾನಮಂತ್ರಿಯವರು ಆಫ್ರಿಕನ್ ಅಭಿವೃದ್ಧಿ ಬ್ಯಾಂಕ್ ವಾರ್ಷಿಕ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಿನ್ನೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು, ತಮ್ಮ ಎರಡು ದಿನಗಳ ಗುಜರಾತ್ ಕಾರ್ಯಕ್ರಮದ ಬಗ್ಗೆ ವಿವರ ಪ್ರಕಟಿಸಿದ್ದಾರೆ.

“ನಾಳೆ ನಾನು ಎರಡು ದಿನಗಳ ಗುಜರಾತ್ ಭೇಟಿ ಆರಂಭ ಮಾಡುತ್ತಿದ್ದೇನೆ, ಈ ವೇಳೆ ನಾನು ಕಚ್ ಮತ್ತು ಗಾಂಧಿನಗರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೇನೆ.

ಕಾಂಡ್ಲಾ ಬಂದರಿನ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತೇನೆ ಮತ್ತು ಉದ್ಘಾಟಿಸುತ್ತೇನೆ ಹಾಗೂ ಗಾಂಧಿಧಾಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದೇನೆ.

ಭಚೌನಲ್ಲಿ, ಪಂಪಿಗ್ ಕೇಂದ್ರ ಉದ್ಘಾಟನೆ ಆಗಲಿದೆ ಮತ್ತು ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದೇನೆ. ಮೊಬೈಲ್ ನಲ್ಲಿ ಈ ಕಾರ್ಯಕ್ರಮ ವೀಕ್ಷಿಸಬಹುದು.http://nm4.in/dnldapp

ಕಚ್ ಬಗ್ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಇದು ಅದ್ಭುತವಾದ ಜನರು ಮತ್ತು ಅದ್ಭುತ ಚೇತರಿಕೆಯ ಸ್ಫೂರ್ತಿಯಿಂದ ಹರಸಲ್ಪಟ್ಟಿದೆ.

2001ರ ಊಹಿಸಿಕೊಳ್ಳಲೂ ಸಾಧ್ಯವಾಗದ ಭೂಕಂಪದ ಸಂಕಷ್ಟದ ಬಳಿಕ, ಇಂದು ಕಚ್ ದೇಶದಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದೆ.

ಮಂಗಳವಾರ, ಎ.ಎಫ್.ಡಿ.ಬಿ. ಸಮೂಹದ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ನಾನು ಗಾಂಧಿನಗರದಲ್ಲಿರುತ್ತೇನೆ.

ಎಎಫ್.ಡಿ.ಬಿ. ಸಮೂಹದ ವಾರ್ಷಿಕ ಸಭೆಯು ‘ಆಫ್ರಿಕಾದಲ್ಲಿ ಸಂಪತ್ತಿನ ಸೃಷ್ಟಿಗೆ ಕೃಷಿಯ ಪರಿವರ್ತನೆ’ ಎಂಬ ಸಕಾಲಿಕವಾದ ಧ್ಯೆಯವನ್ನು ಆಯ್ಕೆ ಮಾಡಿಕೊಂಡಿದೆ.’

ಎ.ಎಫ್.ಡಿ.ಬಿ. ಸಮೂಹದ ವಾರ್ಷಿಕ ಸಭೆಯ ಸಂದರ್ಭದಲ್ಲಿ, ನಾನು #AfDBAM2017ಯಲ್ಲಿ ಭಾಗವಹಿಸುತ್ತಿರುವ ಕೆಲವು ಗಣ್ಯ ಪ್ರತಿನಿಧಿಗಳನ್ನೂ ಭೇಟಿ ಮಾಡಲಿದ್ದೇನೆ, ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

****

AKT/NT