Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುರು ಗೋವಿಂದ್ ಸಿಂಗ್ ಜೀ 350ನೇ ಪ್ರಕಾಶ ಪರ್ವದಂದು ಅವರನ್ನು ಸ್ಮರಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 10ನೇ ಸಿಖ್ ಗುರು ಗುರು ಗೋವಿಂದ ಸಿಂಗ್ ಜೀ ಅವರ 350ನೇ ಪ್ರಕಾಶ ಪರ್ವದಂದು ಗೌರವ ನಮನ ಸಲ್ಲಿಸಿದ್ದಾರೆ.

“350ನೇ ಪ್ರಕಾಶಪರ್ವದ ಅಂಗವಾಗಿ, ನಾನು ಪೂಜ್ಯ ಶ್ರೀ ಗುರು ಗೋವಿಂದ ಸಿಂಗ್ ಜೀ ಅವರಿಗೆ ನಮಿಸುತ್ತೇನೆ. ಅವರು ಅಸಾಧಾರಣ ಧೈರ್ಯ ಮತ್ತು ಅಪಾರ ಜ್ಞಾನದ ಮೂರ್ತರೂಪವಾಗಿದ್ದರು. ಅವರ ಕೆಚ್ಚೆದೆಯ ಕಾರ್ಯಗಳು ಮತ್ತು ಉದಾತ್ತ ಆಲೋಚನೆಗಳು ಪೀಳಿಗೆಯವರೆಗೆ ಜನರನ್ನು ಪ್ರೇರೇಪಿಸುತ್ತವೆ.

ಶ್ರೀ ಗುರು ಗೋವಿಂದ್ ಸಿಂಗ್ ಜೀ ಅವರು, ಸಮಾನತೆಯ ಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದರು. ಅವರು ಎಲ್ಲ ಸ್ವರೂಪದ ಸಾಮಾಜಿಕ ತಾರತಮ್ಯವನ್ನೂ ವಿರೋಧಿಸುತ್ತಿದ್ದರು ಮತ್ತು ಅವರ ನ್ಯಾಯದ ಅರಿವು ಮತ್ತು ಪ್ರಾಮಾಣಿಕತೆ ಪೂಜಾರ್ಹವಾದುದಾಗಿದೆ.” ಎಂದು ಪ್ರಧಾನಿ ತಿಳಿಸಿದ್ದಾರೆ.

*****