Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುರು ರವಿದಾಸ್ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರು ರವಿದಾಸ್ ಅವರ ಜಯಂತಿಯಂದು ಗುರು ರವಿದಾಸ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

“ನಾನು ಗುರು ರವಿದಾಸ್ ಅವರ ಜಯಂತಿಯಂದು ಅವರಿಗೆ ನಮಿಸುತ್ತೇನೆ. ಗುರು ರವಿದಾಸ್ ಅವರು ನಮ್ಮ ನೆಲದಲ್ಲಿ ಜನಿಸಿದ ಮಹಾನ್ ಸನ್ಯಾಸಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಸಮಾನತೆಯ ಮತ್ತು ಸಹಾನುಭೂತಿಯ ಸಮಾಜಕ್ಕಾಗಿ ಎದ್ದು ನಿಂತರು. ಅವರ ಬೋಧನೆಗಳು ಶಾಶ್ವತವಾದುವಾಗಿದ್ದು ಸಮಾಜದ ಎಲ್ಲಾ ವರ್ಗಗಳ ಜನರಿಗೂ ಸೂಕ್ತವೆನಿಸಿವೆ.

ಗುರು ರವಿದಾಸ್ ಅವರು ನಮ್ಮ ಸಮಾಜದಲ್ಲಿ ಹಲವು ಧನಾತ್ಮಕ ಬದಲಾವಣೆಯನ್ನು ತಂದಿದ್ದಾರೆ. ಅವರು ಪುರಾತನ ಮತ್ತು ತಿರೋಗಾಮಿ ಆಚರಣೆಗಳನ್ನು ಪ್ರಶ್ನಿಸಿದರು, ಮತ್ತು ಕಾಲದೊಂದಿಗೆ ಬದಲಾಗುವಂತೆ ಜನರಿಗೆ ಸ್ಫೂರ್ತಿ ನೀಡಿದರು. ಸಮಯದೊಂದಿಗೆ ಸಾಗುವ ಪ್ರಾಮುಖ್ಯತೆ ಮತ್ತು ಸ್ಫೂರ್ತಿಯ ವಿಚಾರಣೆ ಮಹತ್ತರವಾಗಿರುತ್ತದೆ.

ಗುರು ರವಿದಾಸ್ ಅವರು ಸಾಮರಸ್ಯ ಮತ್ತು ಭ್ರಾತೃತ್ವದ ಮೌಲ್ಯಗಳಲ್ಲಿ ಅಚಲ ನಂಬಿಕೆಯಿಟ್ಟಿದ್ದರು. ಅವರು ಯಾವುದೇ ರೀತಿಯ ತಾರತಮ್ಯದಲ್ಲಿ ನಂಬಿಕೆ ಇಟ್ಟಿರಲಿಲ್ಲ. ನಾವು ಸರ್ವರೊಂದಿಗೆ ಸರ್ವರ ವಿಕಾಸದತ್ತ ಕಾರ್ಯ ನಿರ್ವಹಿಸುತ್ತಿದ್ದು, ಗುರು ರವಿದಾಸ್ ಅವರ ಪ್ರತಿಯೊಬ್ಬ ಮಾನವನ ಅದರಲ್ಲೂ ಬಡವರ ಸೇವೆ ಮಾಡಬೇಕು ಎಂಬ ಮಹತ್ವದ ಸಂದೇಶಗಳಿಂದ ಪ್ರೇರಿತರಾಗಿದ್ದೇವೆ,

ಇಂದು ನಾನು ಗುರು ರವಿದಾಸ್ ಅವರ ಈ ಸಾಲುಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ

ऐसा चाहूँ राज मैं जहाँ मिलै सबन को अन्न।

छोट बड़ो सब सम बसै, रैदास रहै प्रसन्न।।

ಗುರು ರವಿದಾಸ್ ಅವರು ಪ್ರತಿಯೊಬ್ಬರಿಗೂ ತಿನ್ನಲು ಸಾಕಷ್ಟು ಇರುವ ಮತ್ತು ಪ್ರತಿಯೊಬ್ಬರೂ ಸಂತೋಷವಾಗಿರುವ ಕಾಲದ ಕನಸು ಕಂಡಿದ್ದರು”, ಎಂದು ಪ್ರಧಾನಿ ಹೇಳಿದ್ದಾರೆ.

***