Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗೌರವಾನ್ವಿತ ಯುವರಾಜ 5ನೇ ರಹೀಮ್ ಆಗಾ ಖಾನ್ ಅವರಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭೇಟಿ


ಆಗಾ ಖಾನ್ ಅಭಿವೃದ್ಧಿ ಜಾಲ (ಎ ಎಕೆ ಡಿ ಎನ್ ) ಅಧ್ಯಕ್ಷರಾದ ಮಾನ್ಯ ಯುವರಾಜ 5ನೇ ರಹೀಮ್ ಆಗಾ ಖಾನ್  ಅವರು ನವದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಸುಸ್ಥಿರ ನಗರ ಅಭಿವೃದ್ಧಿ, ಜಲ ಸಂರಕ್ಷಣೆ, ಆರೋಗ್ಯ ರಕ್ಷಣೆ, ಗ್ರಾಮೀಣ ನೈರ್ಮಲ್ಯ, ಯುವಜನರ ಕೌಶಲ್ಯಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣದ ವಲಯಗಳಲ್ಲಿ ಎಕೆಡಿಎನ್ ನ ದೀರ್ಘಕಾಲೀನ ಕೊಡುಗೆಗಳನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ.

ದೇಶಾದ್ಯಂತ ಐತಿಹಾಸಿಕ ತಾಣಗಳ ಜೀರ್ಣೋದ್ಧಾರ ಮತ್ತು ನವೀಕರಣದ ಮೂಲಕ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಎಕೆಡಿಎನ್ ಕೈಗೊಂಡಿರುವ ಪ್ರವರ್ತಕ ಪ್ರಯತ್ನಗಳಿಗೆ ಪ್ರಧಾನಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತದ ಎಲ್ಲರನ್ನೊಳಗೊಂಡ ಬೆಳವಣಿಗೆ ಮತ್ತು ಸಾಮಾಜಿಕ ಪ್ರಗತಿಗೆ ಎಕೆಡಿಎನ್ ಬದ್ಧತೆಯನ್ನು ಶ್ರೀ ಆಗಾ ಖಾನ್ ಅವರು ಪುನರುಚ್ಚರಿಸಿದ್ದಾರೆ. ಅವರು ಭಾರತದ ಪರಿವರ್ತನಾತ್ಮಕ ಅಭಿವೃದ್ಧಿ ಉಪಕ್ರಮಗಳನ್ನು ಶ್ಲಾಘಿಸಿದ್ದಾರೆ ಹಾಗೂ ಮಾನವ ಕಲ್ಯಾಣ ವರ್ಧಿಸುವಲ್ಲಿ ನಾವೀನ್ಯತೆಯ ಪಾತ್ರದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 

*****