ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಆಫ್ರಿಕಾದ ಏಷ್ಯಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ಎ.ಎ.ಆರ್.ಡಿ.ಓ.)ನಡುವೆ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸಮರ್ಥ್ಯ ವರ್ಧನೆ ಕಾರ್ಯಕ್ರಮಗಳಿಗಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದವು 2015-17ನೇ ಸಾಲಿನ ಮೂರುವರ್ಷಗಳದಾಗಿದ್ದು, ಈ ಒಪ್ಪಂದಕ್ಕೆ ಎ.ಎ.ಆರ್.ಡಿ.ಓ ಸದಸ್ಯ ರಾಷ್ಟ್ರಗಳು ಈ ಮೂರು ವರ್ಷದ ಅವಧಿಯಲ್ಲಿ ಪ್ರತಿ ವರ್ಷ ಭಾರತದಲ್ಲಿನ ವಿವಿಧ ತಜ್ಞ ಸಂಸ್ಥೆಗಳಲ್ಲಿ ಅಂದರೆ, ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ (ಎನ್.ಐ.ಆರ್.ಡಿ.) ಮತ್ತು ಪಿ.ಆರ್) ಸರ್ಕಾರದ ಆಡಳಿತಕ್ಕೊಳಪಟ್ಟ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐ.ಸಿ.ಎ.ಆರ್.) ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಮತ್ತು ಇತರ ಸಂಸ್ಥೆಗಳಲ್ಲಿ ಸಾಮರ್ಥ್ಯ ವರ್ಧನೆ ಕಾರ್ಯಕ್ರಮ ರೂಪಿಸುವ ಸಲುವಾಗಿ ಅಂಕಿತ ಹಾಕಲಾಗಿದೆ. ಎನ್.ಐ.ಆರ್.ಡಿ ಮತ್ತು ಪಿ.ಆರ್.ನಲ್ಲಿ ಈ ಯೋಜನೆಯಡಿ ಒಂದು ವರ್ಷದ ಗ್ರಾಮೀಣಾಭಿವೃದ್ಧಿ ನಿರ್ವಹಣೆಯ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಬರುತ್ತದೆ.
ಹಿನ್ನೆಲೆ:
ದೆಹಲಿಯಲ್ಲಿ ಪ್ರಧಾನಕಚೇರಿ ಹೊಂದಿರುವ ಎ.ಎ.ಆರ್.ಡಿ.ಓ. ಒಂದು ಸ್ವಾಯತ್ತ, ಅಂತರ ಸರ್ಕಾರೀಯ ಸಂಸ್ಥೆಯಾಗಿದ್ದು, ಆಫ್ರಿಕಾ- ಏಷ್ಯಾ ವಲಯದಲ್ಲಿ ಬಾಯಾರಿಕೆ, ಹಸಿವು, ಅನಕ್ಷರತೆ, ರೋಗ ಮತ್ತು ಬಡತನ ನಿರ್ಮೂಲನೆ ಮಾಡುವ ಉದ್ದೇಶದೊಂದಿಗೆ 1962ರಲ್ಲಿ ಸ್ಥಾಪನೆಯಾಯಿತು. ಭಾರತವು ಈ ಸಂಸ್ಥೆಯ ಸ್ಥಾಪಕ ರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು 141,100 ಅಮೆರಿಕನ್ ಡಾಲರ್ ಗಳ ಸದಸ್ಯತ್ವ ಕೊಡುಗೆ ನೀಡಿದ ದೊಡ್ಡ ಕೊಡುಗೆದಾರನಾಗಿದೆ. ಇದರ ಜೊತೆಗೆ ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮ (ಐ.ಟಿ.ಇ.ಸಿ.) ಯೋಜನೆ ಅಡಿ ಸಂಸ್ಥೆಗೆ 70 ಪೂರ್ಣ ಪ್ರಮಾಣದ ಪಾವತಿಯ ವಿದ್ಯಾರ್ಥಿವೇತನ ನೀಡಿದೆ. ಎ.ಎ.ಆರ್.ಡಿ.ಓ. ಸಚಿವಾಲಯಕ್ಕೆ ದೆಹಲಿಯಲ್ಲಿ ಕಟ್ಟಡವನ್ನೂ ಒದಗಿಸಿದೆ ಮತ್ತು ಕಟ್ಟಡದ ನಿರ್ವಹಣೆಗಾಗಿ ಗಣನೀಯ ಪ್ರಮಾಣದ ಆರ್ಥಿಕ ನೆರವೂ ನೀಡಿದೆ. ಎ.ಎ.ಆರ್.ಡಿ.ಓ.ದಲ್ಲಿ ಆಫ್ರಿಕಾ-ಏಷ್ಯಾ ವಲಯದ ಪ್ರಸ್ತುತ 31 ರಾಷ್ಟ್ರಗಳಿವೆ.
2009ರಿಂದ, ಭಾರತವು ಎ.ಎ.ಆರ್.ಡಿ.ಓ. ಸದಸ್ಯ ರಾಷ್ಟ್ರಗಳ ಅನುಕೂಲಕ್ಕಾಗಿ ಅದರ ಸಾಮರ್ಥ್ಯವರ್ಧನೆ ಕಾರ್ಯಕ್ರಮದ ಸ್ವರೂಪ ಮತ್ತು ದರ್ಜೆಯ ವಿಸ್ತರಣೆಗಾಗಿ ಹೆಚ್ಚುವರಿಯಾಗಿ600,000ಅಮೆರಿಕನ್ ಡಾಲರ್ ಗಳನ್ನು ಎ.ಎ.ಆರ್.ಡಿ.ಓ.ಗೆ 2009-11ರ ಮೂರು ವರ್ಷದ ಅವಧಿಗೆ ನೀಡಿದೆ.
AKT/VBA/SH