Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವ ಸಂದರ್ಭವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಡಿಜಿಟಲ್ ಪ್ರದರ್ಶನದ ಉದ್ಘಾಟನೆ

ಚಂಪಾರಣ್  ಸತ್ಯಾಗ್ರಹದ ಶತಮಾನೋತ್ಸವ ಸಂದರ್ಭವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಡಿಜಿಟಲ್ ಪ್ರದರ್ಶನದ ಉದ್ಘಾಟನೆ

ಚಂಪಾರಣ್  ಸತ್ಯಾಗ್ರಹದ ಶತಮಾನೋತ್ಸವ ಸಂದರ್ಭವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಡಿಜಿಟಲ್ ಪ್ರದರ್ಶನದ ಉದ್ಘಾಟನೆ


ನಾವಿಂದು ಇಪ್ಪತ್ತನೇ ಶತಮಾನದ ಮಹಾನ್ ಘಟನಾಕ್ರಮದ ಶುಭಾರಂಭಮಾಡುವುದಕ್ಕಾಗಿ ಇಲ್ಲಿ ಸೇರಿದ್ದೇವೆ. ಭಗವಾನ್ ಬುದ್ದನ ಪ್ರವಚನದ ಆಶೀರ್ವಾದ ದೊರಕಿದ್ದ , ಸೀತಾಮಾತೆಯ ತಂದೆಯಾದ ಜನಕಮಹಾರಾಜನ ರಾಜ್ಯದ ಒಂದು ಭಾಗವಾಗಿದ್ದ ಈ ಪ್ರದೇಶದ ಜನತೆ ಅಸಹಾಯ ಸ್ಥಿತಿಯಲ್ಲಿದ್ದರು. 100ವರ್ಷಗಳ ಹಿಂದೆ ಇಂದಿನ ದಿನವೇ ಗಾಂಧೀಜಿ ಪಾಟ್ನಾ ತಲುಪಿ ಪ್ರದೇಶದ ಜನತೆಯ ದಾರುಣ ಸ್ಥಿತಿಯನ್ನು ಕಂಡರು, ಚಂಪಾರಣದ ರೈತರಿಗೆ,ಶೋಷಿತರಿಗೆ,ಪೀಡಿತರಿಗೆ ದಾರಿ ತೋರಿಸಿ ಪರಿಹಾರ ಕೊಡಿಸಿಕೊಟ್ಟಿದ್ದರ ಜತೆಗೆ ಸಂಪೂರ್ಣ ದೇಶಕ್ಕೆ ಸತ್ಯಾಗ್ರಹವನ್ನು ಪರಿಚಯಿಸಿಕೊಟ್ಟರು.

ಮಿತ್ರರೇ, ನಮ್ಮ ದೇಶದ ಇತಿಹಾಸ ಕೆಲವು ವ್ಯಕ್ತಿಗಳಿಗಾಗಲಿ, ಕೆಲವು ಕುಟುಂಬಗಳಿಗಾಗಲಿ ಸೀಮಿತವಾಗಿರಲಿಲ್ಲ. ನಮ್ಮ ದೇಶದ ಇತಿಹಾಸ ದೊಡ್ಡದು, ಬೇರೆ- ಬೇರೆ ಸಂದರ್ಭ ಹಾಗೂ ಕಾಲಘಟ್ಟಗಳಲ್ಲಿ ಮತ್ತೆ- ಮತ್ತೆ ನಮ್ಮ ಮುಂದೆ ತೆರೆದುಕೊಂಡು ನಿತ್ಯ ನೂತನವಾಗಿ ಕೂಡಿತ್ತು. ಇತಿಹಾಸದ ಪುಟಗಳನ್ನು ಮತ್ತೆ- ಮತ್ತೆ ತೆರೆದಾಗಲೆಲ್ಲ ನಮಗೆ ಇನ್ಯಾವುದೋ ಹೊಸ ಪರಿಚಯ ನೀಡುತ್ತಿರುತ್ತದೆ, ಇದನ್ನು ಪಾರಸಸ್ಪರ್ಶ ಎನ್ನುತ್ತಾರೆ, ಚಂಪಾರಣದ ಸತ್ಯಾಗ್ರಹ ಇಂಥದ್ದೇ ಒಂದು ಪಾರಸಮಣಿ. ಆದ್ದರಿಂದ ಇಂತಹ ಐತಿಹಾಸಿಕ ವಿಷಯಗಳನ್ನು ತಿಳಿದುಕೊಂಡು ಅದರ ಮಹತ್ವದೊಡನೆ ನಮ್ಮನ್ನು ನಾವು ಸಮೀಕರಿಸಿಕೊಂಡು ಅದರಲ್ಲೇ ಬದುಕುವ ಪ್ರಯತ್ನಮಾಡುವುದು ಅತ್ಯಗತ್ಯ.

ಈಗ ಇಲ್ಲಿ ಒಂದು ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಆನ್ಲೈನ್ ಇಂಟರಾಕ್ಚೀವ್ ಕ್ವಿಝ್ ಅನ್ನು ಆರಂಭಿಸಲಾಯಿತು.
ನೃತ್ಯನಾಟಕವನ್ನು ಪ್ರಸ್ತುತಪಡಿಸಲಾಯಿತು. ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮದ ಆಯೋಜನೆ ಕೇವಲ ಔಪಚಾರಿಕತೆಗಲ್ಲ. ಇದು ಬಾಪೂರವರ ಆದರ್ಶಗಳಿಂದ ಪ್ರೇರಿತಗೊಂಡು ದೇಶ-ಹಿತಕ್ಕಾಗಿ ಏನು ಬೇಕಾದರೂ ಮಾಡುವೆನೆಂಬ ಸ್ವಯಂಸಂಕಲ್ಪ ಮಾಡುವ, ಸಮರ್ಪಣೆಮಾಡಿಕೊಳ್ಳಲು ನಮಗೆ ದೊರೆತಿರುವ ಪವಿತ್ರ ಅವಕಾಶ.

ಸ್ನೇಹಿತರೇ, ನಾವು ಈಗ ಮಹಾತ್ಮಗಾಂಧಿಯವರಿಗೆ ಶ್ರದ್ದಾಂಜಲಿಯ ಜೊತೆ ಕಾರ್ಯಂಜಲಿಯನ್ನೂ ಸಮರ್ಪಿಸಬೇಕಾಗಿದೆ. ಇದಕ್ಕೆ ನಮ್ಮ ಬಳಿ ಇರುವ ಅತಿ ದೊಡ್ಡ ಮಾಧ್ಯಮ – ಸ್ವಚ್ಛಾಗ್ರಹ. ಸತ್ಯಕ್ಕೆ ಹೋರಾಡಿದಂತೆ ಸ್ವಚ್ಛತೆಗಾಗಿಯೂ ಹೋರಾಟನಡೆಸಬೇಕು.

ಮಿತ್ರರೇ, 1917ರಲ್ಲಿ , ಗಾಂಧೀಜಿ ಚಂಪಾರಣಕ್ಕೆ ಹೋದಾಗ ಅವರಿಗೆ ಅಲ್ಲಿ ಬಹಳ ದಿನ ತಂಗುವ ಆಲೋಚನೆಯಿರಲಿಲ್ಲ, ಆಗ ಅವರಿಗೆ ಚಂಪಾರಣದ ಪರಿಸ್ಥಿತಿಯ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆದರೆ ಇಲ್ಲಿಗೆ ಬಂದನಂತರ ಕೆಲವು ವಾರಗಳಲ್ಲ ಅನೇಕ ತಿಂಗಳು ಇಲ್ಲಿ ಇರಬೇಕಾಯಿತು. ಈ ಚಂಪಾರಣವೇ ಅವರನ್ನು ಮೋಹನದಾಸ ಕರಮಚಂದಗಾಂಧಿಯಿಂದ ಮಹಾತ್ಮಗಾಂಧಿಯನ್ನಾಗಿ ಮಾಡಿದ್ದು. ಚಂಪಾರಣಕ್ಕೆ ತಲುಪುವ ಮುನ್ನ ಅವರಿಗೆ ಸತ್ಯಾಗ್ರಹದ ತಾಕತ್ತಿನ ಬಗೆಗೆ ತಿಳಿದಿತ್ತು. ಆದರೆ ಸತ್ಯಾಗ್ರಹಿಯಾದ ಮಾತ್ರಕ್ಕೆ ಬಯಸಿದ ಪರಿಣಾಮ ದೊರಕದು ಎಂಬುದೂ ಅವರಿಗೆ ತಿಳಿದಿತ್ತು.ದೇಶದ ಜನತೆಗೆ ಸತ್ಯಾಗ್ರಹದ ಪರಿಚಯ ಮಾಡಿಸಲು ಬಯಸಿದರು .

ಮ್ಯಾಜಿಸ್ಟ್ರೇಟರು ಚಂಪಾರಣವನ್ನು ಬಿಟ್ಟು ಹೊರಡಲು ಆದೇಶಿಸಿದಾಗ ಅವರು ಈ ಆದೇಶವನ್ನು ತಿರಸ್ಕರಿಸಿ ನ್ಯಾಯಾಲಯವನ್ನು ನಾನು ಅವಮಾನಿಸುವಂತಿಲ್ಲ , ಆದರೆ ನನ್ನ ಅಂತರಾತ್ಮದ ಕೂಗು ಹಾಗೂ ನನ್ನ ಅಸ್ತಿತ್ವದ ಆತ್ಮಸಮ್ಮಾನಕ್ಕಾಗಿ ಹೀಗೆ ಮಾಡಬೇಕಾಗಿದೆ ಎಂದಿದ್ದರು. ಸಂಪೂರ್ಣ ಆಂಗ್ಲ ಆಡಳಿತ ಗಾಂಧೀಜಿಯವರ ಈ ತೀರ್ಮಾನದಿಂದಾಗಿ ಹಿಂದಡಿಯಿಡಬೇಕಾಯಿತು. ಗಾಂಧೀಜಿಯವರು ಜೈಲಿಗೆ ಹೋಗಲು ತಯಾರಾಗಿದ್ದೇನೆ ಎಂದಾಗ ಆಂಗ್ಲರು ತಬ್ಬಿಬ್ಬಾದರು. ಜನತೆ ದಕ್ಷಿಣ ಆಫ್ರಿಕದಿಂದ ಹಿಂತಿರುಗುದ ಒಬ್ಬ ವಕೀಲ ಚಂಪಾರಣಕ್ಕೆ ಬಂದು ಜೈಲಿಗೆ ಹೋಗಲು ತಯಾರಾಗಿದ್ದನು. ಎಷ್ಟೊಂದು ಬಿಸಿಲಲ್ಲಿ ಒಮ್ಮೆ ಎತ್ತಿನಗಾಡಿಯಲ್ಲಿ, ಮತ್ತೊಮ್ಮೆ ರಿಕ್ಷಾ, ಒಮ್ಮೊಮ್ಮೆ ಕಾಲ್ನಡಿಗೆಯಲ್ಲೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಗಾಂಧೀಜಿ ನಡೆದೇ ಹೋಗತೊಡಗಿದರು.

ಗಾಂಧೀಜಿ ಈಗ ಜನರ ಆಲೋಚನಾ ಪ್ರಕ್ರಿಯೆಯನ್ನುಜಾಗೃತಗೊಳಿಸುವ ಕಾರ್ಯ ಮಾಡುತ್ತಿದ್ದರು.ಅಫೀಮಿನ ವ್ಯವಸಾಯ ಮಾಡುವ ರೈತರಿಂದ ಹೇಳಿಕೆಗಳನ್ನು ಪಡೆಯಲಾಗುತ್ತಿತ್ತು ಮತ್ತು ಅವರನ್ನು ಪರೀಕ್ಷಿಸಲಾಗುತ್ತಿತ್ತು.ಆದರೆ ಗಾಂಧೀಜಿ ಈ ಕೆಲಸದಲ್ಲಿ ತಮ್ಮನ್ನು ತಾವೇ ಸಮರ್ಪಿಸಿಕೊಂಡು, ಅವರೆಲ್ಲರ ಒಡನಾಡಿಯಾಗಿ ಸ್ವ ಉಧಾಹರಣೆಗಳನ್ನು ನೀಡುತ್ತಾ ಜನರ ಶಕ್ತಿಯನ್ನು ಪರಸ್ಪರ ಜೋಡಿಸುವ ಕಾರ್ಯ ಮಾಡುತ್ತಲಿದ್ದರು.

ಗಾಂಧೀಜಿ “ ನನ್ನ ಜೀವನವೇ ನನ್ನ ದರ್ಶನ “ಎನ್ನುತ್ತಿದ್ದರು. ಇದನ್ನು ನಾವು ಚಂಪಾರಣದಲ್ಲಿ ಕಾಣುತ್ತೇವೆ.ಹೇಗೆ ಜನರಿಗೆ ತಮ್ಮೊಳಗಿನ ಶಕ್ತಿಯ ಅರಿವು ಮೂಡತೊಡಗಿತು ಹಾಗೂ ಬದಲಾವಣೆಯಾಗಬಹುದು, ಪರಿವರ್ತನೆಯಾಗಬಹುದು ಎನ್ನುವ ಭಾವನೆಗಳೂ ಉಂಟಾಗತೊಡಗಿದವು ಎಂದು ಗಾಂಧೀಜಿ ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ. 100 ವರ್ಷಗಳಿಂದ ನಡೆದು ಬಂದಿದ್ದ ಮೂರು ಕಠಿಣ ಕಾನೂನುಗಳನ್ನು ರದ್ದು ಮಾಡುತ್ತಿದ್ದಂತಯೇ ಆಫೀಮಿನ ಬೆಳೆ ಬೆಳೆಸುತ್ತಿದ್ದ ಆಂಗ್ಲರ ಸಾಮ್ರಾಜ್ಯವು ಅಸ್ತಂಗತವಾಯಿತು.ಯಾವ ಸಮುದಾಯದ ಜನತೆಯನ್ನು ಅವರು ತುಳಿದಿಟ್ಟಿದ್ದರೋ ಆ ಜನಗಳಿಗೆ ತಮ್ಮೊಳಗಿನ ಶಕ್ತಿಯ ಅರಿವು ಮೂಡತೊಡಗಿತು. ಜನರಲ್ಲಿ ಆಫೀಮು ಬೆಳೆದ ಪಾಪ ಯಾವ ಪ್ರಾಯಶ್ಚಿತ್ತಕ್ಕೂ ಹೋಗದು ಎಂಬ ಭಾವನೆ ಉಂಟಾಯಿತು.

ನಮ್ಮಿಂದ ಇನ್ನೇನೂ ಆಗದು,ಇಲ್ಲಿ ಯಾವ ಪರಿವರ್ತನೆಯೂ ಉಂಟಾಗದು ಎನ್ನುವ ಭಾವನೆ ಜನರಲ್ಲಿತ್ತು,ಇದನ್ನು . ಗಾಂಧೀಜಿ ಭ್ರಮೆಯೆಂದು ಕರೆದಿದ್ದಾರೆ. ಈ ಭ್ರಮೆಯನ್ನು ಹೋಗಲಾಡಿಸಿ ಜನತೆಗೆ ಅವರಲ್ಲಿರುವ ಶಕ್ತಿಯ ಪರಿಚಯ ಮಾಡಿಸಿದರು.

ಸಹೋದರ ಸಹೋದರಿಯರೇ , ಗಾಂಧೀಜಿ ಮೂಲತಃ ಸ್ವಚ್ಛಾಗ್ರಹಿಯಾಗಿದ್ದರು. ಅವರ ಸ್ವಚ್ಛತೆ ಸ್ವಾತಂತ್ರ್ಯಕ್ಕಿಂತ ಹೆಚ್ಚು ಮಹತ್ವವಾದದ್ದು ಎನ್ನುತ್ತಿದ್ದರು. ಹಳ್ಳಿಯಲ್ಲಿ ಜನರು ಅಜ್ಞಾನ ಹಾಗೂ ಉದಾಸೀನತೆಯಿಂದ ಕೊಳಕು ಮತ್ತು ಕಸಗಳ ಮಧ್ಯೆ ಬದುಕುವುದನ್ನು ನೋಡಿ ತುಂಬಾ ದು:ಖಿಸುತ್ತಿದ್ದರು. 1917 ರಲ್ಲೇ ಕಾರ್ಯಕ್ರಮವೊಂದರಲ್ಲಿ ಪೂಜ್ಯ ಬಾಪೂರವರು “ ಎಲ್ಲಿಯವರೆಗೆ ನಾವು ನಮ್ಮ ಹಳ್ಳಿ ಯಲ್ಲಿ ಹಾಗೂ ನಗರಗಳಲ್ಲಿ ಶೌಚಾಲಯವನ್ನು ಕಟ್ಟಿಸಿ ಪರಿಸ್ಥಿತಿಯನ್ನು ಸುಧಾರಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಸ್ವರಾಜ್ಯಕ್ಕೆ ಯಾವ ಮಹತ್ವವೂ ಇರುವುದಿಲ್ಲ “ ಎಂದಿದ್ದರು.

ಒಂದುರೀತಿಯಲ್ಲಿ ಹೇಳುವುದಾದರೆ ಸ್ವಚ್ಛತೆಯ ಆಂದೋಲನ ಚಂಪಾರಣದಲ್ಲಿಯ ಆರಂಭವಾಯಿತೆನ್ನಬಹುದು.ಅವರು ಶುದ್ಧತೆ ಹಾಗೂ ಸ್ವಚ್ಛತೆಯನ್ನು ಗಾಂಧಿವಾದಿ ಜೀವನದ ಅಭಿನ್ನ ಅಂಗವಾಗಿ ಬೆಳೆಸಿದರು.ಎಲ್ಲರಿಗೂ ಸಂಪೂರ್ಣ ಸ್ವಚ್ಛತೆ ದೊರೆಯಬೇಕೆಂಬುದು ಅವರ ಕನಸಾಗಿತ್ತು.

ನಾವು ಇದನ್ನು ಸೂಕ್ಷ್ಮವಾಗಿ ಯೋಚಿಸಿ ನೋಡಿದರೆ ಗಾಂಧೀಜಿ ಚಂಪಾರಣದಲ್ಲಿ ನಡೆಸಿದ ಈ ಆಂದೋಲನ ಐದು ಪ್ರತ್ಯೇಕ ಅಮೃತಗಳನ್ನು ದೇಶಕ್ಕೆ ನೀಡಿದರು. ಈ ಪಂಚಾಮೃತಗಳು ಇಂದಿಗೂ ಅಷ್ಟೇ ಮಹತ್ವಪೂರ್ಣ. ಅವು ಯಾವುವು ಎಂದರೆ:

ಮೊದಲ ಅಮೃತ – ಜನತೆಗೆ ಸತ್ಯಾಗ್ರಹದ ತಾಕತ್ತಿನ ಪರಿಚಯವಾಯಿತು.

ಎರಡನೆ ಅಮೃತ – ಜನಶಕ್ತಿಯ ತಾಕತ್ತಿನ ಪರಿಚಯವಾಯಿತು.

ಮೂರನೆ ಅಮೃತ – ಸ್ವಚ್ಛತೆ ಮತ್ತು ಶಿಕ್ಷಣದ ಬಗ್ಗೆ ಭಾರತೀಯ ಜನರಲ್ಲಿ ಹೊಸ ಜಾಗೃತಿ ಉಂಟಾಯಿತು.

ನಾಲ್ಕನೆ ಅಮೃತ – ಮಹಿಳೆಯರ ಸ್ಥಿತಿ ಸುಧಾರಿಸತೊಡಗಿತು

ಐದನೆ ಅಮೃತ – ತಮ್ಮ ಕೈಯಿಂದ ನೂಲು ತೆಗೆದು ತಯಾರಾದ ಬಟ್ಟೆ ಧರಿಸುವ ಪ್ರಯತ್ನ ನಡೆಯಿತು.

ಸ್ನೇಹಿತರೇ, ನಾನು ಚಂಪಾರಣದ ಬಗೆಗೆ ಮಾತನಾಡುವಾಗ ನನಗೆ ಬಾಲಮೋಹನ ಅಂದರೆ ಬಾಲಕೃಷ್ಣನ ನೆನಪು ಆಗುತ್ತಿದೆ. ಮೋಹನನಿಂದ ಮೋಹನನವರೆಗೆ ಇದೆಂಥಾ ಯಾತ್ರೆ ; ಒಬ್ಬ ಚಕ್ರಧಾರಿ ಮೋಹನ, ಮತ್ತೊಬ್ಬ ಚರಕಾಧಾರಿ ಮೋಹನ. ತಾಯಿ ಯಶೋಧೆ ತನ್ನ ಮಗ ಮಣ್ಣು ತಿನ್ನುವನಲ್ಲಾ ಎಂದು ವ್ಯಾಕುಲಳಾಗಿದ್ದಳು, ಅದೇ ಕಕ್ಕುಲಾತಿಯಿಂದ ಬಾಯಿ ತೆರೆಯೆಂದಾಗ ಅಮ್ಮನಿಗೆ ಬಾಯಲ್ಲಿ ಬ್ರಹ್ಮಾಂಡದರ್ಶನ ಮಾಡಿಸಿ ತಂದೆತಾಯಿಗಳನ್ನು ಚಿಂತೆಯಿಂದ ಮುಕ್ತಿ ಗೊಳಿಸಿದನು. ನಾನು ಚಂಪಾರಣದ ಬಗೆಗೆ ಮಾತನಾಡುವಾಗ ನನಗೆ ಕಿಶೋರ ಮೋಹನ ಅಂದರೆ ಯುವಕ ಮೋಹನ ಕೂಡ ನೆನಪಾಗುತ್ತಾನೆ. ಆಗ ನಾವು ಅವನನ್ನು ಕೃಷ್ಣನ ರೂಪದಲ್ಲಿ ನೋಡುತ್ತೇವೆ, ಅವನ ಲೀಲೆಗಳೆಷ್ಟೋ ರಾಸಲೀಲೆ ಆಡುತ್ತಿದ್ದ, ಕೊಳಲೂದುತ್ತಿದ್ದ. ಯುವ ಮೋಹನ ಜೋರು ಮಳೆ ಸುರಿಯುವಾಗ ಹಳ್ಳಿಯವರ ರಕ್ಷಣೆಗಾಗಿ ಗೋವರ್ಧನ ಪರ್ವತವನ್ನೇ ಎತ್ತಿ ಹಿಡಿದು ಹಳ್ಳಿಯ ಇತರ ಜನರನ್ನು ನೀವೂ ನಿಮ್ಮ ನಿಮ್ಮ ಕೋಲುಗಳನ್ನು ಹಿಡಿದು ನಿಲ್ಲಿರಿ ಆಗ ಗೋವರ್ಧನ ಪರ್ವತವು ಮೇಲೆದ್ದು ನಿಲ್ಲುತ್ತದೆ ಎಂದಿದ್ದ. ಗೋವರ್ಧನ ಪರ್ವತವು ಮೇಲೆದ್ದು ನಿಂತೊಡನೆ ಅಲ್ಲಿದ್ದ ಪ್ರತಿಯೊಬ್ಬನಿಗೂ ನನ್ನ ಕೋಲಿಂದಲೇ ಪರ್ವತವು ಮೇಲೆದ್ದು ನಿಂತಿದೆ ಎನಿಸುತಿತ್ತು. ಹೀಗೆ ಕಿಶೋರ ಮೋಹನನು ಜನತೆಗೆ ಸಾಮೂಹಿಕ ಶಕ್ತಿಯ ಪರಿಚಯ ಮಾಡಿಕೊಟ್ಟಿದ್ದನು.

ಇದೇ ರೀತಿ ನಮ್ಮ ಮೋಹನ, ಮಹಾತ್ಮ ಗಾಂಧಿಯು ಜನರನ್ನು ಗುಲಾಮಗಿರಿಯ ಚಿಂತೆಯಿಂದ ಮುಕ್ತಿ ಗೊಳಿಸಿದರು. ಸ್ವಾತಂತ್ರ್ಯ ಪಡೆಯುವ ದಾರಿ ತೋರಿಸಿದರು. ಜನಶಕ್ತಿಯನ್ನು ಜಾಗೃತಗೊಳಿಸಿದರು. ಸತ್ಯಾಗ್ರಹದಿಂದ ಸ್ವಚ್ಛಾಗ್ರಹದ ಶಕ್ತಿಯ ಪರಿಚಯ ಮಾಡಿದರು.

ಜನಶಕ್ತಿಯನ್ನು ಜಾಗೃತಿಯ ಈ ಅಭಿಯಾನದಲ್ಲಿ ಬಾಪೂ ಮಹಿಳೆಯರಿಗೂ ಸಮಾನ ಅವಕಾಶನೀಡಿ ಸಹಭಾಗಿಗಳನ್ನಾಗಿ ಮಾಡಿದರು. ಚಂಪಾರಣದಲ್ಲೂ ಮಹಿಳೆಯರ ಸ್ಥಿತಿಯು ಅವರನ್ನು ನಾವ್ಯಾಕೆ ನಮ್ಮ ಕೈಯಿಂದ ನೂಲು ತೆಗೆದು ಬಟ್ಟೆ ತಯಾರಿಸಬಾರದು ಎಂದು ಯೋಚಿಸುವಂತೆ ಮಾಡಿತು. ಅವರು ಇದನ್ನು ಸಶಕ್ತೀಕರಣದ ಒಂದು ಮಾಧ್ಯಮ ಎಂದುಕೊಂಡರು. ಖಾದಿಯ ವಿಕಾಸದ ಹಿಂದೆ ಮಹಾತ್ಮ ಗಾಂಧಿಯ ಚಂಪಾರಣದ ಪ್ರವಾಸ ಬಹಳ ದೊಡ್ಡ ಕಾರಣವೆನ್ನಬಹುದು.

ಸ್ನೇಹಿತರೇ. ಸತ್ಯಾಗ್ರಹದಿಂದ ಗಾಂಧಿಜೀ ಯವರ ನೇತೃತ್ವದಿಂದ ನಮಗೆ ಸ್ವಾತಂತ್ರ್ಯವೇನೋ ದೊರಕಿತು. ಆದರೆ ಮಹಾತ್ಮ ಗಾಂಧಿಯವರ ಸ್ವಚ್ಛಭಾರತದ ಕನಸು ಅಪೂರ್ಣವಾಗಿಯೇ ಉಳಿಯಿತು. ಎಪ್ಪತ್ತು ವರ್ಷಗಳಾದರೂ ನಮಗೆ ಈ ಪೀಡೆಯಿಂದ ಮುಕ್ತಿ ದೊರೆತಿಲ್ಲ. 2014ರಲ್ಲಿ ನಾನು ಕೆಂಪುಕೋಟೆಯಿಂದ ಮನೆಮನೆಗೂ ಶೌಚಾಲಯದ ಬಗ್ಗೆ ಮಾತಾಡಿದಾಗ ನಾನು ಹೀಗೇಕೆ ಮಾತನಾಡುತ್ತಿದ್ದೇನೆ ಎಂದು ಜನರು ದಿಗ್ಭ್ರಾಂತರಾದರು.

ಸ್ನೇಹಿತರೇ, ಸ್ವಚ್ಛಭಾರತ ಮಿಶನ್ ಮಹಾತ್ಮ ಗಾಂಧಿಯವರ ಅಪೂರ್ಣ ಕನಸನ್ನು ನನಸಾಗಿಸುವ ಅಭಿಯಾನ. ಈ ಕನಸು ಸುಮಾರು 100 ವರ್ಷಗಳಿಂದಲೂ ಅಪೂರ್ಣವಾಗಿಯೇ ಉಳಿದಿದೆ. ಈಗ ಜನತೆ ಸ್ವಚ್ಛಭಾರತ ಮಿಷನ್ ಮೂಲಕ ಗಾಂಧಿಜೀ ಅವರ ಕನಸನ್ನು ನನಸುಗೊಳಿಸಲು ದೇಶದ ಜನತೆ ಎದ್ದುನಿಂತಿರು ವುದು ನನಗೆ ತುಂಬಾ ಖುಷಿ ತಂದಿದೆ. ಸ್ವಚ್ಛಭಾರತ ಮಿಷನ್ ಒಂದು ರೀತಿ ಜನಾಂದೋಲನವಾಗಿ ಬಿಟ್ಟಿದೆ. ಸಮಾಜದ ಪ್ರತಿಯೊಬ್ಬನೂ ಈ ಸ್ವಚ್ಛಾಗ್ರಹ ದೊಡನೆ ಸಮ್ಮಿಲಿತನಾಗಿದ್ದಾನೆ. ಈ ಸ್ವಚ್ಛಭಾರತ ಅಭಿಯಾನ ಆರಂಭಗೊಂಡಾಗ ಕೇವಲ ಶೇಕಡ 42 ರಷ್ಚು ಗ್ರಾಮೀಣ ಜನ ಶೌಚಾಲಯದ ಬಳಕೆ ಮಾಡುತ್ತಿದ್ದರು. ಈಗ ಇದು ಶೇಕಡ 63ಕ್ಕೆ ತಲುಪಿದೆ.

ಕಳೆದ ಎರಡೂವರೆ ವರ್ಷದಲ್ಲಿ 80ಸಾವಿರಕ್ಕೂ ಹೆಚ್ಚು ಹಳ್ಳಿಗಳನ್ನು ಮತ್ತು 130 ಜಿಲ್ಲೆಗಳು ಬಯಲು ಶೌಚಾಲಯ ಮುಕ್ತವೆಂದು ಘೋಷಿತಗೊಂಡಿವೆ.ಈಗ ರಾಜ್ಯಗಳ ನಡುವೆ ಯಾರು ಮೊದಲು ತಮ್ಮನ್ನು ತಾವು ಬಯಲು ಶೌಚಾಲಯ ಮುಕ್ತರಾಜ್ಯವೆಂದು ಘೋಷಿಸಿಕೊಳ್ಳುವವೆಂಬ ಸ್ಪರ್ಧಾತ್ಮಕ ವಾತಾವರಣ ಮೂಡಿದೆ.

ಇಂದಿನ ಪರಿಸ್ಥಿತಿಯಲ್ಲಿ ಸಿಕ್ಕಿಮ್,ಹಿಮಾಚಲಪ್ರದೇಶ ಮತ್ತು ಕೇರಳ ಸಂಪೂರ್ಣವಾಗಿ ಬಯಲು ಶೌಚಾಲಯ ಮುಕ್ತರಾಜ್ಯವೆಂದು ಎಂದು ಘೋಷಿಸಿಕೊಂಡಿವೆ ಎಂದು ಹೇಳುವಾಗ ನನಗೆ ತುಂಬಾ ಸಂತೋಷವಾಗುತ್ತಿದೆ. ಗುಜರಾತ್,ಹರಿಯಾಣ,ಉತ್ತರಾಖಂಡ ಇತ್ಯಾದಿ ರಾಜ್ಯಗಳು ಬಯಲು ಶೌಚಾಲಯ ಮುಕ್ತರಾಜ್ಯವೆಂದು ಘೋಷಿಸಿಕೊಳ್ಳುವ ದಿಕ್ಕಿನಲ್ಲಿ ತ್ವರಿತಗತಿಯಲ್ಲಿ ಮುಂದುವರೆಯುತ್ತಿವೆ. ಬಹಳ ಬೇಗ ನಮಗೆ ಶುಭ ಸಮಾಚಾರ ದೊರೆಯಲಿದೆ.

ಗಂಗಾತೀರದ ಹಳ್ಳಿಗಳನ್ನು ಆದ್ಯತೆಯ ಮೇಲೆ ಬಯಲು ಶೌಜಾಲಯ ಮುಕ್ತವನ್ನಾಗಿ ಮಾಡಲಾಗುತ್ತಿದೆ. ಗಂಗೆ ಹರಿದು ಹೋಗುವ ಐದು ಜಿಲ್ಲೆಗಳಾದ ಉತ್ತರಾಖಂಡ,ಉತ್ತರಪ್ರದೇಶ,ಬಿಹಾರ,ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ನದೀತೀರದ ಶೇಕಡ 75 ರಷ್ಚು ಹಳ್ಳಿಗಳು ತಮ್ಮನ್ನು ತಾವು ಬಯಲು ಶೌಚ ಮುಕ್ತವೆಂದು ಘೋಷಿಸಿಕೊಂಡಿವೆ. ಗಂಗಾತೀರದ ಹಳ್ಳಿಗಳಲ್ಲಿನ ಕಸವು ನದಿಯಲ್ಲಿ ಹರಿದು ಹೋಗದಂತೆ ಸಂರಕ್ಷಣಾ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಬಹಳ ಬೇಗ ಗಂಗಾತೀರ ಶೌಚ ಮುಕ್ತವಾಗುವುದೆಂದು ನನಗೆ ಭರವಸೆಯಿದೆ.

ಸಹೋದರ ಸಹೋದರಿಯರೇ , ಇಂದು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಗಂಡುಮಕ್ಕಳಿಗೆ ಮತ್ತು ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳಿವೆ. ಈಗ ಮಕ್ಕಳ ಪಠ್ಯಪುಸ್ತಕದ ಪಾಠ್ಯಕ್ರಮದಲ್ಲಿ ಸ್ವಚ್ಛತೆಯ ಬಗೆಗಿನ ಅಧ್ಯಾಯಗಳನ್ನು ಸೇರಿಸಲಾಗುತ್ತಿದೆ. ಇದರ ಉದ್ದೇಶ ಮಕ್ಕಳಿಗೆ ಆರಂಭದಿಂದ ಇದರ ಒಳಿತು ಕೆಡುಕುಗಳ, ಪರಿಚಯವಾಗಿ ಅವರು ಸ್ವಚ್ಛತೆಯನ್ನು ತಮ್ಮ ಅಭ್ಯಾಸಗಳಲ್ಲಿ ಅಳವಡಿಸಿಕೊಳ್ಳಲೆಂಬುದು ಹಾಗೂ ತಮ್ಮ ಜೀವನದ ಅಂಗವಾಗಿಸಲೆಂಬುದು.

ಸ್ನೇಹಿತರೇ, ಸ್ವಚ್ಛಭಾರತ ಮಿಶನ್ ನಮಗೆ ಕಾರ್ಯಾಂಜಲಿಯ ನೂತನ ಮಂತ್ರವನ್ನು ಬೋಧಿಸಿದೆ . ಅದೇನೆಂದರೆ ಕಸದಿಂದ ರಸ ಮಾಡುವ ಕೆಲಸ . ಮನೆಯಿಂದ ಬಿಸಾಡುವ ಕಸ, ಬ್ಯುಲ್ಡಿಂಗ್ ಕಟ್ಟುವಾಗಿನ ತ್ಯಾಜ್ಯಗಳು ಕೂಡ ಸಂಪಾದನೆಯ ಮಾಧ್ಯಮಗಳಾಗಬಹುದು. ಇವುಗಳಿಂದ ವಿದ್ಯುತ್ ಉತ್ಪಾದನೆಮಾಡಬಹುದು, ಗೊಬ್ಬರ ತಯಾರಿಸಬಹುದು,ಇವುಗಳಲ್ಲಿ ಕೆಲವನ್ನು ಪರಿಕ್ಷರಿಸಿ ಕಟ್ಟಡ ನಿರ್ಮಾಣದಲ್ಲಿ ಪುನರ್ಬಳಸಬಹುದು. ಹೀಗಾಗಿ ಕಸದಿಂದ ರಸ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ನಾವು ಪ್ರಯತ್ನ ಪಡಬೇಕು.

ಸರ್ಕಾರದ ಬೇರೆ-ಬೇರೆ ವಿಭಾಗಗಳೂ ಸಹ ಸ್ವಚ್ಛತೆಯ ಪ್ರಚಾರಕ್ಕಾಗಿ, ಜನರ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ-ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲಿವೆ ಇದರಲ್ಲಿ ತಾಂತ್ರಿಕತೆಯನ್ನೂ ಅಳವಡಿಸಿಕೊಳ್ಳಲಾಗಿದೆ. ರೈಲ್ವೆ ವಿಭಾಗದಲ್ಲಿ ಕೊಳಕಿನ ಬಗೆಗಿನ ಒಂದೊಂದು ಟ್ವೀಟನ್ನೂ ಎಷ್ಟು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂಬುದನ್ನು ನೀವು ಗಮನಿಸುತ್ತಿರಬಹುದು,ಆದರೆ ಮೊದಲು ರೈಲುಬೋಗಿಗಳು ಮತ್ತು ನಿಲ್ದಾಣ ಗಳಲ್ಲಿ ಕೊಳಕು ವ್ಯವಸ್ಥೆಯ ಒಂದು ಅವಿಭಾಜ್ಯಅಂಗವಾಗಿತ್ತೆಂದು ನೀವು ನೋಡಿದ್ದೀರಿ ಅದನ್ನೊಮ್ಮೆ ನೆನಪಿಸಿಕೊಳ್ಳಿ.

ತೀರ ಇತ್ತೀಚೆಗಷ್ಟೇ ಪೆಟ್ರೋಲಿಯಂ ಮಂತ್ರಾಲಯ ಕೂಡ (swachhta @ petrol pump ) ಎಂಬ ಹೆಸರಿನ ಮೊಬೈಲ್ ಆಪ್ ಒಂದನ್ನು ಬಿಡುಗಡೆ ಮಾಡಿದೆ. ಒಂದುವೇಳೆ ಪೆಟ್ರೋಲ್ ಪಂಪುಗಳಲ್ಲಿರುವ ಶೌಚಾಲಯ ಕೊಳಕಾಗಿದ್ದರೆ ತಕ್ಷಣ ಈ ಆಪ್ ನ ಮೂಲಕ ದೂರು ದಾಖಲಿಲಬಹುದು. ದೇಶದ ಸುಮಾರು 55ಸಾವಿರ ಪೆಟ್ರೋಲ್ ಪಂಪುಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ಇದೇ ಸರಣಿಯಲ್ಲಿ ದೆಹಲಿಯಲ್ಲಿ ಒಂದು ರಾಷ್ಟೀಯ ಸ್ವಚ್ಛತಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಇದು ಕೇಂದ್ರ ಸ್ವಚ್ಛತಾ ಅಭಿಯಾನಕ್ಕೆ ಸಂಬಂಧಿಸಿದ ಎಲ್ಲ ತಿಳುವಳಿಕೆ,ಆಧುನಿಕ ತಂತ್ರಜ್ಞಾನವನ್ನು ಜನತೆಗೆ ತಲುಪಿಸುವಲ್ಲಿ ಸಹಕಾರಿಯಾಗಲಿದೆ.

ಸ್ನೇಹಿತರೇ, ವಿಭಿನ್ನ ಮಟ್ಟದಲ್ಲಿ ದಿಲ್ಲಿಯಿಂದ ಹಳ್ಳಿಯವರೆಗೂ ಅಭೂತಪೂರ್ವ ಸ್ವಚ್ಛಾಗ್ರಹದ ಅಭಿಯಾನ ದೇಶದಲ್ಲಿ ಹರಡಿದೆ.ಈಗ ಜನರ ಆಲೋಚನಾಲಹರಿ ಕಸ ಹರಡಬಾರದೆಂಬ ಕಡೆ ಹರಿಯುತ್ತಿದೆ. ಮಕ್ಕಳು ದೊಡ್ಡವರನ್ನು ತಡೆಯುತ್ತಿದ್ದಾರೆ, ದೂರುತ್ತಿದ್ದಾರೆ. ಹೀಗಾಗಿ ಸ್ವಚ್ಛತೆ, ಸ್ವಚ್ಛಾಗ್ರಹದ ಈ ಅಭಿಯಾನವನ್ನು ಮುಂದುವರೆಸಲು ದೂರುವ ಜತೆಜತೆಗೇ ನಾವು ಕೊಳಕು ಮಾಡಬಾರದು,ನಮ್ಮ ಅಕ್ಕಪಕ್ಕದ ಮನೆಗಳು,ಆಫೀಸು,ರಸ್ತೆ,ನಗರಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಭಾವನೆ ಮೂಡಿದೆ.

ಸ್ವಚ್ಛತೆಯ ಬಗೆಗಿನ ಈ ಭಾವನೆಯೇ ಸ್ವಚ್ಛಾಗ್ರಹ ಬಾಪೂರವರಿಗೆ ನೀಡುವ ಕಾರ್ಯಾಂಜಲಿ.

ಸ್ನೇಹಿತರೇ, ಗಾಂಧೀಜಿ ವ್ಯವಸ್ಥೆಯನ್ನಷ್ಟೇ ಅಲ್ಲ ಮೌಲ್ಯ ಪರಿವರ್ತನೆಯನ್ನು ಕೂಡ ಬಯಸುತ್ತಿದ್ದರು. ಅವರು ತಮ್ಮ ಆತ್ಮಕಥೆಯಲ್ಲಿ – “ ಭಾರತವು ತನ್ನನ್ನು ತಾನು ಒಂದು ಶರೀರದರೂಪದಲ್ಲಲ್ಲ ಒಂದು ಆತ್ಮದ ರೂಪದಲ್ಲಿ ಗುರುತಿಸಕೊಳ್ಳಬೇಕಾಗಿದೆ, ಪ್ರತಿ ಶಾರೀರಿಕ ದೌರ್ಬಲ್ಯಗಳನ್ನೂ ಬದಿಗೊತ್ತಿ ಮೇಲೇಳಬಲ್ಲ ಅಮರ ಆತ್ಮದ ರೂಪದಲ್ಲಿ ಎದ್ದು ನಿಂತರೆ ವಿಶ್ವದ ಸಮ್ಮಿಲಿತ ದೈಹಿಕ ಬಲವನ್ನೂ ಮಣಿಸಬಲ್ಲ ಹಾಗೂ ಎದುರಿಸಬಲ್ಲದು” ಇದನ್ನು ನಾನು ಬಯಸುತ್ತೇನೆ ಎಂದು ಉಲ್ಲೇಖಿಸಿದ್ದಾರೆ .

ನಾವು ನಮ್ಮ ದೇಶದ ಆತ್ಮವನ್ನು ಗುರುತಿಸಬೇಕು. ಪರಿವರ್ತನೆ ಸಾಧ್ಯ ಎಂಬ ಆಲೋಚನೆಯೊಡನೆ ಮುಂದುವರೆಯಬೇಕು. ಈ ಆಲೋಚನೆ ನಮ್ಮೊಳಗೆ ಎಷ್ಟರಮಟ್ಟಿಗೆ ದೃಢವಾಗಿರಬಲ್ಲದೋ ಅಷ್ಟರಮಟ್ಟಿಗೆ ನವಭಾರತ ನಿರ್ಮಾಣದ ಬುನಾದಿ ದೃಢ ವಾದೀತು.ನಾವು ಸ್ವಚ್ಛತೆಯ ಧ್ಯೇಯವನ್ನು ಗುರುತಿಸಿ ಗುರಿಮುಟ್ಟುವ ಪ್ರಯತ್ನ ಮಾಡಬೇಕು. ಭಾರತಕ್ಕೆ ಕೊಳಕು ದೇಶವೆಂದೇ ಗುರುತಿಸಿಕೊಂಡು ಇರುವ ಅಗತ್ಯವೇನಿಲ್ಲ. ನಮ್ಮ ದೇಶ ಸ್ವಚ್ಛವೇ ಆಗದಿರುವಂತಹ ಕಾರಣವೂ ಏನಿಲ್ಲ. ಈ ಸ್ವಚ್ಛಾಗ್ರಹ ಅಭಿಯಾನವನ್ನು ಪೂರ್ತಿಗೊಳಿಸದಂತೆ ಮಾಡುವ ಕಾರಣವೇನಿಲ್ಲ. ಮಹಾತ್ಮ ಗಾಂಧಿಯವರ ಸ್ವಚ್ಛ, ಸ್ವಸ್ಥ, ಸುಖೀ ಭಾರತದ ಕನಸು ಪ್ರತಿಯೊಬ್ಬ ಭಾರತೀಯನ ಕನಸಾಗಬೇಕು. ಈ ಮಿಶನ್ನಿನ ಯಶಸ್ಸು ಗಾಂಧೀಜಿಯವರಿಗೆ ನಿಜರೂಪದ ಶ್ರದ್ದಾಂಜಲಿ, ಕಾರ್ಯಾಂಜಲಿಯಾದೀತು.

ನಾನು ನಿಜವಾಗಿಯೂ ನಿಮ್ಮಲ್ಲಿ ಕೇಳಿಕೊಳ್ಳುವುದೆಂದರೆ – 2019ಕ್ಕೆ ಗಾಂಧೀಜಿ ಚಂಪಾರಣಕ್ಕೆ ಬಂದು 150 ವರ್ಷಗಳಾಗುತ್ತವೆ. 1915ರಲ್ಲಿ ಭಾರತಕ್ಕೆ ಬಂದ ಮೋಹನದಾಸ ಕರಮಚಂದ ಗಾಂಧಿ 1917ರಲ್ಲಿ ಮಹಾತ್ಮ ಗಾಂಧಿಯಾಗಿ ಬಿಟ್ಟರು. ಬೋರ್ಡೊಲಿ ಸತ್ಯಗ್ರಹದಲ್ಲಿ ವಲ್ಲಭ ಭಾಯಿ ಪಟೇಲರು ಸರ್ದಾರ್ ಪಟೇಲರಾಗಿಬಿಟ್ಟರು. ದೇಶ ಅವರ ಹಿಂದೆ ಹೊರಟಿತು. ಚಂಪಾರಣದ ಸತ್ಯಗ್ರಹ ನಮ್ಮ ಸ್ವಾತಂತ್ರ್ಯ ಹೋರಾಟದ ಧಾರೆಯನ್ನು ಬಲಪಡಿಸಿದ ಪ್ರಾರಂಭಬಿಂದುವಾಗಿತ್ತು. ಇಂದು ನಾವು ಇದರ ಶತಾಬ್ದಿಯನ್ನು ಆಚರಿಸುತ್ತಿದ್ದೇವೆ . ಈಗ ಸ್ವಚ್ಛಾಗ್ರಹದ ಸಂಕಲ್ಪ ಮಾಡೋಣ ಬನ್ನಿ. ಸತ್ಯಾಗ್ರಹದಿಂದ ಸ್ವಚ್ಛಾಗ್ರಹದವರೆಗಿನ ನಮ್ಮ ನಡಿಗೆ, ಎರಡೂ ಗಾಂಧೀಜಿಯವರ ಕೊಡುಗೆಗಳು. ಆಗ ಸತ್ಯಾಗ್ರಹ ಸ್ವಾತಂತ್ರ್ಯಕ್ಕೆ ಆವಶ್ಯಕವಾಗಿತ್ತು ಈಗ ಸ್ವಚ್ಛಾಗ್ರಹ ದೇಶವನ್ನು ಕೊಳಕಿನಿಂದ ಮುಕ್ತಿಗೊಳಿಸಲು ಆವಶ್ಯಕವಾಗಿದೆ. ಕೊಳಕಿನಿಂದ ಮುಕ್ತಿಯೆಂದರೆ ಬಡವರ ಕಲ್ಯಾಣ. ನಿಜವಾಗಿಯೂ ಬಡವರ ಸೇವೆ ಮಾಡುವುದಾದರೆ ಅವರನ್ನು ರೋಗಗಳಿಂದ ಕಾಪಾಡಬೇಕು, ಅವರ ಜೀವನಶೈಲಿಯಲ್ಲಿ ಬದಲಾವಣೆ ಉಂಟುಮಾಡಬೇಕೆಂದರೆ ಅವರನ್ನು ಕೊಳಕಿನಿಂದ ಮುಕ್ತರನ್ನಾಗಿಸಬೇಕು.

ನಾನು ಚಂಪಾರಣದ ಶತಾಬ್ದಿಯ ಪ್ರಾರಂಭದಲ್ಲೇ ಹೇಳುವುದೇನೆಂದರೆ ವರ್ಷಪೂರ್ತಿ ಈ ಸಾಧನೆಗಳನ್ನು ಮಾಡುತ್ತಾ ಶತಾಬ್ಧಿ ಆಚರಿಸೋಣ. ಸಾಬರಮತಿ ಆಶ್ರಮಕ್ಕೂ ನೂರುವರ್ಷವಾಗಲಿದೆ. ನನ್ನ ಪ್ರಕಾರ ಗಾಂಧೀಜಿ ಅಲ್ಲಿ ತಪಸ್ಸು ಮಾಡಿದರು ಅಲ್ಲದೆ 2019ರಲ್ಲಿ ಗಾಂಧೀಜಿಯವರ 150ನೇ ಜನ್ಮದಿನ ನಮ್ಮ ಮುಂದಿದೆ. 20ನೇ ಶತಮಾನದ ಗಾಂಧೀಜಿಯವರ ಜತೆ 21ನೇ ಶತಮಾನದಲ್ಲಿ ಬದುಕುವ ಸೌಭಾಗ್ಯ ನಮಗೆ ದೊರಕುತ್ತಿದೆ. ಹೊಸ ಬಣ್ಣ ವಿನ್ಯಾಸದೊಡನೆ, ಹೊಸ ಆಲೋಚನೆಯೊಡನೆ, ಹೊಸ ಸಂಕಲ್ಪದೊಡನೆ, ಹೊಸ ಆಸಕ್ತಿಗಳನ್ನು ಬಡಿದೆಬ್ಬಿಸಿ ಬದುಕುವ ಸೌಭಾಗ್ಯ ನಮಗೆ ದೊರಕಿದೆಯೆಂಬ ಭಾವನೆಯಿಂದ ನಾವು ಮುಂದುವರೆದರೆ ನಾವು ಯಶಸ್ವಿಯಾಗಬಲ್ಲೆವೆಂಬ ವಿಶ್ವಾಸ ನನಗಿದೆ. ಇದೇ ನಿಜವಾದ ಕಾರ್ಯಾಂಜಲಿ. ನಾವು ಸಾಕಷ್ಚು ಶ್ರದ್ದಾಂಜಲಿ ನೀಡಿದೇವೆ ಹಾಗೂ ಮುಂದೆಯೂ ಶ್ರದ್ದಾಂಜಲಿ ನೀಡುತ್ತೇವೆ. ಈಗ ಕಾರ್ಯಾಂಜಲಿಯ ಅಗತ್ಯವಿದೆ. ನಮ್ಮ ಸಂಕಲ್ಪ, ಪರಿಶ್ರಮಗಳು ಅವರು ಕಂಡ ಕನಸನ್ನು ಸಾಕಾರಗೊಳಿಸಬೇಕು. ಬಾಪೂರವರ ಕನಸಿನ ಭಾರತವನ್ನು ನಮ್ಮ ಕಣ್ಣಿಂದ ನೋಡಲು ನಿರಂತರ ಪ್ರಯತ್ನ ಮಾಡುತ್ತಾ ಕಾರ್ಯಾಂಜಲಿ ಮಾಡೋಣ. ಇದೇ ಭಾವನೆಯೊಡನೆ,ಈ ಸಾಧನೆಯನ್ನು ದೇಶವಾಸಿಗಳು ಮಾಡಿ ತೋರಿಸಲಿ ಎಂಬ ಅಪೇಕ್ಷೆಯಡನೆ ತಮ್ಮೆಲ್ಲರಿಗೂ ನನ್ನ ಅನೇಕಾನೇಕ ಧನ್ಯವಾದಗಳು.

ವಂದೇ ಮಾತರಂ. ಭಾರತ್ ಮಾತಾಕೀ ಜೈ.

******