Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಜನತೆಗೆ ಮಹಾ ಶಿವರಾತ್ರಿ ಶುಭಾಶಯ ತಿಳಿಸಿದ ಪ್ರಧಾನ ಮಂತ್ರಿಗಳು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಜನತೆಗೆ ಶುಭಾಶಯ ಕೋರಿದ್ದಾರೆ. ಈ ಶ್ರೇಷ್ಠ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಚೈತನ್ಯವನ್ನು ತರಲಿ ಮತ್ತು ಅಮೃತಕಾಲದಲ್ಲಿ ದೇಶದ ಸಂಕಲ್ಪಗಳಿಗೆ ಹೊಸ ಶಕ್ತಿಯನ್ನು ನೀಡಲಿ ಎಂದು ಶ್ರೀ ಮೋದಿ ಹಾರೈಸಿದ್ದಾರೆ.

ಈ ಸಂಬಂಧ “ಎಕ್ಸ್‌” ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು,

“ದೇಶದ ನನ್ನ  ಪರಿವಾರದ ಜನರಿಗೆ ಮಹಾಶಿವರಾತ್ರಿಗೆ ಹಾರ್ದಿಕ ಶುಭಕಾಮನೆಗಳು. ಈ ಮಹಾನ್‌ ಹಬ್ಬವು ಪ್ರತಿಯೊಬ್ಬರ ಬದುಕಿನಲ್ಲೂ ಹೊಸ ಉತ್ಸಾಹ, ಚೈತನ್ಯ ತರಲಿ. ಹಾಗೆಯೇ ಅಮೃತ ಕಾಲದಲ್ಲಿ ದೇಶದ ಸಂಕಲ್ಪಗಳಿಗೆ ಹೊಸ ಶಕ್ತಿ ಕರುಣಿಸಲಿ. ಜಯ ಭೋಲೋನಾಥ್‌ʼʼ ಎಂದು ಆಶಿಸಿದ್ದಾರೆ

***