Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜನಪ್ರತಿನಿಧಿಗಳ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಭಾಷಣ


ಗೌರವಾನ್ವಿತ ಸುಮಿತ್ರಾ ತಾಯಿ ಅವರೇ, ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಅನಂತಕುಮಾರ್ ಅವರೇ, ಉಪ ಸಭಾಧ್ಯಕ್ಷರಾದ ಶ್ರೀ ತಂಬಿದೊರೈರವರೇ, ದೇಶದಾದ್ಯಂತ ಆಗಮಿಸಿರುವ ಎಲ್ಲ ವಿಧಾನಸಭೆಗಳ ಅಧ್ಯಕ್ಷರುಗಳೇ, ಸಂಸದರೇ, ಶಾಸಕರೇ ಮತ್ತು ಎಲ್ಲ ರಾಜಕೀಯ ಪಕ್ಷಗಳ ಹಿರಿಯ ನಾಯಕರುಗಳೇ..

 

ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಕ್ಕಾಗಿ ನಾನು ಮೊದಲು ಸುಮಿತ್ರಾ ಜೀ ಅವರಿಗೆ ದನ್ಯವಾದ ಸಲ್ಲಿಸುತ್ತೇನೆ. ನಾವೆಲ್ಲರೂ ಧಾರ್ಮಿಕ ಕೇಂದ್ರವೊಂದಕ್ಕೆ ಇಡೀ ಕುಟುಂಬದ ಸಮೇತ ಹೋದ ಅನುಭವ ನನಗೆ ಆಗುತ್ತಿದೆ. ನಾವು ಧಾರ್ಮಿಕ ಕೇಂದ್ರಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಜೀವನದಲ್ಲಿ ಅಥವಾ ಸಂಸಾರದಲ್ಲಿ ಬರುವ ವಿವಿಧ ಸವಾಲುಗಳನ್ನು ಪರಿಹಾರ ಮಾಡಿಕೊಳ್ಳಲು ಸಂಕಲ್ಪ ಮಾಡಿಕೊಳ್ಳುತ್ತೇವೆ.

 

ಇಂದು ನೀವು ಕೇವಲ ಈ ಕಾರ್ಯಕ್ರಮದಲ್ಲಿ ಮಾತ್ರ ಭಾಗಿಯಾಗಿಲ್ಲ. ನೀವು ಎಲ್ಲಿ ಕುಳಿತಿದ್ದೀರಿ ಎಂದರೆ 2014ರ ಮೇನಲ್ಲಿ ನಾನು ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿ ಈ ಸದನಕ್ಕೆ ಪ್ರವೇಶ ಮಾಡಿದೆ. ಅದಕ್ಕೂ ಮೊದಲು ನಾನು ಯಾವತ್ತೂ ಈ ಸದನದ ಸೆಂಟ್ರಲ್ ಹಾಲ್‍ಗೆ ಭೇಟಿ ನೀಡಿರಲಿಲ್ಲ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಇಲ್ಲಿಗೆ ಅವಕಾಶ ಇರುತ್ತದೆ.ಮುಖ್ಯಮಂತ್ರಿಗಳು ಭೇಟಿ ನೀಡುವುದನ್ನು ಯಾರೂ ತಡೆಯುವುದಿಲ್ಲ. ಆದರೆ ನಾನು ಯಾವತ್ತೂ ಇಲ್ಲಿಗೆ ಭೇಟಿ ನೀಡಿರಲಿಲ್ಲ. ಈ ದೇಶದ ಜನರು ನಮ್ಮ ಪಕ್ಷವನ್ನು ಆಯ್ಕೆ ಮಾಡಿದ ನಂತರ, ಇಲ್ಲಿ ನಾಯಕನನ್ನು ಆಯ್ಕೆ ಮಾಡಿದ ನಂತರ ಸೆಂಟ್ರಲ್ ಹಾಲ್‍ಗೆ ನಾನು ಬಂದೆ.ಇದೇ ಸೆಂಟ್ರಲ್ ಹಾಲ್‍ನಲ್ಲಿ ಈ ಹಿಂದೆ ಸಂವಿಧಾನ ಸಭೆಗಳು ನಡೆದಿದ್ದವು. ಶ್ರೀ ಪಂಡಿತ್ ಜವಾಹರ್ ಲಾಲ್ ನೆಹರು, ಶ್ರೀ ಬಾಬಾ ಸಾಹೇಬ್ ಅಂಬೇಡ್ಕರ್, ಶ್ರೀ ಸರ್ದಾರ್ ವಲ್ಲಭಾಬಾಯ್ ಪಟೇಲ್, ಶ್ರೀ ರಾಜಗೋಪಾಲಚಾರಿ, ಡಾ.ಶ್ರೀ ರಾಜೇಂದ್ರ ಬಾಬು ಮತ್ತು ಶ್ರೀ ಕೆ.ಎಂ.ಮುನ್ಶಿ ಅವರಂತಹ ಹಿರಿಯರು ಕುಳಿತುಹೋದ ಸ್ಥಳವಿದು.

 

ಅವರು ಈ ದೇಶ ಕಂಡ ಪ್ರಖ್ಯಾತ ಮಹನೀಯರು. ಅಂತಹವರು ಇದ್ದು ಹೋದ, ಕೂರಲು ಬಳಸಿಕೊಂಡ, ಚರ್ಚೆ ಮತ್ತು ಸಂವಾದಕ್ಕೆ ವೇದಿಕೆ ಮಾಡಿಕೊಂಡ ಈ ಸ್ಥಳವು ನಮಗೆ ಪ್ರೇರಕ ಶಕ್ತಿಯಾಗಿದೆ. ಈ ಘಟನೆಗಳನ್ನು ಮರು ನೆನಪು ಮಾಡಿಕೊಳ್ಳಲು ಇದೊಂದು ಅಮೂಲ್ಯ ಸಂದರ್ಭವಾಗಿದೆ.

 

ನಮ್ಮ ಸಂವಿಧಾನದ ಶಿಲ್ಪಿಗಳು, ವಿಶೇಷವಾಗಿ ಶ್ರೀ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ಸಾಮಾಜಿಕ ದಾಖಲೆಯನ್ನಾಗಿ ವಿವರಿಸಿದರು. ಅದು ನಿಜವೂ ಕೂಡಾ. ಇಡೀ ವಿಶ್ವದಲ್ಲಿ ನಮ್ಮ ಸಂವಿಧಾನಕ್ಕೆ ವಿಶೇಷವಾದ ಸ್ಥಾನವಿದೆ. ಅದರ ವಿಭಿನ್ನ ತೊರೆಗಳು, ಹಕ್ಕುಗಳು, ಕೆಲಸದ ಹಂಚಿಕೆಗಳು ದೇಶದಲ್ಲಿ ಪ್ರಚಲಿತವಾಗಿದ್ದ ಸಾಮಾಜಿಕ ಪಿಡುಗುಗಳಿಂದ ಸ್ವತಂತ್ರಮಾಡಲು ಇದು ಕಾರಣವೂ ಆಗಿದೆ. ಸಾಮಾಜಿಕ ನ್ಯಾಯದದ ವಿಚಾರ ಸಂವಿಧಾನದಲ್ಲಿ ಪ್ರಧಾನ ಪಾತ್ರವನ್ನು ವಹಿಸಿಕೊಂಡಿದೆ. ಇಂದು ಯಾವುದೇ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಚರ್ಚೆಗಳು ನಡೆದರೂ ಸಮಾಜದ ಸ್ಥಿತಿಗತಿಯನ್ನು ಸೀಮಿತವಾಗಿಡುವುದು ಅಗತ್ಯವಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಸಾಮಾಜಿಕ ನ್ಯಾಯಕ್ಕೆ ಭಾರೀ ಮಹತ್ವ ಸಿಗುತ್ತದೆ.

 

ನೀವು ಹೇಳಿ ಒಂದು ಮನೆಯಲ್ಲಿ ವಿದ್ಯುತ್ ಇದ್ದರೆ ಅದರ ಪಕ್ಕದ ಮನೆಯಲ್ಲೂ ಇರಬೇಕಲ್ಲವೇ..? ಎಲ್ಲ ಮನೆಗಳಿಗೂ ವಿದ್ಯುತ್ ಒದಗಿಸುವುದು ಸಾಮಾಜಿಕ ನ್ಯಾಯ ಅಲ್ಲವೇ. ಅದನ್ನು ಕಲ್ಪಿಸುವುದು ನಮ್ಮ ಕರ್ತವ್ಯ ಅಲ್ಲವೇ..? ಒಂದು ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಇದ್ದು ಅದರ ಪಕ್ಕದ ಗ್ರಾಮದಲ್ಲೇ ವಿದ್ಯುತ್ ಇಲ್ಲದೇ ಹೋದರೆ ಅದು ಸಾಮಾಜಿಕ ಅಸಮಾನತೆಯ ಸಂಕೇತ ಅಲ್ಲವೇ? ಒಂದು ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಇದ್ದರೆ ಅದರ ಪಕ್ಕದ ಗ್ರಾಮಕ್ಕೂ ವಿದ್ಯುತ್ ಕಲ್ಪಿಸಬೇಕು ಎನ್ನುವ ಸಾಮಾಜಿಕ ನ್ಯಾಯವನ್ನು ಖಾತ್ರಿ ಮಾಡುವುದು ನಮ್ಮ ಕರ್ತವ್ಯ. ಒಂದು ಜಿಲ್ಲೆಯು ಅಭಿವೃದ್ದಿ ಹೊಂದಿ ಅದರ ಪಕ್ಕದ ಜಿಲ್ಲೆಯು ಹಿಂದೆ ಬಿದ್ದರೆ ಹೇಗೆ? ಎಲ್ಲ ಜಿಲ್ಲೆಗಳೂ ಅಭಿವೃದ್ದಿ ಕಾಣಬೇಕು ಎನ್ನುವ ಬಾಧ್ಯತೆಯನ್ನು ತಗೆದುಕೊಳ್ಳಬೇಕು. ತೀರಾ ಹಿಂದುಳಿದ ಜಿಲ್ಲೆಗಳನ್ನೂ ಅಭಿವೃದ್ಧಿ ವಿಚಾರದಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ನೋಡಲೇಬೇಕು. ಈ ಭಾದ್ಯತೆಗಳನ್ನು ಈಡೇರಿಸಲು ಸಾಮಾಜಿಕ ನ್ಯಾಯವು ನಮ್ಮನ್ನು ಪ್ರೇರೇಪಣೆ ಮಾಡುತ್ತದೆ. ಇಂಥದ್ದೊಂದು ಪ್ರಯತ್ನ ನಡೆದಿದ್ದರೆ ಬಹುಷಃ ದೇಶವು ನಿರೀಕ್ಷೆಯ ಮಟ್ಟವನ್ನು ಮುಟ್ಟಲು ಸಾಧ್ಯವಿತ್ತು. ಆದರೆ ಒಂದು ರಾಜ್ಯದ ಐದು ಜಿಲ್ಲೆಗಳು ಅಭಿವೃದ್ಧಿ ಹೊಂದುವುದು ಸಾಧ್ಯವಾಗುವುದಾದರೆ ಐದು ಜಿಲ್ಲೆಗಳ ಮಟ್ಟಕ್ಕೆ ಮೂರು ಹಿಂದುಳಿದ ಜಿಲ್ಲೆಗಳನ್ನು ಅಭಿವೃದ್ಧಿ ಹಂತಕ್ಕೆ ತರುವುದು ಸಾಧ್ಯವಿದೆ. ಒಂದು ರಾಜ್ಯದಲ್ಲಿ ಒಂದಷ್ಟು ಜಿಲ್ಲೆಗಳು ಉತ್ತಮವಾಗಿ ನಡೆಯುತ್ತಿವೆ ಎನ್ನುವುದಾದರೆ ಆ ರಾಜ್ಯವು ಉತ್ತಮವಾಗಿ ನಡೆಯುವ ಎಲ್ಲಾ ಸಾಮಥ್ರ್ಯವನ್ನು ಹೊಂದಿದೆ ಎಂದು ಅರ್ಥ.

 

ನಮ್ಮ ದೇಶದ ಜನರ ಲಕ್ಷಣ ಹೇಗಿವೆ ಗೊತ್ತಾ..? ಪರೀಕ್ಷೆಯ ಸಂದರ್ಭದಲ್ಲಿ ನಾವು ಜಿಯಾಗ್ರಫಿಯಲ್ಲಿ ದುರ್ಬಲವಾಗಿದ್ದೇವೆ ಎಂದು ಆಲೋಚಿಸುತ್ತೇವೆ. ನಾವು ಗಣಿತದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿಕೊಳ್ಳಲು ಯತ್ನ ಮಾಡುತ್ತೇವೆ. ಏಕೆಂದರೆ ಜಿಯಾಗ್ರಫಿಯ ಕಡಿಮೆ ಅಂಕವನ್ನು ಗಣಿತದಿಂದ ಸರಿದೂಗಿಸಿಕೊಳ್ಳಲು ಪ್ರಥಮ ದರ್ಜೆಗಿಂತಲೂ ಹೆಚ್ಚು ಅಂಕ ಗಳಿಸಲು ಪ್ರಯತ್ನಿಸುತ್ತಾರೆ. ಎಲ್ಲರೂ ಇದೇ ರೀತಿಯ ಆಲೋಚನೆಗಳನ್ನು ಮಾಡುತ್ತಾರೆ ಏಕೆಂದರೆ ನಾವು ಇದೇ ಮನಸ್ಥಿತಿಯಲ್ಲಿ ಬೆಳೆದಿದ್ದೇವೆ. ರಾಜ್ಯ ಅಥವಾ ಭಾರತ ಸರ್ಕಾರವು ಅಂಥದ್ದೊಂದು ಗುರಿಯನ್ನು ನೀಡಿದರೆ ಜನರು ತಾನೇ ಏನು ಮಾಡುತ್ತಾರೆ. ಯಾರು ಹೆಚ್ಚು ಫಲದಾಯಕವೋ ಅವರು ಮುಂದೆ ಸಾಗುತ್ತಾರೆ. ಯಾರು ಉತ್ತಮವಾಗಿ ಮಾಡುತ್ತಾರೋ ಅವರು ಉತ್ತಮ ಫಲಿತಾಂಶವನ್ನೇ ಪಡೆದುಕೊಳ್ಳುತ್ತಾರೆ. ಮತ್ತು ಅಂಕಿಸಂಖ್ಯೆಗಳು ಅಭಿವೃದ್ಧಿ ಹೊಂದುತ್ತವೆ. ಗುರಿಯ ಪ್ರಮಾಣವನ್ನು ನಾವು ಮುಟ್ಟಿದಾಗ ಸಂತಸ ಉಂಟಾಗುತ್ತದೆ. ಆದರೆ ಹಿಂದುಳಿದ ಜಿಲ್ಲೆಗಳು ಕಡೆಗಣನೆಗೆ ಒಳಗಾಗುತ್ತಲೇ ಹೋಗುತ್ತವೆ. ಹೀಗಾಗಿ ರಚನಾತ್ಮಕವಾಗಿ ನಾವು ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ದೃಷ್ಟಿ ಇಟ್ಟುಕೊಂಡಿರಬೇಕು. ನಾವು ರಾಜ್ಯಗಳ ಕಡೆಗೆ ನೋಡಿದರೆ ಅಲ್ಲಿರುವ ಪೈಪೋಟಿಯು ಸಹಾಕಾರಿ ಒಕ್ಕೂಟ ವ್ಯವಸ್ಥೆ ಮತ್ತು ಆ ಚಿಂತನೆಯನ್ನು ಸ್ವೀಕರಿಸುವ ನಿಟ್ಟಿನಲ್ಲಿ ನಡೆಯುತ್ತಿದೆ. ಸಂಸದರು ವಿವಿಧ ರಾಜ್ಯಗಳ ವಿಧಾನಸಭೆ ಸದಸ್ಯರ ಜತೆ ಒಟ್ಟಾಗಿ ಕೂತು ಆಯಾ ಪ್ರದೇಶಗಳು, ರಾಜ್ಯಗಳು ಮತ್ತು ದೇಶದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವಂತಹ ಕಾಳಜಿ ತೋರುವುದು ಒಕ್ಕೂಟ ವ್ಯವಸ್ಥೆಯ ಒಂದು ಅಪೂರ್ವ ಉದಾಹರಣೆಯಾಗಿದೆ. ಇದರಿಂದ ಒಕ್ಕೂಟ ತತ್ವವು ಹೊದ ಆಯಾಮವನ್ನು ಪಡೆದುಕೊಂಡಿದೆ.

 

ರಾಜ್ಯರಾಜ್ಯಗಳ ನಡುವೆ ಹೋಲಿಕೆ ಮಾಡಲಾಗುತ್ತಿದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ ಹಿಂದುಳಿಕೆಯ ರಾಜ್ಯಗಳು ಟೀಕೆಗೆ ಒಳಗಾಗುತ್ತಿವೆ. ಖಂಡಿತವಾಗಿಯೂ ಸ್ಪರ್ಧಾತ್ಮಕ ಮತ್ತು ಪ್ರಗತಿಯ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದೇವೆ. ಈಗಿರುವ ಮಾದರಿಯಲ್ಲೇ ಸಾಗಿದರೆ ಜನರು ದೇಶದ ಅಭಿವೃದ್ದಿ ಕುರಿತಂತೆ ಇಟ್ಟುಕೊಂಡಿರುವ ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯವಿಲ್ಲ.

 

ಸ್ವಚ್ಛ ಭಾರತ ಅಭಿಯಾನದÀ ಉದಾಹರಣೆಯನ್ನೇ ನೋಡಿ ಸ್ವಚ್ಛ ಭಾರತದ ರ್ಯಾಕಿಂಗ್‍ನಲ್ಲಿ ಪಟ್ಟಣಗಳು, ನಗರಗಳು ಪೈಪೋಟಿ ನಡೆಸುತ್ತಿವೆ. ಯಾವುದೇ ಮೆಟ್ರೋ ಪೊಲೀಸರು ಅಥವಾ ನಗರಗಳು ಹಿಂದೆ ಬಿದ್ದರೆ ಹಳ್ಳಿಗಳಲ್ಲಿ ಹಿಂದೆ ಬಿದ್ದಿರುವ ಬಗ್ಗೆ ಜನರು ಧ್ವನಿ ಎತ್ತಲು ಶುರು ಮಾಡುತ್ತಾರೆ. ಚಳವಳಿ ಮತ್ತು ಸ್ಪರ್ಧಾತ್ಮಕತೆ ಶುರುವಾಗಲಿದೆ.

 

ದೇಶ ಉತ್ತಮ ಪ್ರಗತಿ ಸಾಧನೆ ಮಾಡುತ್ತಿದ್ದರೂ ದೇಶ ಏಕೆ ಇನ್ನಷ್ಟು ಮುಂದಕ್ಕೆ ಹೋಗುತ್ತಿಲ್ಲ ಅನ್ನೋ ವಿಚಾರ ತಿಳಿದರೆ ನಿಮಗೆ ಅಚ್ಚರಿ ಉಂಟುಮಾಡುತ್ತಿದೆ. ಈ ಸ್ಥಿತಿ ಏಕೆ ಬದಲಾಗುತ್ತಿಲ್ಲ..? ಎನ್ನುವ ಆಲೋಚನೆ ಬರುತ್ತಿದೆ. ನಾವು ದೇಶದ ಎಲ್ಲ ಜಿಲ್ಲೆಗಳ ಸಮಸ್ಯೆಗಳನ್ನು ಪರಿಹಾರ ಮಾಡುವ ಎಲ್ಲ ಆಲೋಚನೆಗಳನ್ನು ಮಾಡುತ್ತಿದ್ದೇವೆ. ಸದ್ಯ ಅಧಿಕೃತವಾಗಿ ದೊರೆತಿರುವ ಅಂಕಿಅಂಶಗಳ ಮೇಲೆ ನಾವು ಕೆಲಸ ಮಾಡಬೇಕಾಗುತ್ತದೆ. ಅಳತೆಗೋಲುಗಳನ್ನೂ ಕೂಡ ಬದಲಾವಣೆ ಮಾಡಬೇಕಾಗುತ್ತಿದೆ. 2011ರ ವರ್ಷದ ಮಾನದಂಡದ ಮೇಲೆ ಈ ಅಂಕಿಅಂಶಗಳಿವೆ. ನಮ್ಮಲ್ಲಿ ಮತ್ತೊಂದು ಸೂಕ್ತ ಸಮೀಕ್ಷೆಯು ಇಲ್ಲ. ಅಂತಹ ಜಿಲ್ಲೆಗಳಲ್ಲಿ ಏನೆಲ್ಲಾ ಲಭ್ಯವಿವೆ ಮತ್ತು ಅವಲಂಬಿತವಾಗಿವೆ ಎನ್ನುವ 48 ಮಾನದಂಡಗಳನ್ನು ನಾವು ಗುರುತಿಸಬೇಕಿದೆ. ಅನುಭವದ ಆಧಾರದ ಮೇಲೆ ನೋಡುವುದಾದರೆ ಐದಾರು ಮಾನದಂಡಗಳ ಮೇಲೆಯೇ ಬಹುತೇಕ ಜಿಲ್ಲೆಗಳು ಹಿಂದುಳಿಕೆಯಾಗಿವೆ ಎನ್ನುವುದು ಮನದಟ್ಟಾಗುತ್ತಿದೆ.

 

ಕೆಲವೊಮ್ಮೆ ಹತ್ತು ಜಿಲ್ಲೆಗಳು ಮುಂದುವರೆಯುತ್ತಿದ್ದರೆ ಇನ್ನೂ ಐದು ಜಿಲ್ಲೆಗಳು ಹಿಂದೆ ಉಳಿಯುತ್ತವೆ. ಹಿಂದೆ ಉಳಿದ ಜಿಲ್ಲೆಗಳು ಕಾಲೆಳಯಲು ಬಯಸುತ್ತವೆ.ಎಲ್ಲ ಜಿಲ್ಲೆಗಳು ಅಭಿವೃದ್ಧಿಯತ್ತ ಸಾಗಬೇಕು ಎನ್ನುವುದು ಇವತ್ತಿನ ಅನಿವಾರ್ಯ. ಒಂದಷ್ಟು ನಿರ್ದಿಷ್ಟ ಮಾನದಂಡಗಳ ಅಡಿಯಲ್ಲಿ ಜಿಲ್ಲೆಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ನಡೆಯಬೇಕು. ಈ ದಿನಚರಿಯು ಒಂದು ವರ್ಷದ ಹಿಂದೆಯೇ ಆರಂಭವಾಗಿದೆ. ವಿವಿಧ ಹಂತಗಳಲ್ಲಿ ಸಭೆಗಳನ್ನು ನಡೆಸಿ ಚರ್ಚೆ ನಡೆಸಿದ್ದಲ್ಲದೇ ಗುರುತಿಸುವ ಪ್ರಕ್ರಿಯೆಗಳನ್ನು ನಡೆಸಲಾಗಿದೆ. 115 ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳನ್ನು ಕರೆಸಿ ಎರಡು ದಿನಗಳ ಕಾರ್ಯಾಗಾರವನ್ನು ಏರ್ಪಡಿಸಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

 

ಈಗ ರಾಜಕಾರಣದ ಬಗ್ಗೆ ಮಾತನಾಡಿದರೆ ನಾವು ನಿಮಗಿಂತ ಪ್ರತ್ಯೇಕವೇನೂ ಅಲ್ಲ. ನಾವೆಲ್ಲರೂ ಒಂದೇ. ಆನರ ಲಕ್ಷಣಗಳು ಏನು? ಓಕೆ ಬಜೆಟ್ ಬಗ್ಗೆ ನನಗೆ ಹೇಳಿ? ಅನುದಾನ ಎಂದರೆ ಏನು? ನಾವು ಎಚ್ಚರಿಕೆಯಿಂದ ನೋಡಿ.. ಅದೇ ಸಂಪನ್ಮೂಲದಿಂದ ಒಂದು ಜಿಲ್ಲೆ ಪ್ರಗತಿಯನ್ನು ಕಾಣುತ್ತದೆ. ಅದೇ ಸಂಪನ್ಮೂಲವಿದ್ದರೂ ಇನ್ನೊಂದು ಜಿಲ್ಲೆ ಹಿಂದೆ ಬಿದ್ದಿರುತ್ತದೆ. ಸಂಪನ್ಮೂಲದ ಲಭ್ಯತೆಯು ಮುಖ್ಯವಲ್ಲ. ಆಡಳಿತವೇ ಪ್ರಮುಖ. ನಾಯಕತ್ವ ಮಹತ್ವದ ವಿಚಾರ, ಪರಸ್ಪರ ಸಹಕಾರ ಮಹತ್ವದ್ದು, ಪರಿಣಾಕಾರಿ ಅನುಷ್ಠಾನವೂ ಮುಖ್ಯ ಮತ್ತು ನಾವು ಈ ಸಂಗತಿಗಳನ್ನು ಹೇಗೆ ಬದಲಾವಣೆ ಮಾಡುತ್ತೇವೆ ಎನ್ನುವುದೇ ಮುಖ್ಯ. ಎಲ್ಲ ಜಿಲಾಧಿಕಾರಿಗಳೂ ಇದನ್ನು ಹಿರಿಯ ಸರ್ಕಾರಿ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದಾರೆ.

 

ಒಂದು ವಿಚಾರ ನನ್ನ ಗಮನವನ್ನು ಸೆಳೆಯುತ್ತಿದೆ. ನಾನು ಇದನ್ನು ಯಾರೊಬ್ಬರನ್ನೂ ಟೀಕೆ ಮಾಡಲು ಕೇಳುತ್ತಿಲ್ಲ. ಒಂದೇ ಮನೆಯಲ್ಲಿ ನಾನು ಏನನ್ನಾದರೂ ಮುಕ್ತವಾಗಿ ಮಾತನಾಡಿದರೆ ಅದು ಕೆಟ್ಟ ಆಲೋಚನೆ ಅಲ್ಲವೇ ಅಲ್ಲ. ನನಗೆ ಅಚ್ಚರಿ ವಿಚಾರ ಏನೆಂದರೆ ಸಾಮಾನ್ಯವಾಗಿ ಜಿಲ್ಲಾಧಿಕಾರಿಗಳು ಹೆಚ್ಚು 27,28,30 ವರ್ಷದವರೇ ಆಗಿರುತ್ತಾರೆ. ಅವರೆಲ್ಲರೂ ಯುವ ಜಿಲ್ಲಾಧಿಕಾರಿಗಳು ಅವರು ಅಲ್ಲಿಗೆ ಮೂರರಿಂದ ನಾಲ್ಕು ವರ್ಷಗಳವರೆಗೆ ಕೆಲಸ ಮಾಡಲು ಅವಕಾಶ ಪಡೆದುಕೊಂಡಿರುತ್ತಾರೆ. ಆದರೆ ಈ 115 ಜಿಲ್ಲೆಗಳಲ್ಲಿ ನಾನು ಗಮನಿಸಿದಂತೆ ನಾನು ಭೇಟಿ ಮಾಡಿದ ಶೇಕಡಾ 80ರಷ್ಟು ಜಿಲ್ಲಾಧಿಕಾರಿಗಳು 40ಕ್ಕೂ ಮೇಲ್ಪಟ್ಟವರು, ಕೆಲವರು 45 ವರ್ಷದವರು.

 

ನನಗೆ ಈಗ ಹೇಳಿ ಒಬ್ಬ ಜಿಲ್ಲಾಧಿಕಾರಿ 40-45 ವರ್ಷದವರಾಗಿದ್ದು ಅವರು ಒಂದು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರೆ ಏನಾಗಬಹುದು. ಅವರ ಮಕ್ಕಳು ಬೆಳೆದು ನಿಂತಿರುತ್ತಾರೆ ಮತ್ತು ಅವರು ಮಕ್ಕಳ ಪ್ರವೇಶದ ಬಗ್ಗೆ ಚಿಂತಿತರಾಗಿರುತ್ತಾರೆ. ಅವರು ದೊಡ್ಡ ನಗರದಲ್ಲಿ ತನ್ನ ಸೇವೆ ಇರಬೇಕು ಎಂದೇ ಬಯಕೆ ಇರುತ್ತೆ. ಒಳ್ಳೆಯ ಶಾಲೆಯಲ್ಲಿ ತನ್ನ ಮಕ್ಕಳನ್ನು ದಾಖಲು ಮಾಡಬೇಕು ಎನ್ನುವ ಆಸೆ ಅವರದ್ದಾಗಿರುತ್ತದೆ. ಎರಡನೇಯದ್ದಾಗಿ ಸಾಕಷ್ಟು ಪ್ರಕರಣಗಳಲ್ಲಿ ಬಡ್ತಿ ಪಡೆದ ರಾಜ್ಯ ಕೇಡರ್‍ನ ಅಧಿಕಾರಿಗಳೇ ಅಲ್ಲಿಗೆ ನೇಮಕಗೊಂಡಿರುತ್ತಾರೆ. ನಮ್ಮನ್ನು ನಿಯೋಜನೆ ಮಾಡಿರುವ ಜಿಲ್ಲೆ ಹಿಂದುಳಿದಿದೆ ಎನ್ನುವ ಚಿಂತೆ ಅವರಲ್ಲಿ ಇದ್ದೇ ಇರುತ್ತದೆ. ಸಮಸ್ಯೆ ಅಲ್ಲೇ ಶುರುವಾಗುತ್ತದೆ. ನಾವು ಯುವ ಮತ್ತು ಆಗಷ್ಟೇ ನೇಮಕಗೊಂಡ ಅಧಿಕಾರಿಗಳನ್ನು ಈ ಜಿಲ್ಲೆಗಳಿಗೆ ನಿಯೋಜನೆ ಮಾಡಿದರೆ ಮುಂದಿನ ಐದು ವರ್ಷಗಳ ಕಾಲ ಬದಲಾವಣೆಗಳನ್ನು ಕಾಣಬಹುದಾಗಿದೆ.

 

ನಾನು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿದ್ದೇನೆ. ಇಂತಹ ಅಧಿಕಾರಿಗಳಿಗೆ ಸವಾಲನ್ನು ಎದುರಿಸುವ ಭರವಸೆಯನ್ನು ತುಂಬುವ ಅಗತ್ಯವಿದೆ. ಅಧಿಕಾರಿಗಳು ಈ ವಿಚಾರವನ್ನು ಪರಸ್ಪರ ಚರ್ಚೆ ಮಾಡುತ್ತಿದ್ದಾರೆ. ನಿಮ್ಮನ್ನು ಅಲ್ಲಿಗೆ ಕಳಿಸಿದ್ದೇವೆ ಎಂದರೆ, ಅಲ್ಲಿ ರಾಜಕೀಯ ಲಿಂಕ್ ಇರುವುದಿಲ್ಲ. ನಿಮ್ಮನ್ನು ಅಲ್ಲಿಗೆ ಕಳಿಸಿದ್ದರಿಂದ ನಮ್ಮನ್ನು ತುಳಿಯುವ ಪ್ರಯತ್ನ ನಡೆದಿದೆ ಎನ್ನುವ ಮನಸ್ಥಿತಿ ಅವರಲ್ಲಿ ಬೆಳೆಯುತ್ತಿದೆ ಅದನ್ನು ನಿವಾರಣೆ ಮಾಡುವ ಅಗತ್ಯವಿದೆ. ಈಗ ಹೇಳಿ, ಜಿಲ್ಲೆಗಳಲ್ಲಿ ಲಸಿಕೆ ಕಾರ್ಯಕ್ರಮವು ಯಶಸ್ವಿಯಾಗುತ್ತಿದೆ. ಆದರೆ ಅದಕ್ಕೆ ಹೊಂದಿಕೊಂಡ ಭಾಗಗಳಲ್ಲಿ ಆಗುತ್ತಿಲ್ಲ. ಯಾವುದು ಇದಕ್ಕೆಲ್ಲಾ ಕೊರತೆ? ಸಂಪನ್ಮೂಲಗಳ ಕೊರತೆ ಇದಕ್ಕೆ ಕಾರಣ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಇದಕ್ಕೆ ಬೇಕಿರುವುದು ಪ್ರೇರಣೆ, ಒಂದು ಪಕ್ವವಾದ ಯೋಜನೆ ಮತ್ತು ಜನರ ಸಹಭಾಗಿತ್ವ. ನಾವು ಲಸಿಕೆ ಕಾರ್ಯಕ್ರಮ ಸರಿಯಾಗಿ ಆಗುತ್ತಿಲ್ಲ ಎಂದು ನಾವು ದೂರುತ್ತಲೇ ಇರುತ್ತೇವೆ.ರೋಗಗಳಿಗೆ ಬಾಗಿಲು ತೆರೆಯುತ್ತಿದೆ. ರೋಗಗಳು ಕಾಡಲು ಶುರು ಮಾಡುತ್ತಿವೆ.

 

. ಶಾಲೆ ಬಿಟ್ಟವರು: ಶಾಲೆಗಳಿವೆ, ಶಿಕ್ಷಕರೂ ಇದ್ದಾರೆ ಮತ್ತು ಕಟ್ಟಡಗಳೂ ಇವೆ. ಅಲ್ಲಿ ಎಲ್ಲವೂ ಇದೆ. ಬಜೆಟ್ ಅನುದಾನಗಳನ್ನೂ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಶಾಲೆ ಬಿಡುವವರ ಸಂಖ್ಯೆ ಕಡಿಮೆ ಆಗುತ್ತಿದೆಯೇ..? ಅಲ್ಲಿ ಎರಡು ಅಭಿಪ್ರಾಯಗಳಿವೆ. ಚಿಕ್ಕದಾಗಿ ಹೇಳುವುದಾದರೆ ಅಲ್ಲಿ ಸಂಪನ್ಮೂಲ ಮುಖ್ಯ ಅಲ್ಲವೇ ಅಲ್ಲ.

 

ಎರಡನೇಯದ್ದಾಗಿ ಸಾರ್ವಜನನಿಕ ಸಹಭಾಗಿತ್ವವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಾಗಲೀ ಅಥವಾ ಸ್ಥಳೀಯ ನಾಯಕರುಗಳಾಗಲೀ ಪ್ರಯತ್ನ ಮಾಡಿದ್ದಾರೆಯೇ..? ಅದರ ಫಲಿತಾಂಶವು ಅವಸರದ್ದು. ಸಾರ್ವಜನಿಕರು, ಪಂಚಾಯಿತಿ ಮುಖ್ಯಸ್ಥರು, ಪಂಚಾಯಿತಿಗಳ ಸದಸ್ಯರು, ನಗರ ಸಭೆಗಳ ಸದಸ್ಯರು, ನಗರಸಭೆಗಳ ಮುಖ್ಯಸ್ಥರುಗಳು, ಜಿಲ್ಲಾ ಪಂಚಾಯತ್‍ಗಳು, ತಾಲೂಕು ಪಂಚಾಯಿತಿಗಳು ಹೀಗೆ ಸಾರ್ವಜನಿಕ ಜೀವನದಲ್ಲಿ ಪಾಲುದಾರರಾಗಬಹುದಾದ ಎಲ್ಲ ಸಂಸ್ಥೆಗಳೂ ಪಾಲ್ಗೊಳ್ಳುವ ಅವಕಾಶಗಳನ್ನು ಪಡೆದಿವೆಯೇ..? ಇಂತಹ ಆಶಾವಾದದ ದಿಕ್ಕಿನಲ್ಲಿ ಆ ಭಾಗದ ಶಾಸಕ ಅಥವಾ ಸಂಸತ್ ಸದಸ್ಯರು ಮುಂದಡಿಯನ್ನು ಇಟ್ಟಿದ್ದಾರೆಯೇ..? ನಾವು ನಮ್ಮ ಶಕ್ತಿ ಮೀರಿ, ಸಾಮಥ್ರ್ಯವನ್ನು ಬಳಸಿಕೊಂಡು ಜನರನ್ನು ಹೆಚ್ಚು ಹೆಚ್ಚು ಸಂಪರ್ಕ ಮಾಡುವ ಪ್ರಯತ್ನವನ್ನು ನಡೆಸುತ್ತಿದ್ದೇವೆ. ಇದರ ಪರಿಣಾಮವಾಗಿ ನೀವು ಬದಲಾವಣೆಗಳನ್ನು ಕಾಣುತ್ತಿದ್ದೀರಿ.

 

ಕೆಲವೊಮ್ಮೆ ತುಂಬಾ ಹತ್ತಿರದಿಂದ ಭಾಗಿಯಾದಾಗ ಮಾತ್ರ ಬದಲಾವಣೆಗಳು ಕಂಡು ಬರುತ್ತವೆ. ಒಬ್ಬ ಆರೋಗ್ಯವಂತ, ದೈಹಿಕವಾಗಿ ಸಮರ್ಥವಾಗಿರುವ, ಸರಿಯಾಗಿ ಊಟ ಮಾಡುವ, ಉತ್ತಮ ಸಾಂಸಾರಿಕ ಜೀವನ ನಡೆಸುವ, ಬೇರೆ ಯಾವುದೇ ಸಮಸ್ಯೆಗಳಿಲ್ಲದ ವ್ಯಕ್ತಿಯು ಕೆಲವೊಮ್ಮೆ ತನ್ನ ತೂಕ ಕಡಿಮೆ ಆಗುತ್ತಿರುವ ಬಗ್ಗೆ ಆಲೋಚನೆ ಮಾಡುವುದೇ ಇಲ್ಲ. ಆರಂಭದಲ್ಲಿ ಅದನ್ನು ಆತ ನಿರ್ಲಕ್ಷ್ಯ ಮಾಡುತ್ತಾನೆ. ನಾನು ಡಯಟ್ ಮಾಡುತ್ತಿದ್ದೇನೆ ಅಂತಲೋ, ತುಂಬಾ ಫಿಟ್ ಆಗಿದ್ದೇನೆ ಅಂತಲೋ ಅಥವಾ ಮೊದಲಿಗಿಂತಲೂ ಆರೋಗ್ಯವಾಗಿದ್ದೇನೆ ಅಂತಲೋ ಹೇಳಿಕೊಳ್ಳುತ್ತಾನೆ. ಅವನ ತೂಕ ಕಡಿಮೆಯಾಗಲು ಆರಂಭಿಸುತ್ತದೆ. ಆತ ಆಗ ಹೀಗೇಕೆ ಆಗುತ್ತಿದೆ ಎಂದು ಆಲೋಚಿಸಲು ಶುರು ಮಾಡುತ್ತಾನೆ. ಆಗ ಅವನು ವೀಕ್ ಆಗಲು ಶುರು ಮಾಡುತ್ತಾನೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಅವನು ಜೀವನವನ್ನು ಎಂಜಾಯ್ ಮಾಡಲು ಸಾಧ್ಯವೇ..? ವೈದ್ಯರು ಅವನ ತಪಾಸಣೆ ಮಾಡಿದ ನಂತರ ಆತ ತಾನು ಮಧುಮೇಹದಿಂದ ಬಳಲುತ್ತಿರುವ ಬಗ್ಗೆ ತಿಳಿದುಕೊಳ್ಳುತ್ತಾನೆ. ಆತ ಕೂಡಲೇ ವೈದ್ಯಕೀಯ ಚಿಕಿತ್ಸೆಗೆ ಒಳಪಡುತ್ತಾನೆ. ಆದರೂ ಡಯಾಬಿಟಿಸ್ ಕಡಿಮೆ ಆಗುವುದೇ ಇಲ್ಲ. ಎಲ್ಲವನ್ನೂ ಅನುಸರಿಸಿದರೂ ಅದು ಸಾಧ್ಯವಾಗುವುದಿಲ್ಲ.

 

ನಾನು ನಮ್ಮ ಕೆಲವೊಂದು ಜಿಲ್ಲೆಗಳು ಇಂಥದ್ದೇ ಸಮಸ್ಯೆಗಳಿಂದ ಬಳಲುತ್ತಿವೆ ಎಂದು ನಾನು ಭಾವಿಸುತ್ತಿದ್ದೇನೆ. ಈ ಜಿಲ್ಲೆಗಳನ್ನು ದುರ್ಬಲ ಮಾಡುತ್ತಿರುವ ಅಂತಹ ಸಮಸ್ಯೆಗಳ ಮೂಲವನ್ನು ಒಮ್ಮೆ ನಾವು ಪತ್ತೆ ಹಚ್ಚಬೇಕಿದೆ. ಆನಂತರ ಆ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿ ಬದಲಾವಣೆಗಳನ್ನು ತರಲು ಸಾಧ್ಯವಿದೆ. ಅಂಥದ್ದೊಂದು ಯತ್ನದಲ್ಲಿ ಸಫಲತೆಯನ್ನು ಕಂಡರೆ ಯಾವುದೇ ಜಿಲ್ಲೆಯೂ ಹಿಂದಕ್ಕೆ ಬೀಳುವುದಿಲ್ಲ.

 

115 ಜಿಲ್ಲೆಗಳಲ್ಲಿ 30-35 ಜಿಲ್ಲೆಗಳು ಎಡಪಂಥೀಯ ಉಗ್ರವಾದದ ಪರಿಣಾಮವನ್ನು ಎದುರಿಸುತ್ತಿವೆ. ಈ ಜಿಲ್ಲೆಗಳಿಗೆ ಹೆಚ್ಚು ಗಮನ ಹರಿಸಿ ಎಂದು ಗೃಹ ಇಲಾಖೆಗೆ ಸೂಚನೆ ನೀಡಿದ್ದೇನೆ. ಆ ಸಮಸ್ಯೆಗಳನ್ನು ನಾವು ಹೇಗೆ ಎದುರಿಸಲು ಸಾಧ್ಯವಿದೆ? ಉಳಿದ 80-90 ಜಿಲ್ಲೆಗಳನ್ನು ಸುಲಭವಾಗಿ ನಿಭಾಯಿಸಬಹುದು. ಉಳಿದ ಜಿಲ್ಲೆಗಳಿಗೆ ಹೇಗೆ ಯೋಜನೆಗಳನ್ನು ರೂಪಿಸುವುದು. ಒಂದು ವಿಭಾಗ ಲಸಿಕೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದರೆ ಮತ್ತೊಂದು ವಿಭಾಗವು ಶಾಲೆಯ ಮಕ್ಕಳ ಬಿಡುವಿಕೆಯಲ್ಲಿ ಸುಧಾರಣೆಯನ್ನು ಕಾಣುತ್ತಿವೆ. ಹೀಗಾಗಿ ಶಾಲೆ ಬಿಡುವ ಮಕ್ಕಳ ಸಂಖ್ಯೆಯು ಕಡಿಮೆ ಆಗುತ್ತಿದೆ. ಪ್ರತಿಯೊಂದು ಪ್ರದೇಶವೂ ತನ್ನದೇ ಆದ ಬಲವನ್ನು ಹೊಂದಿದೆ. ನಾವು ದುರ್ಬಲ ಅಂಶಗಳತ್ತ ಗಮನವನ್ನು ಹರಿಸಬೇಕು. ಒಂದು ಹಳ್ಳಿಯು ಮೂರು ಬಲಗಳನ್ನು ಹೊಂದಿದ್ದರೆ ಎರಡು ದುರ್ಬಲತೆಗಳೂ ಇರುತ್ತವೆ. ನಾವು ದುರ್ಬಲತೆಗಳನ್ನು ನೀಗಿಸುವ ಪ್ರಯತ್ನಗಳನ್ನು ಮೊದಲು ಮಾಡಬೇಕಿದೆ.

 

ಈ ಕೆಲಸವು ತುಂಬಾ ಕಠಿಣವಾದುದೇನೂ ಅಲ್ಲ. ನೀತಿ ಆಯೋಗದ ತಜ್ಞರು ನಿಮಗೆ ಪ್ರಾತ್ಯಕ್ಷಿಕೆಯನ್ನು ನೀಡುತ್ತಾರೆ. ಎರಡು ದಿನಗಳ ಹಿಂದೆ ಎಲ್ಲ ಸಚಿವರ ಜತೆ ನಾನು ಈ ಪ್ರದರ್ಶನವನ್ನು ನೋಡಿದ್ದೇನೆ. ಕಳೆದ 20 ವರ್ಷಗಳಿಂದಲೂ ಸರ್ಕಾರ ನೀಡುವ ಇಂತಹ ಪ್ರಾತ್ಯಕ್ಷಿಕೆಗಳನ್ನು ಗಮನಿಸುತ್ತಿದ್ದೆ. ಆದರೆ ಈ ಪ್ರಾತ್ಯಕ್ಷಿಕೆಯು ಕಟ್ಟಕಡೆಯ ವ್ಯಕ್ತಿಗೂ ಅರ್ಥವಾಗುವ ಮಟ್ಟಿಗೆ ನಿಖರ ಮತ್ತು ಸ್ಪಷ್ಟವಾಗಿದೆ. ಶ್ರೀ ಅಮಿತಾಬ್ ಕಾಂತ್ ಅವರು ಒಂದೊಳ್ಳೆ ಪ್ರಾತ್ಯಕ್ಷಿಕೆಯನ್ನು ನೀಡಿದ್ದಾರೆ. ಇದು ನೀತಿ ಆಯೋಗದ ಪ್ರಾತ್ಯಕ್ಷಿಕೆ. ನಾನು ತುಂಬಾ ಮೆಚ್ಚಿಕೊಂಡಿದ್ದೇನೆ. ನಿಮಗೆ ಅದನ್ನು ಈಗ ತೋರಿಸಲಿದ್ದಾರೆ.

 

ಒಂದು ರಾಜ್ಯದ ಸರಾಸರಿಗಿಂತಲೂ ಒಂದು ನಿರ್ದಿಷ್ಟ ಜಿಲ್ಲೆ ಹೇಗೆ ಹಿಂದೆ ಬಿದ್ದಿದೆ ಎನ್ನುವುದನ್ನು ಇಲ್ಲಿರುವ ವಿಧಾನದಿಂದ ಅರ್ಥ ಮಾಡಿಕೊಳ್ಳಬಹುದಾಗಿದೆ. ಉತ್ತಮವಾಗಿ ಪ್ರದರ್ಶನ ಮಾಡುತ್ತಿರುವ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಜಿಲ್ಲೆಯು ಹೇಗೆ ಹಿಂದೆ ಬಿದ್ದಿದೆ ಎನ್ನುವುದನ್ನು ಈ ವಿಧಾನದಿಂದ ತಿಳಿಯಬಹುದು. ಈ ವಿಧಾನದಲ್ಲಿ ನಾಲ್ಕು ಪ್ರಮುಖ ಮಾನದಂಡಗಳನ್ನು ಅನುಸರಿಸಲಾಗಿದೆ. ದೇಶವು 200 ಜಿಲ್ಲೆಗಳನ್ನು ಹೊಂದಿದೆ ಎಂದು ಇಟ್ಟುಕೊಳ್ಳೋಣ ಆ ಜಿಲ್ಲೆಗಳಿಗಿಂತಲೂ ನಿಮ್ಮ ಜಿಲ್ಲೆ ಮುಂದುವರೆದಿದೆಯೇ. ದೇಶದ ಸಾವಿರಾರು ತಾಲೂಕುಗಳು ಮುಂದುವರೆದರೆ ಆ ಪೈಕಿ ನಿಮ್ಮ ತಾಲೂಕು ಮುಂದುವರೆಯುತ್ತದೆ. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೂ ಇಲ್ಲಿ ಹಾಜರಿದ್ದೀರಿ. ಉಗ್ರ ರಾಜಕೀಯಕ್ಕೆ ಒಂದು ಸಮಯ ಇದೆ. ರಾಜಕೀಯ ಎನ್ನುವುದು ಒಂದು ಚಳವಳಿ. ರಾಜಕೀಯ ಎನ್ನುವುದು ಒಂದು ಸ್ಥಿತಿ,ರಾಜಕೀಯ ಸಂಘರ್ಷಗಳು ದೇಶಕ್ಕಾಗಿ ಕೆಲಸ ಮಾಡಲು ಬಳಕೆಯಾಗಬೇಕು. ಆದರೆ ಇಂದು ಸಮಯ ಬದಲಾಗಿದೆ. ನೀವು ಅಧಿಕಾರದಲ್ಲಿರಿ ಅಥವಾ ಇಲ್ಲದಿರಿ. ಅವರ ಕಲ್ಯಾಣಕ್ಕಾಗಿ ನಿಮ್ಮ ಕೆಲಸ ಹೇಗಿದೆ ಎನ್ನುವುದನ್ನು ಜನರು ಗಮನಿಸುತ್ತಲೇ ಇರುತ್ತಾರೆ.

 

ಇದೆಲ್ಲವೂ ನಿಮ್ಮ ಹೋರಾಟ, ನಿಮ್ಮ ಜಾಥಾಗಳು, ನಿಮ್ಮ ಜೈಲು ಭೇಟಿಗಳು ಇತ್ಯಾದಿಗಳಾಗಿವೆ. 20 ವರ್ಷಗಳ ಹಿಂದೆ ನಿಮ್ಮ ರಾಜಕೀಯ ಜೀವನದಲ್ಲಿ ಇದೆಲ್ಲವೂ ಮುಖ್ಯವಾಗುತ್ತಿತ್ತು. ಇವತ್ತು ಅಂತಹ ವಾತಾವರಣವು ಬದಲಾಗಿದೆ. ಕೆಲವು ಪ್ರತಿನಿಧಿಗಳು ಮೇಲಿಂದ ಮೇಲೆ ನಿರಂತರವಾಗಿ ಆಯ್ಕೆಯಾಗುತ್ತಿರುವುದನ್ನು ನೀವು ಗಮನಿಸಿದ್ದೀರಿ. ನೀವು ಅದಕ್ಕೆ ಕಾರಣಗಳನ್ನು  ವಿಶ್ಲೇಷಣೆ ಮಾಡಿದರೆ ಅರ್ಥವಾಗುತ್ತದೆ. ಅದು ರಾಜಕೀಯ ಸಂಘರ್ಷದ್ದಾಗಿರುವುದಿಲ್ಲ. ರಾಜಕೀಯಕ್ಕೆ ಸಂಬಂಧಿಸದೇ ಇಲ್ಲದ ಅಥವಾ ಅಧಿಕಾರ ದಾಹಕ್ಕೆ ಸಂಬಂಧಿಸದ ಕಾರಣವಾಗಿರುತ್ತದೆ. ಅದು ಸಾರ್ವಜನಕರ ಕಲ್ಯಾಣಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಪ್ರತಿಯೊಂದು ಸಂದರ್ಭದಲ್ಲೂ ಆತ ಅಥವಾ ಆಕೆ ಪ್ರತಿಯೊಂದು ಬಾರಿಯೂ ಹೊಸ ವಿಚಾರಗಳನ್ನು ಒಳಗೊಳಿಸಿಕೊಂಡಿರುತ್ತಾರೆ.  ನಿರಂತರವಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುವುದು, ಜನರನ್ನು ಸಂಪರ್ಕ ಮಾಡುತ್ತಿರುವುದು. ಇಂಥಹ ವರ್ಚಸ್ಸು ಅವನು ಅಥವಾ ಅವಳನ್ನು ರಾಜಕೀಯದಲ್ಲಿ ಕೈಹಿಡಿದಿರುತ್ತದೆ.

 

ನಾನು ನೀವು ಹಾರ್ಡ್ ಕೋರ್ ರಾಜಕಾರಣವನ್ನು ಸಂಪೂರ್ಣವಾಗಿ ಬಿಟ್ಟುಬಿಡಿ ಎಂದು ಹೇಳುವುದಿಲ್ಲ. ಆದರೆ ಸಮಾಜವೇ ನಾವು ಅದನ್ನು ತ್ಯಜಿಸಬೇಕು ಎಂದು ಬಯಸುತ್ತಿರುತ್ತದೆ. ಸಮಾಜದ ಜಾಗೃತಿಯು ನಾವು ಇದನ್ನು ಬಿಟ್ಟುಬಿಡಬೇಕು ಎಂದು ಬಯಸುತ್ತಿರುತ್ತದೆ. ನಮ್ಮ ಎಲ್ಲಾ ಸಮಯವನ್ನೂ ಅವರಿಗೇ ಮೀಸಲಿಡಬೇಕು ಎಂದು ಜನರು ಬಯಸುತ್ತಾರೆ. ಅವರ ಜೀವನದಲ್ಲಿ ಬದಲಾವಣೆ ತಂದುಕೊಳ್ಳಲು ಅವರ ಜತೆ ಯಾರಿದ್ದಾರೆ ಎಂದು ಅವರು ಅಚ್ಚರಿಪಡುತ್ತಿರುತ್ತಾರೆ. ಇದೊಂದು ದೊಡ್ಡ ಪರಿಣಾಮ. ಮಕ್ಕಳ ಶಿಕ್ಷಣವನ್ನು ನೂರಕ್ಕೆ ನೂರರಷ್ಟು ಹೆಚ್ಚಿಸುವ ಕೆಲಸವನ್ನು ನಾವು ನಮ್ಮ ಪ್ರದೇಶದಲ್ಲಿ ಮಾಡಬೇಕು. ನಾವು ಇದನ್ನು ನಿರ್ಧರಿಸಿದರೆ ನನಗನಿಸುತ್ತದೆ ಒಂದು ಬದಲಾವಣೆಯನ್ನಾದರೂ ತರಬಹುದು. ವ್ಯವಸ್ಥೆಯು ತನ್ನಿಂದ ತಾನೇ ಬದಲಾಗಲು ಶುರುವಾಗುತ್ತದೆ.

 

ಯಾರಾದರೊಬ್ಬರು ಮೈದಾನಕ್ಕಿಳಿಯುವ, ಸ್ವಯಂ ಸೇವಕರನ್ನು ಸೇರಿಸಿಕೊಳ್ಳುವ ಇಂಧ್ರದನುಶ್ ಯೋಜನೆಗೆ ಜನರನ್ನು ಸೇರಿಸಿಕೊಂಡು ಲಸಿಕೆ ಕಾರ್ಯಕ್ರಮವನ್ನು ಯಶಸ್ಸು ಮಾಡುವ ಕೆಲಸ ಪೂರೈಸಬೇಕು ಈ ಹಿಂದೆ ನಾವು ಲಸಿಕೆ ಕಾರ್ಯಕ್ರಮಗಳಲ್ಲಿ ನಾವು ಶೇಕಡಾ 30ರಷ್ಟು, 40 ರಷ್ಟು ಅಥವಾ 50 ರಷ್ಟು ಸಾಧನೆಯನ್ನು ಮಾಡುತ್ತಿದ್ದೆವು. ಅದರ ಅರ್ಥ ಸರ್ಕಾರ ಏನೂ ಖರ್ಚು ಮಾಡಿಲ್ಲ ಅಂತಾ ಅರ್ಥವಲ್ಲ. ಬಜೆಟ್‍ನಲ್ಲಿ ಅದು ಸಾಕಷ್ಟು ಖರ್ಚು ಮಾಡಿದೆ. ಗುಲಾಂ ನಬಿ ಆಜಾದ್ ಅವರು ಆರೋಗ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲೂ ಈ ಅನುದನ ಬಳಕೆ ಆಗಿದೆ. ಆದರೆ ಸಾರ್ವಜನಿಕ ಸಹಭಾಗಿತ್ವದ ಕೊರೆತೆಯ ಕಾರಣಕ್ಕೆ ನಿರೀಕ್ಷೆಯಷ್ಟು ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ.

 

ಇಂದ್ರಧನುಶ್ ಯೋಜನೆಯಲ್ಲಿ ಒಂದಷ್ಟು ವಿಶೇಷ ಪ್ರಯತ್ನಗಳನ್ನು ಮಾಡಲಾಗಿದೆ. ಇದೀಗ ಲಸಿಕೆ ಪ್ರಮಾಣವು ಶೇಕಡಾ 70-75ರಷ್ಟು ಪ್ರಮಾಣಕ್ಕೆ ಮುಟ್ಟಿದೆ. ಇದನ್ನು ಶೇಕಡಾ 90ಕ್ಕೆ ತಂದು ನಿಲ್ಲಿಸುವ ಪ್ರಯತ್ನಗಳೂ ನಡೆದಿವೆ. ಹೀಗೆ ಮಾಡಿದಲ್ಲಿ ಶೇಕಡಾ 100ರಷ್ಟು ಪ್ರಮಾಣಕ್ಕೆ ತರುವುದು ದೊಡ್ಡದೇನಲ್ಲ. ಮಗು ಮತ್ತು ಗರ್ಭಿಣಿಯು ಲಸಿಕೆಯನ್ನು ಪಡೆದುಕೊಂಡಿದ್ದೇ ಆದರೆ ಸಹಜವಾಗಿಯೇ ಗಂಭೀರ ರೋಗಳು ಅಳಿಯಲು ಸಾಧ್ಯವಾಗುತ್ತದೆ.

 

ಅದಕ್ಕಾಗಿ ಒಂದು ವ್ಯವಸ್ಥೆ ಮತ್ತು ಯೋಜನೆ ಇದೆ. ಹೊಸ ಬಜೆಟ್‍ನ ಅಗತ್ಯವೂ ಕಾಣುತ್ತಿದೆ. ಈ ಬಜೆಟ್‍ನಲ್ಲೇ ಇರುವಷ್ಟು ಸಂಪನ್ಮೂಲಗಳನ್ನು ಬಳಸಿಕೊಂಡು ಮಾನವ ಶಕ್ತಿಯನ್ನು ಒಳಗೊಂಡು ತ್ವರಿತಗತಿಯಲ್ಲಿ ಗುರಿ ಮುಟ್ಟುವ ಪ್ರಯತ್ನಗಳನ್ನು ಮಾಡಿದರೆ ಊಹಿಸಿದ ಗುರಿಯನ್ನು ತಲುಪುವುದು ಕಷ್ಟವೇನಲ್ಲ. ಈ ಪಾತ್ರವನ್ನು ಆಶಾಭಾವನೆ ಹೊಂದಿರುವ ಜಿಲ್ಲೆಗಳು ಮಾಡಬೇಕು. ಹಿಂದುಳಿಯುವಿಕೆ ಎನ್ನುವ ಪದವನ್ನು ಬಳಸಬೇಡಿ ಎಂದು ಎಲ್ಲರನ್ನೂ ಸದಾ ಕೇಳಿಕೊಳ್ಳುತ್ತೇನೆ. ಹೀಗೆ ಆಲೋಚನೆ ಮಾಡಿದರೆ ಜನರ ಮನಸ್ಥಿತಿ ಮತ್ತೆ ಋಣಾತ್ಮಕ ಚಿಂತನೆಗಳತ್ತ ಸಾಗುತ್ತದೆ.

 

ಈ ಹಿಂದೆ ನಾವು ಸಾಮಾನ್ಯವಾಗಿ ಮೂರು ದರ್ಜೆಗಳನ್ನು ಕಾಣುತ್ತಿದ್ದೆವು. ಪ್ರಥಮ ದರ್ಜೆ, ದ್ವಿತೀಯ ದರ್ಜೆ ಮತ್ತು ಮೂರನೇ ದರ್ಜೆ. ಆನಂತರ ಸರ್ಕಾರ 20-25 ವರ್ಷಗಳ ಹಿಂದೆಯೇ ಮೂರನೇ ದರ್ಜೆಯನ್ನು ರದ್ದು ಮಾಡಿತು. ಆದರೆ ಬೋಗಿಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ನಮ್ಮ ಮನಸ್ಥಿತಿ ಬದಲಾಯಿತು. ಈ ಮೊದಲು ಮೂರನೇ ದರ್ಜೆ ಬೋಗಿಯಲ್ಲಿ ಪ್ರಯಾಣ ಮಾಡುವ ವ್ಯಕ್ತಿಯನ್ನು ಕೀಳಾಗಿ ಕಾಣಲಾಗುತ್ತಿತ್ತು. ಆದರೆ ಈಗ ಸ್ಥಿತಿ ಭಿನ್ನವಾಗಿದೆ. ಬೋಗಿ ಅದೇ ಇದೆ. ಅದೇ ರೀತಿ ನಾವು ಹಿಂದುಳಿಯುವಿಕೆ ಎನ್ನುವ ಪದವನ್ನು ಬಳಕೆ ಮಾಡಿದರೆ ಮನಸ್ಥಿತಿ ಹಾಗೇ ಉಳಿದುಬಿಡುತ್ತದೆ. ಓ ನೀವು ಹಿಂದುಳಿದ ಪ್ರದೇಶದ ಶಾಸಕ? ಎಲ್ಲವೂ ಅಲ್ಲಿಂದಲೇ ಶುರುವಾಗುತ್ತದೆ. ನಾವು ಹಿಂದುಳಿಯುವಿಕೆ ಎನ್ನುವುದರ ಸ್ಪರ್ಧೆಯಲ್ಲಿ ನಿಲ್ಲಬಾರದು ಬೆಳವಣಿಗೆಯ ಪೈಪೋಟಿಗೆ ನಿಲ್ಲಬೇಕು. ಈ ಜಿಲ್ಲೆಗಳು ಅಭಿವೃದ್ಧಿಯಾದರೆ ಸಹಜವಾಗಿಯೇ ಸಾಮಾಜಿಕ ನ್ಯಾಯವನ್ನು ನಾವು ಕಲ್ಪಿಸಿದಂತೆಯೇ ಆಗುತ್ತದೆ.

 

ನಮ್ಮ ಪ್ರದೇಶದ ಎಲ್ಲ ಮಕ್ಕಳನ್ನೂ ಶಿಕ್ಷಿತರನ್ನಾಗಿ ಮಾಡುವುದು ಸಾಮಾಜಿಕ ನ್ಯಾಯದ ತೀರಾ ಹತ್ತಿರದ ಹೆಜ್ಜೆಯಾಗಿದೆ.  ಎಲ್ಲ ಮನೆಗಳಿಗೂ ವಿದ್ಯುತ್ ಕಲ್ಪಿಸುವುದು ಸಾಮಾಜಿಕ ನ್ಯಾಯದ ಹತ್ತಿರದ ಹೆಜ್ಜೆ. ಈ ಸದನದಲ್ಲಿ ನಮ್ಮನ್ನು ಮುನ್ನಡೆಸಿದ ಹಲವು ಮಹಾನ್ ನಾಯಕರು ನಮ್ಮನ್ನು ಸಾಮಾಜಿಕ ನ್ಯಾಯದ ಸುಧಾರಣೆಯಲ್ಲಿ ತೊಡಗಿಸಿಕೊಳ್ಳಲು ಒಂದಲ್ಲಾ ಒಮದು ರೀತಿ ನೆರವಾಗಿದ್ದಾರೆ. ನಾವು ಹೊಸ ಆಲೋಚನೆಗಳೊಂದಿಗೆ ತಗೆದುಕೊಂಡು ಹೋದರೆ ಘರ್ಷಣೆಗಳಿಗೆ ಆಸ್ಪದವೇ ಇರುವುದಿಲ್ಲ.

 

ಇಲ್ಲಿ ಎಲ್ಲ ಪಕ್ಷಗಳ ಜನಪ್ರತಿನಿಧಿಗಳೂ ಇದ್ದಾರೆಂದು ನಾನು ಭಾವಿಸಿದ್ದೇನೆ. ಒಂದೆ ಪ್ರದೇಶದ ಶಾಸಕ ಮತ್ತು ಸಂಸದರೂ ಇಲ್ಲಿದ್ದಾರೆ. ನಾನು ಈ ಕ್ಷಣದ ಹಿಂದೆ ಕೆಲವು ಅಧಿಕಾರಿಗಳನ್ನು ಮಾತನಾಡಿಸಿದೆ. ಕೆಲವರು ಈ ಜಿಲ್ಲೆಗಳಿಗೆ ಎರಡು ತಿಂಗಳ ಹಿಂದೆಯಷ್ಟೇ ವರ್ಗಾವಣೆಯಾಗಿ ಬಂದಿದ್ದಾರೆ. ಈಗಿರುವ ಸ್ಥಿತಿ-ಗತಿಯ ಬಗ್ಗೆ ಅವರನ್ನು ಪ್ರಶ್ನೆ ಮಾಡಿದೆ. ಇತ್ತೀಚೆಗೆ ನಾನು ರಾಜಸ್ಥಾನದ ಝುಂಝುಹು ಜಿಲ್ಲೆಗೆ ಭೇಟಿ ನೀಡಿದ್ದೆ. ರಾಜಸ್ಥಾನ ಮತ್ತು ಹರ್ಯಾಣದ ಐದು ಜಿಲ್ಲೆಗಳ ಅಧಿಕಾರಿಗಳನ್ನು ನಾನು ಕರೆಸಿಕೊಂಡಿದ್ದೆ. ಅವರೊಂದಿಗೆ ತಲಾ ಅರ್ಧ ಗಂಟೆಯಷ್ಟು ಸಮಯವನ್ನು ಕಳೆದೆ. ನನಗೆ ಜಿಲ್ಲೆಯ ಸ್ಥಿತಿ-ಗತಿಗಳ ಮಾಹಿತಿ ಕೊಡಿ ಅಂತಾ ಕೇಳಿದೆ. ನಾವು ಅವರೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕಿದೆ. ಕೆಲಸಗಳನ್ನು ಮುಗಿಸುವ ಸಂಬಂಧ ಅವರೊಂದಿಗೆ ಸದಾ ಸಂಪರ್ಕದಲ್ಲಿದ್ದರೆ ಆ ಕೆಲಸ ಬಹುಬೇಗ ಏಕೆ ಮುಗಿಯುವುದಿಲ್ಲ? ಅದಕ್ಕೆ ಕಾರಣ ಏನಿರುತ್ತೆ? ಆ ಕ್ಷಣದಿಂದು ಅವರು ಪರಿಶ್ರಮ ಪಟ್ಟು ಕೆಲಸ ಮಾಡುತ್ತಾರೆ. ಇದು ರಾಜಕೀಯದ ಲಕ್ಷಣ. ನಾನು ಸಹಾಯದ ಕೈಗಳನ್ನು ಚಾಚಬೇಕಷ್ಟೇ. ‘ಚಿಂತೆ ಬೇಡ ನಾನು ನಿಮ್ಮೊಂದಿಗಿದ್ದೇನೆ. ಬನ್ನಿ’ ಅನ್ನೋ ಭರವಸೆಯನ್ನು ಮೂಡಿಸಬೇಕು. ಇದು ಅವರ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ. ಸರ್ಕಾರದಲ್ಲಿರುವ ಜನರ ಮನೋಸ್ಥೈರ್ಯವನ್ನೂ ಹೆಚ್ಚಿಸಲು ಸಾಧ್ಯವಿದೆ.

 

ನಾವು ಸಾರ್ವಜನಿಕ ಭಾಗವಹಿಸುವಿಕೆಯನ್ನು ಹೆಚ್ಚಿಸಬೇಕಿದೆ. ಆ ಪ್ರದೇಶದ ಎನ್‍ಜಿಒ ಅಥವಾ ಯುವಕರನ್ನು ನಾವೇಕೆ ಗುಂಪು ಗೂಡಿಸಿಕೊಳ್ಳಬಾರದು? ಈ ಸ್ಥಿತಿಯನ್ನು ಬದಲಾವಣೆ ಮಾಡುವ ಅಗತ್ಯ ಇದ್ದೇಇದೆ. ನಮಗೆ ಸಂಪಲ್ಮೂಲವಿದೆ ಅದಕ್ಕೆ ತಕ್ಕಂತೆ ಫಲಿತಾಂಶವನ್ನು ನಾವು ಪಡೆದುಕೊಳ್ಳುತ್ತಿಲ್ಲ. ನಾವು ಈ ಕೊರತೆಗಳನ್ನು ಮುಚ್ಚಿಹಾಕಬೇಕು. ಅದು ನಮ್ಮಿಂದ ಸಾಧ್ಯವಿದೆ ಕೂಡಾ. ಫಲಿತಾಂಶಗಳನ್ನು ಪಡೆಯುತ್ತಾ ಹೋದಂತೆ, ಅವರ ಮನೋಸ್ಥೈರ್ಯ ಹೆಚ್ಚುತ್ತಾ ಹೋದಂತೆ ಆಡಳಿತ ವ್ಯವಸ್ಥೆಯೂ ತನ್ನಿಂದ ತಾನೇ ಸುಧಾರಣೆ ಆಗುತ್ತಾ ಸಾಗುತ್ತದೆ. 115 ಜಿಲ್ಲೆಗಳಲ್ಲಿ ಒಂದಷ್ಟು ಜಿಲ್ಲೆಗಳಿವೆ ಅವು ನಿಮ್ಮನ್ನು ನಿಬ್ಬೆರಗು ಮಾಡುತ್ತವೆ. ಆ ಜಿಲ್ಲೆಗಳು ಏಕೆ ಹಿಂದೆ ಬಿದ್ದಿವೆ ಎಂದು ನೀವೇ ಅಚ್ಚರಿಪಡುತ್ತೀರಿ ಹಿಂದುಳಿದಿರುವ ಜಿಲ್ಲೆಗಳಲ್ಲಿ ಬಹುತೇಕ ಜಿಲ್ಲೆಗಳು ಕೈಗಾರಿಕೀಕರಣಗೊಂಡಿವೆ. ಡಯಾಬಿಟಿಸ್ ರೋಗಿಗಳಂತೆ, ಈ ಜಿಲ್ಲೆಗಳು ಒಂದು ಮಾನದಂಡದಲ್ಲಿ ಅಭಿವೃದ್ಧಿ ಹೊಂದಿರುತ್ತವೆ. ಮತ್ತೊಂದು ಮಾನದಂಡಗಳಲ್ಲಿ ಹಿಂದೆ ಬಿದ್ದಿರುತ್ತವೆ. ಒಂದು ನಿರ್ದಿಷ್ಟ ಮಾನದಂಡವು ಎಲ್ಲವನ್ನೂ ಮೀರಿದ್ದೂ ಆಗಿರುತ್ತದೆ. ಅದು ಅತ್ಯಂತ ಅದ್ಭುತ ಎನಿಸಿರುತ್ತದೆ. ಆದರೆ ಬೇರೆ ಮಾನದಂಡಗಳಲ್ಲಿ ಆ ಜಿಲ್ಲೆಯು ತಪ್ಪಿ ಹೋಗಿರುತ್ತದೆ.

 

ಇನ್ನೂ ಒಂದಷ್ಟು ಸಂದರ್ಭಗಳಲ್ಲಿ ನಮ್ಮ ಜಿಲ್ಲೆಯೇ ಬಿಟ್ಟು ಹೋಗಿದೆ ಎನ್ನುವ ಭಾವನೆ ಜನರಲ್ಲಿ ಇರುತ್ತದೆ. 2011ರ ಜನಸಂಖ್ಯೆ ಆಧಾರದ ಮೇಲೆ ಈ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಒಂದಷ್ಟು ಮಾಹಿತಿಗಳನ್ನು ತಡವಾಗಿ ಸಂಗ್ರಹಿಸಿರಬಹುದು. ನಿಮ್ಮ ಕೆಲವು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯಗಳಿಗೆ ತಿಳಿಸಿರಲಾಗಿರುತ್ತದೆ. ಇದನ್ನು ಬದಲಾವಣೆ ಮಾಡಬೇಕು ಎನಿಸಿದ್ದರೆ ನೀವೇ ಬದಲು ಮಾಡಲು ಸಾಧ್ಯವಿದೆ. ಐದರಿಂದ ಆರು ಜಿಲ್ಲೆಗಳು ಈ ಪಟ್ಟಿಯನ್ನು ಬದಲಿಸಿಕೊಂಡಿವೆ.

 

ಯಾವುದೇ ರಾಜಕೀಯ ಬಣ್ಣ ಅಥವಾ ಅಸಮಾಧಾನವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಹೇಳುವುದಾದರೆ  ನಾವು ಇನ್ನೂ ಒಂದು ವರ್ಷ ಒಟ್ಟಾಗಿ ಸಾಗಬೇಕು. ನಾನು ಹೆಚ್ಚು ಸಮಯ ಕೇಳುವುದಿಲ್ಲ. ಒಂದೇ ವರ್ಷ ಸಾಕು. ನಾವು ಒಂದು ವರ್ಷ ಕಠಿಣವಾಗಿ ಕೆಲಸ ಮಾಡಿದರೆ ಒಂದಷ್ಟು ಮಾನದಂಡಗಳಲ್ಲಿ ಬದಲಾವಣೆಗಳನ್ನು ಸಾಧಿಸಬಹುದಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ವಿಶ್ವದಲ್ಲಿ ನಮ್ಮ ಸ್ಥಾನ 131ರಲ್ಲಿದೆ.

 

ಇಂದು ಇಡೀ ವಿಶ್ವವು ಭಾರತದಿಂದ ಸಾಕಷ್ಟು ಭರವಸೆ ಮತ್ತು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚ್ಯಂಕದಲ್ಲಿ ನಾವು ಸುಧಾರಿಸಿದರೆ ಮತ್ತು ಈ 115 ಜಿಲ್ಲೆಗಳನ್ನು ಅಭಿವೃದ್ಧಿ ಪಡಿಸಿದರೆ ಆಗ ತಾನೇತಾನಾಗಿ ದೇಶವೂ ಪ್ರಗತಿಯಲ್ಲಿ ಮುಂಚೂಣಿಯನ್ನು ಕಂಡುಕೊಳ್ಳುತ್ತದೆ. ನಾವು ಇದಕ್ಕಿಂತಲೂ ಹೆಚ್ಚೇನನ್ನೂ ಮಾಡಲು ಹೋಗುವುದು ಬೇಡ.

 

ನಾವು ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಬಹುದು. ಮನ್ರೇಗಾದಂತಹ ಯೋಜನೆಯುವ ಬಡವರಿಗಾಗಿಯೇ ಇದೆ. ಯಾರಿಗೆ ಉದ್ಯೋಗ ಇಲ್ಲವೋ..ಅವರ ಮೂಲ ಗುರಿ ಉದ್ಯೋಗವನ್ನು ಸಂಪಾದನೆ ಮಾಡಿಕೊಳ್ಳುವುದು. ಮನ್ರೆಗಾದ ಅಲ್ಪ ಅನುಷ್ಠಾನದಿಂದ ಹೆಚ್ಚು ಬಡತನವು ಕಂಡು ಬರುತ್ತಿದೆ. ಮನ್ರೇಗಾ ಯೋಜನೆಯನ್ನು ಗರಿಷ್ಠ ಮಟ್ಟದಲ್ಲಿ ಅನುಷ್ಠಾನ ಮಾಡುವ ಅಗತ್ಯವಿದೆ. ರಾಜ್ಯಗಳಲ್ಲಿರುವ ಉತ್ತಮ ಆಡಳಿತವು ಮನ್ರೇಗಾದ ಲಾಭಗಳನ್ನು ಪಡೆದುಕೊಳ್ಳುತ್ತಿದೆ. ಹೆಚ್ಚು ಬಡತನ ಇರುವ ರಾಜ್ಯಗಳು ಮನ್ರೇಗಾ ಯೋಜನೆಯ ಅನುದಾದ ಮೂಲಕ ಜನರ ದಿನಗೂಲಿಯನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ಆಡಳಿತದ ಕಳಪೆ ಪ್ರದರ್ಶನವು ಬಡವರಿಗೆ ಈ ಯೋಜನೆಯ ಹಣ ತಲುಪದಂತೆ ಮಾಡಿದೆ.

 

ವಾಸ್ತವದಲ್ಲಿ ಕನಿಷ್ಟ ಅನುದಾನವೇ ರಾಜ್ಯಗಳನ್ನು ಸಮರ್ಪಕವಾಗಿ ತಲುಪಿದರೆ ಆರ್ಥಿಕ ಸಮೃದ್ಧಿಯನ್ನು ಸಾಧಿಸಲು ಸಾಧ್ಯವಾಗಿಸುತ್ತದೆ. ನಮ್ಮಲ್ಲಿ ಸಂಪನ್ಮೂಲದ ಕೊರತೆ ಇಲ್ಲವೇ ಇಲ್ಲ. ಮನ್ರೇಗಾದ ಅನುದಾನವು ರಾಜ್ಯಗಳ ಬಡವರನ್ನು ಮುಟ್ಟುತ್ತಿಲ್ಲ. ಇದಕ್ಕೆ ಮುಖ್ಯ ಕಾರಣವಾಗಿರೋದು ಉತ್ತಮ ಆಡಳಿತದ ಕೊರತೆ. ಪರಸ್ಪರ ಸಹಕಾರದ ಕೊರತೆ, ಸಮಸ್ಯೆಗಳತ್ತ ಹೆಚ್ಚು ಗಮನ ಕೇಂದ್ರಿಕರಿಸದೇ ಇರುವುದು. ಈ ಅಂಶಗಳ ಮೇಲೆ ಹೆಚ್ಚು ಆಸಕ್ತಿ ವಹಿಸಿದರೆ ನಾವು ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಬಹುದಾಗಿದೆ.

 

ನಾನು ಮತ್ತೊಮ್ಮೆ ಶ್ರೀಮತಿ ಸುಮಿತ್ರಾ ಮಹಾಜನ್ ಅವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ಏಕೆಂದರೆ ಹಿಂದುಳಿದ ಈ 115 ಜಿಲ್ಲೆಗಳ ಹಣೆಬರಹ ಬದಲಿಸುವ ಪ್ರಯತ್ನ ನಡೆದಿದೆ. ಸತತ ಚರ್ಚೆ ಮತ್ತು ಎರಡು ದಿನಗಳ ಸುದೀರ್ಘ ಪ್ರಾತ್ಯಕ್ಷಿಕೆಯು ಈ ಸಂಸತ್ತಿನ ಸಭಾಂಗಣದಲ್ಲಿ ನಡೆದಿದೆ. ನಮ್ಮ ಮಹಾನ್ ನಾಯಕರು ಚರ್ಚೆ ಮಾಡಿ ಮಾರ್ಗದರ್ಶನಗಳನ್ನು ನೀಡಿದ ಪುಣ್ಯ ಸ್ಥಳವಿದು. ಇಲ್ಲಿ ನಡೆದಿರುವ ಚರ್ಚೆ, ಸಂವಾದ ಮತ್ತು ಆಲೋಚನೆಗಳು ದೇಶವನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಅದೇ ಸದನದಲ್ಲಿ ಕುಳಿತು ನಾವು ಹೊಸ ದಿಕ್ಕಿನತ್ತ ಸಾಗುತ್ತಿದ್ದೇವೆ. ನಾನು ನಿಮಗೆಲ್ಲರಿಗೂ ಶುಭಕೋರುತ್ತೇನೆ. ಇಲ್ಲಿಯವರೆಗೆ ಆಗಮಿಸಿದ್ದಕ್ಕೆ ನಿಮಗೆಲ್ಲರಿಗೂ ನನ್ನ ಹೃದಯಪೂರ್ವಕ  ಧನ್ಯವಾದಗಳು.

 

ನಿಮಗೆಲ್ಲರಿಗೂ ನಮಸ್ಕಾರಗಳು.