Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಪಾನಿನ ಟೋಕಿಯೊದಲ್ಲಿ “ಮೇಕ್ ಇನ್ ಇಂಡಿಯಾ” ವಿಚಾರ ಸಂಕಿರಣದಲ್ಲಿ ಪ್ರಧಾನಮಂತ್ರಿ ಭಾಷಣ ಮಾಡಿದರು

ಜಪಾನಿನ ಟೋಕಿಯೊದಲ್ಲಿ “ಮೇಕ್ ಇನ್ ಇಂಡಿಯಾ” ವಿಚಾರ ಸಂಕಿರಣದಲ್ಲಿ ಪ್ರಧಾನಮಂತ್ರಿ ಭಾಷಣ ಮಾಡಿದರು

ಜಪಾನಿನ ಟೋಕಿಯೊದಲ್ಲಿ “ಮೇಕ್ ಇನ್ ಇಂಡಿಯಾ” ವಿಚಾರ ಸಂಕಿರಣದಲ್ಲಿ ಪ್ರಧಾನಮಂತ್ರಿ ಭಾಷಣ ಮಾಡಿದರು

ಜಪಾನಿನ ಟೋಕಿಯೊದಲ್ಲಿ “ಮೇಕ್ ಇನ್ ಇಂಡಿಯಾ” ವಿಚಾರ ಸಂಕಿರಣದಲ್ಲಿ ಪ್ರಧಾನಮಂತ್ರಿ ಭಾಷಣ ಮಾಡಿದರು


 

ಟೋಕಿಯೊದಲ್ಲಿ ಜರುಗಿದ “ಮೇಕ್ ಇನ್ ಇಂಡಿಯಾ: ಆಫ್ರಿಕಾದಲ್ಲಿ ಭಾರತ ಮತ್ತು ಜಪಾನ್ ಪಾಲುದಾರಿಕೆ ಹಾಗೂ ಡಿಜಿಟಲ್ ಪಾಲುದಾರಿಕೆ” ಎಂಬ ವಿಚಾರ ಸಂಕಿರಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು.
 
 
ಸರಳ ವ್ಯಾಪಾರಕ್ಕಾಗಿ ಮತ್ತು ನಾಗರಿಕರ ಜೀವನ ನಿರ್ವಹಣೆ ಸುಲಭವಾಗಿಸುವ ವ್ಯವಸ್ಥೆಗಳನ್ನು ಸುಧಾರಿಸುವತ್ತ ಕೇಂದ್ರ ಸರಕಾರ ಗಮನ ಹರಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದಲ್ಲಿ ಜಪಾನಿನ ಸಂಸ್ಥೆಗಳು ಅಧಿಕ ಸಂಖ್ಯೆಯಲ್ಲಿರುವುದಕ್ಕೆ ಪ್ರಧಾನಮಂತ್ರಿ ಅವರು ಸಂತಸ ವ್ಯಕ್ತಪಡಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಅರ್ಥವ್ಯವಸ್ಥೆಯ ಕಾರ್ಯಕ್ಷಮತೆಯ ಬಗ್ಗೆ ಪ್ರಧಾನಮಂತ್ರಿ ಅವರು ಮಾತನಾಡಿ, ಭಾರತದ ಪ್ರಮುಖ ಕೈಗಾರಿಕಾ ಯೋಜನೆಗಳ ಪಾಲುದಾರಿಕೆಗಳಲ್ಲಿ ಜಪಾನ್ ಪ್ರಮುಖಪಾತ್ರ ವಹಿಸಿದೆ ಎಂದರು.  ಭಾರತ ಇಂದು ಅತ್ಯಂತ ವೇಗಗತಿಯಲ್ಲಿ ವೃದ್ಧಿಕಾಣುತ್ತಿರುವ ಬೃಹತ್ ಆರ್ಥಿಕತೆಯಾಗಿದೆ. ಅನೌಪಚಾರಿಕದಿಂದ ಔಪಚಾರಿಕ ಆರ್ಥಿಕತೆ, ಡಿಜಿಟಲ್ ವ್ಯವಹಾರಗಳು ಮತ್ತು ಜಿ.ಎಸ್.ಟಿ ಇತ್ಯಾದಿಗಳ ಕಡೆಗೆ ಸಾಗಿ ಭಾರತದ ಆರ್ಥಿಕತೆಯಲ್ಲಿ ಬಹಳಷ್ಟು ಪರಿವರ್ತನೆಗಳು ಕಂಡಿವೆ ಎಂದು ಪ್ರಧಾನಮಂತ್ರಿ ಹೇಳಿದರು. 
 
 
ವೃದ್ಧಿಸುತ್ತಿರುವ ಭಾರತದ  ಆರ್ಥಿಕತೆ, ಕ್ಷಿಪ್ರಗತಿಯಲ್ಲಿ ಏರಿಕೆ ಕಾಣುತ್ತಿರುವ ಮಧ್ಯಮವರ್ಗದ ಸಂಖ್ಯೆ ಮತ್ತು ಯುವ ಭೌಗೋಳಿಕತೆಗಳು ಜಪಾನಿನ ಹೂಡಿಕೆದಾರರಿಗೆ ನೂತನ  ಅವಕಾಶಗಳನ್ನು ನೀಡುತ್ತವೆ ಎಂದ ಪ್ರಧಾನಮಂತ್ರಿ, ಈ ಸಂದರ್ಭದಲ್ಲಿ ಕಡಿಮೆ ಉತ್ಪಾದನಾ ವೆಚ್ಚ, ಐಟಿ ಕೈಗಾರಿಕೋದ್ಯಮಗಳು, ಮತ್ತು ಗತಿಶೀಲ ವಿದ್ಯುತ್ (ಮೊಬಿಲಿಟಿ ಎಲೆಕ್ಟ್ರಿಸಿಟಿ) ಇತ್ಯಾದಿಗಳ ಉದಾಹರಣೆ ನೀಡಿದರು.
 
 
ಭಾರತ ಮತ್ತು ಜಪಾನ್ ನಡುವೆ ಇರುವ ಪರಸ್ಪರ ಸಮಾನ ಮೌಲ್ಯಗಳಿಗೆ ಪ್ರಧಾನಮಂತ್ರಿ  ಒತ್ತು ನೀಡಿದರು. ಎರಡೂ ದೇಶಗಳು, ಇಂಡೋ ಫೆಸಿಫಿಕ್ , ದಕ್ಷಿಣ ಏಷ್ಯಾ ಮತ್ತು ಆಫ್ರಿಕಾಗಳು ಸೇರಿದಂತೆ ವಿಶ್ವದ ಇತರ ಭಾಗಗಳಿಂದ ಬಲಿಷ್ಠವಾದ ಅಭಿವೃದ್ಧಿಯ ಪಾಲುದಾರರನ್ನು ಹೊಂದಲು  ನಿರೀಕ್ಷಿಸುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು.