ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಪಾನ್ ನಲ್ಲಿ ಹಗಿಬಿಸ್ ಚಂಡಮಾರುತದಿಂದ ಸಂಭವಿಸಿರುವ ಜೀವ ಹಾನಿಗೆ ಸಂತಾಪ ಸೂಚಿಸಿದ್ದಾರೆ. ಜಪಾನ್ ನಲ್ಲಿ ಭೀಕರ ಚಂಡಮಾರುತ ಹಗಿಬಿಸ್ ನಿಂದ ಉಂಟಾಗಿರುವ ಜೀವ ಹಾನಿಯ ಬಗ್ಗೆ ಎಲ್ಲ ಭಾರತೀಯರ ಪರವಾಗಿ ನಾನು ಸಂತಾಪ ಸೂಚಿಸುತ್ತೇನೆ ಎಂದು ಹೇಳಿದ್ದಾರೆ. ಈ ಪ್ರಕೃತಿ ವಿಕೋಪದಿಂದ ಆಗಿರುವ ಭೀಕರ ಹಾನಿಯಿಂದ ಶೀಘ್ರ ಚೇತರಿಸಿಕೊಳ್ಳಲಿ ಎಂದು ನಾನು ಹಾರೈಸುತ್ತೇನೆ. ಜಪಾನಿನ ಜನರ ಸನ್ನದ್ಧತೆ ಮತ್ತು ಸಂಕಲ್ಪ ಹಾಗೂ ನನ್ನ ಸ್ನೇಹಿತ ಶಿಂಜೊ ಅಬೆ ಅವರ ನಾಯಕತ್ವವು ವಿಕೋಪಾನಂತರದ ಪರಿಣಾಮಗಳನ್ನು ಸಮರ್ಥವಾಗಿ ಮತ್ತು ತ್ವರಿತವಾಗಿ ಎದುರಿಸುತ್ತದೆ ಎಂಬ ವಿಶ್ವಾಸ ನನಗಿದೆ. ಪ್ರಕೃತಿ ವಿಕೋಪಗಳ ವಿರುದ್ಧ ಜಪಾನ್ ನ ಸಿದ್ಧತೆ ಶ್ಲಾಘನಾರ್ಹವಾಗಿದೆ. ಈ ಕಷ್ಟದ ಸಮಯದಲ್ಲಿ ಭಾರತ ಜಪಾನ್ ಜೊತೆ ದೃಢವಾಗಿ ನಿಲ್ಲುತ್ತದೆ. ಅಧಿಕೃತ ಕಾರ್ಯಕ್ರಮದ ರೀತ್ಯ ಜಪಾನ್ ನಲ್ಲಿದ್ದ ಭಾರತೀಯ ನೌಕಾಪಡೆಯ ಸಿಬ್ಬಂದಿ, ತತ್ ಕ್ಷಣವೇ ನೆರವಿಗೆ ಮುಂದಾಗಿದ್ದಾರೆ”.
ನರೇಂದ್ರ ಮೋದಿ
✔@narendramodi
ಜಪಾನ್ ನಲ್ಲಿ ಭೀಕರ ಚಂಡಮಾರುತ ಹಗಿಬಿಸ್ ನಿಂದ ಉಂಟಾಗಿರುವ ಜೀವ ಹಾನಿಯ ಬಗ್ಗೆ ಎಲ್ಲ ಭಾರತೀಯರ ಪರವಾಗಿ ನಾನು ಸಂತಾಪ ಸೂಚಿಸುತ್ತೇನೆ. #Hagibis. ಈ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿ ಮತ್ತು ನಷ್ಟದಿಂದ ಶೀಘ್ರ ಚೇತರಿಸಿಕೊಳ್ಳಲಿ ಎಂದು ನಾನು ಹಾರೈಸುತ್ತೇನೆ.
ನರೇಂದ್ರ ಮೋದಿ
✔@narendramodi
ಜಪಾನ್ ನಲ್ಲಿ ಭೀಕರ #Hagibis ಚಂಡಮಾರುತದಿಂದ ಉಂಟಾಗಿರುವ ಜೀವ ಹಾನಿಯ ಬಗ್ಗೆ ಎಲ್ಲ ಭಾರತೀಯರ ಪರವಾಗಿ ನಾನು ಸಂತಾಪ ಸೂಚಿಸುತ್ತೇನೆ. ಈ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿ ಮತ್ತು ನಷ್ಟದಿಂದ ಶೀಘ್ರ ಚೇತರಿಸಿಕೊಳ್ಳಲಿ ಎಂದು ನಾನು ಹಾರೈಸುತ್ತೇನೆ.
ನರೇಂದ್ರ ಮೋದಿ
✔@narendramodi
ಜಪಾನಿನ ಜನರ ಸನ್ನದ್ಧತೆ ಮತ್ತು ಸಂಕಲ್ಪ ಹಾಗೂ ನನ್ನ ಸ್ನೇಹಿತ @AbeShinzo ಅವರ ನಾಯಕತ್ವವು ವಿಕೋಪಾನಂತರದ ಪರಿಣಾಮಗಳನ್ನು ಸಮರ್ಥವಾಗಿ ಮತ್ತು ತ್ವರಿತವಾಗಿ ಎದುರಿಸುತ್ತದೆ ಎಂಬುದು ಖಚಿತ. ಜಪಾನ್ ಪ್ರಕೃತಿ ವಿಕೋಪ ಎದುರಿಸುವ ಪರಿ ಶ್ಲಾಘನಾರ್ಹವಾಗಿದೆ.
ನರೇಂದ್ರ ಮೋದಿ
✔@narendramodi
@narendramodi
ಜಪಾನಿನ ಜನರ ಸನ್ನದ್ಧತೆ ಮತ್ತು ಸಂಕಲ್ಪ ಹಾಗೂ ನನ್ನ ಸ್ನೇಹಿತ @AbeShinzo ಅವರ ನಾಯಕತ್ವವು ವಿಕೋಪಾನಂತರದ ಪರಿಣಾಮಗಳನ್ನು ಸಮರ್ಥವಾಗಿ ಮತ್ತು ತ್ವರಿತವಾಗಿ ಎದುರಿಸುತ್ತದೆ ಎಂಬ ಖಚಿತ ವಿಶ್ವಾಸವಿದೆ. ಜಪಾನ್ ಪ್ರಕೃತಿ ವಿಕೋಪ ಎದುರಿಸುವ ಪರಿ ಶ್ಲಾಘನಾರ್ಹವಾಗಿದೆ.
ನರೇಂದ್ರ ಮೋದಿ
✔@narendramodi
ಈ ಸಂಕಷ್ಟದ ಸಮಯದಲ್ಲಿ ಭಾರತ ದೃಢವಾಗಿ ಜಪಾನ್ ನೊಂದಿಗೆ ನಿಲ್ಲುತ್ತದೆ. ನಿಶ್ಚಿತ ಭೇಟಿಗಾಗಿ ಜಪಾನ್ ನಲ್ಲಿರುವ ಭಾರತೀಯ ನೌಕಾ ಪಡೆಯ ಸಿಬ್ಬಂದಿ ತತ್ ಕ್ಷಣವೇ ನೆರವಿಗೆ ಧಾವಿಸಲು ಹರ್ಷಿಸುತ್ತಾರೆ.
I offer condolences on behalf of all Indians on the loss of life caused by super-typhoon #Hagibis in Japan. I wish early recovery from the damage and devastation caused by this natural calamity.
— Narendra Modi (@narendramodi) October 13, 2019