ಪಿಎಂಇಂಡಿಯಾ
|
ಕ್ರ.ಸಂ. |
ವಿಜ್ಞಾಪನೆಗಳು |
ವಿವರಣೆ |
|
ಎ. ವಿಪತ್ತು ಅಪಾಯ ನಿರ್ವಹಣೆ |
||
|
1 |
ಭಾರತ ಗಣರಾಜ್ಯ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಜಪಾನ್ ಸರ್ಕಾರದ ಸಂಪುಟ ಕಚೇರಿ ನಡುವೆ ಸಹಕಾರ ಒಪ್ಪಂದ (MOC) |
ವಿಪತ್ತು ಅಪಾಯ ತಗ್ಗಿಸುವ ಕ್ಷೇತ್ರದಲ್ಲಿನ ಸಹಕಾರ ಮತ್ತು ಸಹಯೋಗಕ್ಕಾಗಿ ಮತ್ತು ವಿಪತ್ತು ತಡೆಗಟ್ಟುವಿಕೆಯ ಅನುಭವಗಳು, ಜ್ಞಾನ ಮತ್ತು ನೀತಿಗಳನ್ನು ಹಂಚಿಕೊಳ್ಳುವ ಗುರಿಯನ್ನು ಹೊಂದಿದೆ. |
|
ಸಿ. ಕೌಶಲ ಅಭಿವೃದ್ಧಿ |
||
|
2 |
ಭಾರತದಲ್ಲಿ ಜಪಾನಿ ಭಾಷೆ ಶಿಕ್ಷಣ ಕ್ಷೇತ್ರದಲ್ಲಿ ಎಂ.ಇ.ಎ ಮತ್ತು ಜಪಾನ್ ನ ಎಂ.ಓ.ಎಫ್.ಎ ನಡುವೆ ಸಹಕಾರ ಒಪ್ಪಂದ (MOC) |
ಭಾರತದಲ್ಲಿ ಜಪಾನ್ ಭಾಷೆಯ ಶಿಕ್ಷಣ ಕ್ಷೇತ್ರದ ಸಹಕಾರ ಮತ್ತು ದ್ವಿಪಕ್ಷೀಯ ಸಂಬಂಧ ವರ್ಧನೆಗಾಗಿ |
|
ಡಿ. ಸಂಪರ್ಕ |
||
|
3 |
ಭಾರತ ಜಪಾನ್ ಪೂರ್ವದತ್ತ ಕ್ರಮ ವೇದಿಕೆ |
ಸಮರ್ಥ ಮತ್ತು ಪರಿಣಾಮಕಾರಿ ಮಾದರಿಯಲ್ಲಿ ಸಂಪರ್ಕ ಹೆಚ್ಚಿಸಿ ಭಾರತದ ಈಶಾನ್ಯ ವಲಯದ ಅಭಿವೃದ್ಧಿ ಯೋಜನೆಗಳನ್ನು ಉತ್ತೇಜಿಸಲು |
|
ಇ. ಆರ್ಥಿಕ ಮತ್ತು ವಾಣಿಜ್ಯ |
||
|
4 |
ಕೂಲ್ ಇಎಂಎಸ್ ಸೇವೆಯ ಜಾರಿಯ ಆಡಳಿತಾತ್ಮಕ ಸೂಚನೆಗಾಗಿ ಭಾರತೀಯ ಅಂಚೆ ಮತ್ತು ಜಪಾನ್ ಅಂಚೆ ನಡುವೆ |
ಭಾರತದಲ್ಲಿರುವ ತಜ್ಞರ ಅನುಕೂಲಕ್ಕಾಗಿ ತಾಜಾ ಆಹಾರ ಪದಾರ್ಥಗಳನ್ನು ಜಪಾನ್ ನಿಂದ ಭಾರತಕ್ಕೆ ತಂಪು ಪೆಟ್ಟಿಗೆಯಲ್ಲಿ ಕಳುಹಿಸಲು ಜಪಾನ್ ಅಂಚೆ ಮತ್ತು ಭಾರತೀಯ ಅಂಚೆ ನಡುವೆ ‘ಕೂಲ್ ಇ.ಎಂ.ಎಸ್.’ ಸೇವೆಯ ವಾಣಿಜ್ಯ ಕಾರ್ಯಾಚರಣೆ ಗುರಿ ಹೊಂದಿದೆ. |
|
ಎಫ್. ಹೂಡಿಕೆ (ಗುಜರಾತ್) |
||
|
5 |
ಭಾರತ – ಜಪಾನ್ ಹೂಡಿಕೆಯ ಮಾರ್ಗಸೂಚಿಗಾಗಿ ಡಿಐಪಿಪಿ ಮತ್ತು ಎಂಇಟಿಐ ನಡುವೆ |
ಭಾರತದಲ್ಲಿ ಜಪಾನ್ ಹೂಡಿಕೆಗೆ ಅವಕಾಶ ಮತ್ತು ವೇಗವರ್ಧಕಗೊಳಿಸಲು |
|
6 |
ಗುಜರಾತ್ ನ ಮಂಡಲ್ ಬೆಚ್ ರಾಜ್ – ಖೋರಜ್ ನಲ್ಲಿ ಎಂ.ಇ.ಟಿ.ಐ ಮತ್ತು ಗುಜರಾತ್ ರಾಜ್ಯದ ನಡುವೆ “ಭಾರತ – ಜಪಾನ್ ಮೇಕ್ ಇನ್ ಇಂಡಿಯಾ ವಿಶೇಷ ಕಾರ್ಯಕ್ರಮಕ್ಕಾಗಿ’’ |
ಮಂಡಲ್ ಬೆಚ್ ರಾಜ್ – ಖೋರಾಜ್ ವಲಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರ ನೀಡಲು |
|
ಜಿ. ನಾಗರಿಕ ವಿಮಾನಯಾನ |
||
|
7 |
ನಾಗರಿಕ ವಿಮಾನಯಾನ ಸಹಕಾರ (ಮುಕ್ತ ಆಗಸ) ಕುರಿತಂತೆ ಆರ್.ಓ.ಡಿ. ವಿನಿಮಯ |
ಇದು ಭಾರತ ಮತ್ತು ಜಪಾನ್ ನಡುವಿನ ಆಗಸವನ್ನು ಮುಕ್ತಗೊಳಿಸುತ್ತದೆ ಅಂದರೆ, ಭಾರತೀಯ ಮತ್ತು ಜಪಾನ್ ವಿಮಾನ ಸಂಸ್ಥೆಗಳು ಪರಸ್ಪರ ರಾಷ್ಟ್ರಗಳ ಆಯ್ದ ನಗರಗಳಿಗೆ ಅಪರಿಮಿತ ವಿಮಾನ ಹಾರಾಟ ನಡೆಸಬಹುದಾಗಿದೆ. |
|
ಎಚ್. ವಿಜ್ಞಾನ ಮತ್ತು ತಂತ್ರಜ್ಞಾನ |
||
|
8 |
ಅಂತರಶಿಕ್ಷಣ ಸೈದ್ಧಾಂತಿಕ ಮತ್ತು ಗಣಿತ ವಿಜ್ಞಾನ ಕಾರ್ಯಕ್ರಮ (ಐ ಥೆಮ್ಸ್), ರಿಕೆನ್ಮತ್ತು ಜೈವಿಕ ವಿಜ್ಞಾನದ ರಾಷ್ಟ್ರೀಯ ಕೇಂದ್ರಗಳು (ಸಿಮನ್ಸ್-ಎನ್.ಸಿ.ಬಿ.ಎಸ್) ನಡುವೆ ಅಂತಾರಾಷ್ಟ್ರೀಯ ಜಂಟಿ ವಿನಿಮಯ ಕಾರ್ಯಕ್ರಮದ ಒಪ್ಪಂದ |
ಸೈದ್ಧಾಂತಿಕ ಜೀವಶಾಸ್ತ್ರ ಕ್ಷೇತ್ರದಲ್ಲಿ ಸಹಯೋಗಕ್ಕಾಗಿ ಎರಡೂ ರಾಷ್ಟ್ರಗಳಿಂದ ಪ್ರತಿಭಾವಂತ ಯುವ ವಿಜ್ಞಾನಿಗಳನ್ನು ಗುರುತಿಸಲು ಮತ್ತು ಬೆಳೆಸಲು ಜಂಟಿ ವಿನಿಮಯ ಕಾರ್ಯಕ್ರಮ ರೂಪಿಸಲು |
|
9 |
ಜಪಾನ್ ನ ರಾಷ್ಟ್ರೀಯ ಮುಂದುವರಿದ ಕೈಗಾರಿಕಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಎಐಎಸ್.ಟಿ) ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ನಡುವೆ ಜಂಟಿ ಸಂಶೋಧನಾ ಒಪ್ಪಂದ |
ಎರಡೂ ದೇಶಗಳು ಮತ್ತು ಸಂಸ್ಥೆಗಳ ನಡುವೆ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರೋತ್ಸಾಹಕ್ಕಾಗಿ ಜಪಾನ್ ನ ಎ.ಐ.ಎಸ್.ಟಿಯಲ್ಲಿ ಜಂಟಿ ಸಂಶೋಧನೆಗಾಗಿ ‘ಡಿಬಿಟಿ- ಎ.ಐ.ಎಸ್.ಟಿ.ಐ’ “DBT-AISTInternational CENter for Translational & Environmental Research (DAICENTER)” ಹೆಸರಿನ ಅಂತಾರಾಷ್ಟ್ರೀಯ ಕೇಂದ್ರ ಸ್ಥಾಪಿಸಲು |
|
10 |
ಡಿಬಿಟಿ ಮತ್ತು ರಾಷ್ಟ್ರೀಯ ಮುಂದುವರಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಎಐಎಸ್.ಟಿ) ನಡುವೆ ಎಂ.ಓ.ಯು. |
ಡಿಬಿಟಿ ಸಂಶೋಧನಾ ಸಂಸ್ಥೆ ಮತ್ತು ಎ.ಐ.ಎಸ್.ಟಿ. ನಡುವೆ ಜೀವ ವಿಜ್ಞಾನ ಮತ್ತು ಜೈವಿಕ ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನಾ ಸಹಯೋಗ ಉತ್ತೇಜಿಸಲು |
|
ಐ. ಕ್ರೀಡೆ |
||
|
11 |
ಅಂತಾರಾಷ್ಟ್ರೀಯ ಶೈಕ್ಷಣಿಕ ಮತ್ತು ಕ್ರೀಡಾ ವಿನಿಮಯಕ್ಕಾಗಿ ಲಕ್ಷ್ಮೀಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆ (ಎಲ್.ಎನ್.ಐ.ಪಿ.ಇ) ಮತ್ತು ನಿಪ್ಪಾನ್ ಕ್ರೀಡಾ ವಿಜ್ಞಾನ ವಿಶ್ವವಿದ್ಯಾಲಯ, ಜಪಾನ್ (ಎನ್.ಎಸ್.ಎಸ್.ಯು.) ನಡುವೆ ತಿಳಿವಳಿಕೆ ಒಪ್ಪಂದ |
ಭಾರತದ ಲಕ್ಷ್ಮಿ ಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆ, ಮತ್ತು ಜಪಾನಿನ ನಿಪ್ಪನ್ ಕ್ರೀಡಾ ವಿಜ್ಞಾನಗಳ ವಿಶ್ವವಿದ್ಯಾನಿಲಯಗಳ ನಡುವೆ ಅಂತರರಾಷ್ಟ್ರೀಯ ಶಿಕ್ಷಣ ಸಹಕಾರ ಮತ್ತು ವಿನಿಯಕ್ಕೆ ಅವಕಾಶ ನೀಡಲು ಮತ್ತು ಹೆಚ್ಚಿಸಲು |
|
12 |
ಅಂತಾರಾಷ್ಟ್ರೀಯ ಶೈಕ್ಷಣಿಕ ಮತ್ತು ಕ್ರೀಡಾ ವಿನಿಮಯಕ್ಕಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ನಿಪ್ಪಾನ್ ಕ್ರೀಡಾ ವಿಜ್ಞಾನ ವಿಶ್ವವಿದ್ಯಾಲಯ, ಜಪಾನ್ (ಎನ್.ಎಸ್.ಎಸ್.ಯು.) ನಡುವೆ ಎಂ.ಓ.ಯು. |
ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಜಪಾನ್ ನ ನಿಪ್ಪಾನ್ ಕ್ರೀಡಾ ವಿಜ್ಞಾನಗಳ ವಿಶ್ವವಿದ್ಯಾಲಯಗಳ ನಡುವೆ ಅಂತಾರಾಷ್ಟ್ರೀಯ ಶಿಕ್ಷಣ ಸಹಕಾರ ಮತ್ತು ವಿನಿಮಯಕ್ಕೆ ಅವಕಾಶ ನೀಡಲು ಮತ್ತು ಬಲಗೊಳಿಸಲು |
|
13 |
ಲಕ್ಷ್ಮಿಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆ (ಎಲ್ಎನ್ಐಪಿಇ) ಮತ್ತು ಜಪಾನಿನ ಸುಕುಬಾ ವಿಶ್ವವಿದ್ಯಾಲಯಗಳ ನಡುವಿನ ಆಶಯ ಪತ್ರ |
ಲಕ್ಷ್ಮಿಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಸಂಸ್ಥೆ ಮತ್ತು ಜಪಾನಿನ ಸುಕುಬಾ ವಿಶ್ವವಿದ್ಯಾಲಯಗಳ ನಡುವೆ ವ್ಯೂಹಾತ್ಮಕ ಸಹಯೋಗ, ಜಂಟಿ ಸಂಶೋಧನಾ ಕಾರ್ಯಕ್ರಮ ಮತ್ತು ವಿನಿಮಯವರ್ಧನೆಗಾಗಿ |
|
14 |
ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಜಪಾನಿನ ಸುಕುಬಾ ವಿಶ್ವವಿದ್ಯಾಲಯಗಳ ನಡುವಿನ ಆಶಯ ಪತ್ರ |
ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಜಪಾನಿನ ಸುಕುಬಾ ವಿಶ್ವವಿದ್ಯಾಲಯದ ನಡುವೆ ವ್ಯೂಹಾತ್ಮಕ ಸಹಯೋಗ, ಜಂಟಿ ಸಂಶೋಧನೆ ಕಾರ್ಯಕ್ರಮ ಮತ್ತು ವಿನಿಮಯ ವರ್ಧನೆಗಾಗಿ |
|
ಜೆ. ಶೈಕ್ಷಣಿಕ/ಚಿಂತಕರ ಚಾವಡಿ |
||
|
15 |
ಸಂಶೋಧನೆ ಸಂಬಂಧಿತ ಚಟುವಟಿಕೆಗಳಲ್ಲಿ ಸಹಕಾರದ ಉತ್ತೇಜನಕ್ಕಾಗಿ ಐಡಿಇ-ಜೆಇಟಿಆರ್.ಓ. ನಡುವೆ ಎಂ.ಓ.ಯು. |
ಸಂಶೋಧನೆ ಮತ್ತು ಸಂಶೋಧನೆಯ ಪ್ರಸಾರದ ಕ್ಷಮತೆಯನ್ನು ಹೆಚ್ಚಿಸಲು ಮತ್ತು ಬಲಪಡಿಸಲು ಆರ್.ಐ.ಎಸ್. ಮತ್ತು ಐಡಿಇ –ಜೆಇಟಿಆರ್.ಓ. ನಡುವೆ ಸಾಂಸ್ಥಿಕ ಸಹಕಾರ ಉತ್ತೇಜಿಸಲು |
*****