Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಮ್ಮು, ಕಾಶ್ಮೀರ, ಲೇಹ್ ಮತ್ತು ಲಡಾಕ್‌ನಲ್ಲಿ ನಡೆದ ಬಿಡಿಸಿ ಚುನಾವಣೆಯಲ್ಲಿ ಜಯಗಳಿಸಿದವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಜಮ್ಮು, ಕಾಶ್ಮೀರ, ಲೇಹ್ ಮತ್ತು ಲಡಾಕ್‌ನಾದ್ಯಂತ ನಡೆದ ಬಿಡಿಸಿ ಚುನಾವಣೆಯಲ್ಲಿ ಜಯಶಾಲಿಗಳಾಗಿರುವ ಎಲ್ಲರಿಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಜಮ್ಮು, ಕಾಶ್ಮೀರ, ಲೇಹ್ ಮತ್ತು ಲಡಾಕ್‌ನಲ್ಲಿ ಬಿಡಿಸಿ ಚುನಾವಣೆಗಳು ಅತ್ಯಂತ ಶಾಂತಿಯುತವಾಗಿ ನಡೆದಿದ್ದಕ್ಕೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿ

@narenarendramodi

ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ಸುದ್ದಿ!

1947 ರ ನಂತರ ಮೊದಲ ಬಾರಿಗೆ ಜಮ್ಮು, ಕಾಶ್ಮೀರ, ಲೇಹ್ ಮತ್ತು ಲಡಾಕ್‌ನಲ್ಲಿ 24 ರಂದು ಪ್ರದೇಶಾಭಿವೃದ್ಧಿ ಮಂಡಳಿ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ ಶೇ.98% ರಷ್ಟು ಐತಿಹಾಸಿಕ ಮತದಾನವಾಗಿದೆ. 310 ಬ್ಲಾಕ್‌ಗಳಲ್ಲಿ 1080 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರು.

ನರೇಂದ್ರ ಮೋದಿ

@narenarendramodi

ಜಮ್ಮು, ಕಾಶ್ಮೀರ, ಲೇಹ್ ಮತ್ತು ಲಡಾಕ್‌ನಲ್ಲಿ ನಡೆದ ಬಿಡಿಸಿ ಚುನಾವಣೆಯನ್ನು ಅತ್ಯಂತ ಶಾಂತಿಯುತವಾಗಿ ನಡೆಸಲಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಯಾವುದೇ ಹಿಂಸಾಚಾರ ನಡೆದಿಲ್ಲ.

ಇದು ಪ್ರಜಾಪ್ರಭುತ್ವದ ಬಗ್ಗೆ ಜನರ ಅಚಲ ನಂಬಿಕೆ ಮತ್ತು ತಳಮಟ್ಟದ ಆಡಳಿತಕ್ಕೆ ಅವರು ನೀಡುವ ಮಹತ್ವವನ್ನು ತೋರಿಸುತ್ತದೆ.

ನರೇಂದ್ರ ಮೋದಿ

@narenarendramodi

ಜಮ್ಮು, ಕಾಶ್ಮೀರ, ಲೇಹ್ ಮತ್ತು ಲಡಾಕ್‌ನಾದ್ಯಂತ ನಡೆದ ಬಿಡಿಸಿ ಚುನಾವಣೆಯಲ್ಲಿ ಜಯಶಾಲಿಗಳಾಗಿರುವ ಎಲ್ಲರಿಗೂ ನನ್ನ ಅಭಿನಂದನೆಗಳು.

ಇದು ಈ ಪ್ರದೇಶಗಳಲ್ಲಿ ಹೊಸ ಮತ್ತು ಯುವ ನಾಯಕತ್ವದ ಉದಯವನ್ನು ಸೂಚಿಸುತ್ತದೆ. ಇದು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತದೆ.

ನರೇಂದ್ರ ಮೋದಿ

@narenarendramodi

ಇದು ಈ ವರ್ಷದ ಆಗಸ್ಟ್‌ನಲ್ಲಿ ತಾನು ಕೈಗೊಂಡ ಐತಿಹಾಸಿಕ ನಿರ್ಣಯದ ಬಗ್ಗೆ ಸಂಸತ್ತು ಹೆಮ್ಮೆ ಪಡುವಂತಾಗಿದೆ. ಯಾವುದೇ ಹಿಂಸಾಚಾರ ಅಥವಾ ತೊಂದರೆಯಿಲ್ಲದೆ ಐತಿಹಾಸಿಕ ಶೇ.98 ರಷ್ಟು ಮತದಾನವಾಗಿರುವುದು ಜಮ್ಮು ಮತ್ತು ಕಾಶ್ಮೀರ ಜನರು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಅಸಾಧಾರಣ ಉತ್ಸಾಹದಿಂದ ಚಲಾಯಿಸಲು ಸಮರ್ಥರಾಗಿದ್ದಾರೆ ಎಂಬುದು ಸಾಬೀತಾಗಿದೆ.

ನರೇಂದ್ರ ಮೋದಿ

@narenarendramodi
ಇದು ಈ ವರ್ಷದ ಆಗಸ್ಟ್‌ನಲ್ಲಿ ತಾನು ಕೈಗೊಂಡ ಐತಿಹಾಸಿಕ ನಿರ್ಣಯದ ಬಗ್ಗೆ ಸಂಸತ್ತು ಹೆಮ್ಮೆ ಪಡುವಂತಾಗಿದೆ. ಯಾವುದೇ ಹಿಂಸಾಚಾರ ಅಥವಾ ತೊಂದರೆಯಿಲ್ಲದೆ ಐತಿಹಾಸಿಕ ಶೇ.98 ರಷ್ಟು ಮತದಾನವಾಗಿರುವುದು ಜಮ್ಮು ಮತ್ತು ಕಾಶ್ಮೀರ ಜನರು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಅಸಾಧಾರಣ ಉತ್ಸಾಹದಿಂದ ಚಲಾಯಿಸಲು ಸಮರ್ಥರಾಗಿದ್ದಾರೆ ಎಂಬುದು ಸಾಬೀತಾಗಿದೆ.

ನರೇಂದ್ರ ಮೋದಿ

@narenarendramodi

ಭಾರತೀಯ ಸಂಸತ್ತಿನ ನಿರ್ಧಾರಗಳಿಗೆ ಧನ್ಯವಾದಗಳು. ಯುವ ಮತ್ತು ಕ್ರಿಯಾಶೀಲ ಜನಪ್ರತಿನಿಧಿಗಳು ಜಮ್ಮು ಮತ್ತು ಕಾಶ್ಮೀರದ ಜನರ ಹಣೆಬರಹವನ್ನು ರೂಪಿಸಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಕುರಿತ ಐತಿಹಾಸಿಕ ನಿರ್ಧಾರಗಳಿಗಾಗಿ ಪಕ್ಷಾತೀತವಾಗಿ ಎಲ್ಲ ಸಂಸದರನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ.