Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜರ್ಮನಿಯೊಂದಿಗೆ ರೈಲ್ವೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ


ರೈಲ್ವೆ ಕ್ಷೇತ್ರದಲ್ಲಿ ಕಾರ್ಯತಂತ್ರದ ಯೋಜನೆಗಳ ಸಹಕಾರ ಕುರಿತು ಭಾರತ ಮತ್ತು ಜರ್ಮನಿ ನಡುವಿನ ಜಂಟಿ ಘೋಷಣೆ (ಜೆಡಿಐ)ಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಜಂಟಿ ಘೋಷಣೆಗೆ ಕಳೆದ ತಿಂಗಳು ಸಹಿ ಹಾಕಲಾಗಿತ್ತು.

ಪ್ರಯೋಜನಗಳು:

ಜರ್ಮನಿಯ ಆರ್ಥಿಕ ವ್ಯವಹಾರ ಮತ್ತು ಇಂಧನ ಸಚಿವಾಲಯದೊಂದಿಗಿನ ಜಂಟಿ ಘೋಷಣೆ (ಜೆಡಿಐ)ಯು ರೈಲ್ವೆ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಜ್ಞಾನವನ್ನು ಹಂಚಿಕೊಳ್ಳಲು ಭಾರತೀಯ ರೈಲ್ವೆಗೆ ಒಂದು ವೇದಿಕೆಯನ್ನು ಒದಗಿಸುತ್ತದೆ. ಜಂಟಿ ಘೋಷಣೆ (ಜೆಡಿಐ) ಮಾಹಿತಿ ತಜ್ಞರ ಸಭೆಗಳು, ಸೆಮಿನಾರ್‌ಗಳು, ತಾಂತ್ರಿಕ ಭೇಟಿಗಳು ಮತ್ತು ಜಂಟಿಯಾಗಿ ಒಪ್ಪಿದ ಸಹಕಾರ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗಲಿದೆ.

ಹಿನ್ನೆಲೆ:

ರೈಲ್ವೆ ಸಚಿವಾಲಯವು ಅಸ್ತಿತ್ವದಲ್ಲಿರುವ ಮಾರ್ಗಗಳ ವೇಗ ಹೆಚ್ಚಳ, ವಿಶ್ವ ದರ್ಜೆಯ ನಿಲ್ದಾಣಗಳ ಅಭಿವೃದ್ಧಿ, ಭಾರಿ ಸಾಗಣೆ ಕಾರ್ಯಾಚರಣೆ ಮತ್ತು ರೈಲು ಮೂಲಸೌಕರ್ಯಗಳ ಆಧುನೀಕರಣ ಇತ್ಯಾದಿಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ವಿವಿಧ ದೇಶಗಳ ಸರ್ಕಾರಗಳು ಮತ್ತು ರಾಷ್ಟ್ರೀಯ ರೈಲ್ವೆಗಳೊಂದಿಗೆ ರೈಲ್ವೆ ವಲಯದಲ್ಲಿ ತಾಂತ್ರಿಕ ಸಹಕಾರಕ್ಕಾಗಿ ತಿಳುವಳಿಕೆ ಒಪ್ಪಂದ/ ಸಹಕಾರ ಒಪ್ಪಂದಗಳು/ ಆಡಳಿತಾತ್ಮಕ ವ್ಯವಸ್ಥೆಗಳು / ಜಂಟಿ ಘೋಷಣೆಗಳಿಗೆ ಸಹಿ ಹಾಕಿದೆ.

ತಿಳುವಳಿಕೆ ಒಪ್ಪಂದ/ ಸಹಕಾರ ಒಪ್ಪಂದಗಳು/ ಆಡಳಿತಾತ್ಮಕ ವ್ಯವಸ್ಥೆಗಳು/ ಜಂಟಿ ಘೋಷಣೆಗಳು ತಾಂತ್ರಿಕ ತಜ್ಞರು, ವರದಿಗಳು ಮತ್ತು ತಾಂತ್ರಿಕ ದಾಖಲೆಗಳ ವಿನಿಮಯ, ತರಬೇತಿ ಮತ್ತು ಸೆಮಿನಾರ್ ಗಳು/ ಕಾರ್ಯಾಗಾರಗಳು ನಿರ್ದಿಷ್ಟ ತಂತ್ರಜ್ಞಾನ ಕ್ಷೇತ್ರಗಳ ಬಗ್ಗೆ ಗಮನ ಕೇಂದ್ರೀಕರಿಸುತ್ತವೆ ಮತ್ತು ಜ್ಞಾನ ಹಂಚಿಕೆಗಾಗಿ ಇತರ ಸಂವಹನ ಮಾರ್ಗಗಳನ್ನು ಸುಗಮಗೊಳಿಸುತ್ತವೆ.