Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಲಾಶಯ ಸುರಕ್ಷತೆ ವಿಧೇಯಕ 2018ರ ಮಂಡನೆ ಪ್ರಸ್ತಾಪಕ್ಕೆಸಂಪುಟದ ಅಂಗೀಕಾರ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಲಾಶಯ ಸುರಕ್ಷತೆ ವಿಧೇಯಕ 2018ರ ಮಂಡನೆ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.

ಪ್ರಯೋಜನಗಳು:

ಇದು ಅಣೆಕಟ್ಟೆಗಳ ಸುರಕ್ಷತೆ ಮತ್ತು ಅಂಥ ಅಣೆಕಟ್ಟೆಗಳ ಪ್ರಯೋಜನದ ಹಿತ ಕಾಯಲು ಭಾರತದ ಎಲ್ಲ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಏಕರೂಪದ ಜಲಾಶಯ ಸುರಕ್ಷತೆ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ. ಇದು ಜನ ಮತ್ತು ಜಾನುವಾರುಗಳ ಜೀವ ಮತ್ತು ಆಸ್ತಿಯ ರಕ್ಷಣೆಗೂ ನೆರವಾಗುತ್ತದೆ.

ಭಾರತದ ಮತ್ತು ಅಂತಾರಾಷ್ಟ್ರೀಯ ಪ್ರಮುಖ ತಜ್ಞರೊಂದಿಗೆ ವಿಸ್ತೃತ ಸಮಾಲೋಚನೆಯ ಬಳಿಕ ಕರಡು ಮಸೂದೆಯನ್ನು ಆಖೈರುಗೊಳಿಸಲಾಗುತ್ತದೆ.

ವಿವರಗಳು:

  • ಈ ಮಸೂದೆಯು ದೇಶದಲ್ಲಿರುವ ಎಲ್ಲ ನಿರ್ದಿಷ್ಟಪಡಿಸಲಾದ ಜಲಾಶಯಗಳ ಸುರಕ್ಷಿತ ಕಾರ್ಯಾಚರಣೆಗಾಗಿ ಸೂಕ್ತ ನಿಗಾ, ಪರಿಶೀಲನೆ, ಕಾರ್ಯಾಚರಣೆ ಮತ್ತು ನಿರ್ವಹಣೆ ಒದಗಿಸುತ್ತದೆ.
  • ಅಣೆಕಟ್ಟಿಗಳ ಸುರಕ್ಷತೆ ಕುರಿತು ರಾಷ್ಟ್ರೀಯ ಸಮಿತಿಯ ಸ್ಥಾಪನೆಗೆ ಮಸೂದೆ ಅವಕಾಶ ನೀಡುತ್ತದೆಇದು ಅಣೆಕಟ್ಟೆಗಳ ಸುರಕ್ಷತಾ ನೀತಿಗಳನ್ನು ವಿಕಸನಗೊಳಿಸುತ್ತದೆ ಮತ್ತು ಆ ಉದ್ದೇಶಕ್ಕಾಗಿ ಅಗತ್ಯವಾದ ಅಗತ್ಯವಿರುವ ನಿಯಮಗಳನ್ನು ಶಿಫಾರಸು ಮಾಡುತ್ತದೆ.
  • ಈ ಮಸೂದೆಯು ದೇಶದಲ್ಲಿನ ಅಣೆಕಟ್ಟೆಗಳ ಸುರಕ್ಷತೆಗಾಗಿ ಗುಣಮಟ್ಟ, ಮಾರ್ಗಸೂಚಿ ಮತ್ತು ನೀತಿಗಳನ್ನು ಜಾರಿ ಮಾಡುವುದಕ್ಕಾಗಿ ಕಾರ್ಯ ನಿರ್ವಹಿಸಲು ನಿಯಂತ್ರಣ ಕಾಯವಾಗಿ ರಾಷ್ಟ್ರೀಯ ಅಣೆಕಟ್ಟೆ ಸುರಕ್ಷತಾ ಪ್ರಾಧಿಕಾರ ರಚನೆಗೂ ಅವಕಾಶ ನೀಡುತ್ತದೆ.
  • ಈ ಮಸೂದೆಯು ಅಣೆಕಟ್ಟೆ ಸುರಕ್ಷತೆಗಾಗಿ ರಾಜ್ಯ ಸರ್ಕಾರಗಳಿಂದ ರಾಜ್ಯ ಸಮಿತಿಯ ರಚನೆಗೂ ಅವಕಾಶ ಕಲ್ಪಿಸುತ್ತದೆ.

ರಾಷ್ಟ್ರೀಯ ಅಣೆಕಟ್ಟೆ ಸುರಕ್ಷತಾ ಪ್ರಾಧಿಕಾರ

  • ಇದು ಅಣೆಕಟ್ಟೆ ಸುರಕ್ಷತೆಗೆ ಸಂಬಂಧಿಸಿದ ದತ್ತಾಂಶ ಮತ್ತು ರೂಢಿಗಳ ಪ್ರಮಾಣೀಕರಣಕ್ಕಾಗಿ ರಾಜ್ಯ ಅಣೆಕಟ್ಟೆ ಸುರಕ್ಷತೆ ಸಂಸ್ಥೆಗಳು ಮತ್ತು ಅಣೆಕಟ್ಟುಗಳ ಮಾಲೀಕರೊಂಗೆ ಸಂಬಂಧವನ್ನು ಕಾಪಾಡುತ್ತದೆ;
  • ಇದು ರಾಜ್ಯಗಳಿಗೆ ಮತ್ತು ರಾಜ್ಯ ಅಣೆಕಟ್ಟು ಸುರಕ್ಷತೆ ಸಂಘಟನೆಗಳಿಗೆ ತಾಂತ್ರಿಕ ಮತ್ತು ನಿರ್ವಹಣಾತ್ಮಕ ನೆರವನ್ನು ಒದಗಿಸುತ್ತದೆ;
  • ಇದು ದೇಶದಲ್ಲಿರುವ ಎಲ್ಲಾ ಅಣೆಕಟ್ಟುಗಳ ರಾಷ್ಟ್ರೀಯ ಮಟ್ಟದ ದತ್ತಾಂಶ-ಮೂಲ ಮತ್ತು ಪ್ರಮುಖ ಅಣೆಕಟ್ಟೆಗಳ ವೈಫಲ್ಯದ ದಾಖಲೆಗಳನ್ನು ನಿರ್ವಹಿಸುತ್ತದೆ;
  • ಯಾವುದೇ ಪ್ರಮುಖ ಜಲಾಶಯದ ವೈಫಲ್ಯದ ಕಾರಣವನ್ನುಇದು ಪರಿಶೀಲಿಸುತ್ತದೆ;
  • ಇದು ಅಣೆಕಟ್ಟುಗಳು ಮತ್ತು ಅದರ ಪ್ರಯೋಜನಗಳ ನಿಯಮಿತ ತಪಾಸಣೆ ಮತ್ತು ವಿವರವಾದ ಪರಿಶೀಲನೆಗೆ ಮಾನದಂಡದ ಮಾರ್ಗಸೂಚಿಗಳನ್ನು ಮತ್ತು ಚೆಕ್-ಲಿಸ್ಟ್ಗಳನ್ನು ಪ್ರಕಟಿಸುತ್ತದೆ ಮತ್ತು ನವೀಕರಿಸುತ್ತದೆ;
  • ಹೊಸ ಅಣೆಕಟ್ಟುಗಳ ಕಾಮಗಾರಿಯ ಪರಿಶೀಲನೆವಿನ್ಯಾಸ ಅಥವಾ ನಿರ್ಮಾಣದ ಕಾರ್ಯಗಳನ್ನು ನಿರ್ವಹಿಸುವ ಸೂಚಿತ ಸಂಸ್ಥೆಗಳಿಗೆ ಇದು ಮಾನ್ಯತೆ ಅಥವಾ ಮನ್ನಣೆಯನ್ನು ಪ್ರದಾನ ಮಾಡುತ್ತದೆ;
  • ಇದು ಎರಡು ರಾಜ್ಯಗಳನಡುವಿನ ರಾಜ್ಯ ಅಣೆಕಟ್ಟು ಸುರಕ್ಷತೆ ಸಂಸ್ಥೆ ಅಥವಾ ರಾಜ್ಯಗಳ ರಾಜ್ಯ ಅಣೆಕಟ್ಟೆ ಸುರಕ್ಷತೆ ಸಂಘಟನೆ ಮತ್ತು ಆ ಅಣೆಕಟ್ಟೆ ಮಾಲೀಕರ ನಡುವಿನ ಬಗೆಹರಿಯದ ಸಮಸ್ಯೆಗಳತ್ತ ಗಮನಹರಿಸಿ, ಸೂಕ್ತ ಪರಿಹಾರವನ್ನು ಹುಡುಕುತ್ತದೆ.;
  • ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಅಂದರೆ ಮತ್ತೊಂದು ರಾಜ್ಯದ ಎಲ್ಲೆಯಲ್ಲಿರುವ ಒಂದು ರಾಜ್ಯದ ಅಣೆಕಟ್ಟೆ ವಿಚಾರದಲ್ಲಿ ರಾಷ್ಟ್ರೀಯ ಪ್ರಾಧಿಕಾರವು ರಾಜ್ಯ ಅಣೆಕಟ್ಟು ಸುರಕ್ಷತಾ ಸಂಸ್ಥೆಯ ಪಾತ್ರವನ್ನು ನಿರ್ವಹಿಸುತ್ತದೆ, ಆ ಮೂಲಕ ಅಂತರ ರಾಜ್ಯ ಸಂಘರ್ಷಗಳನ್ನು ನಿರ್ಮೂಲನೆ ಮಾಡುತ್ತದೆ.

ಅಣೆಕಟ್ಟೆ ಸುರಕ್ಷತೆ ಕುರಿತ ರಾಜ್ಯ ಸಮಿತಿ 

ಇದು ರಾಜ್ಯದಲ್ಲಿರುವ ಎಲ್ಲ ನಿರ್ದಿಷ್ಟ ಅಣೆಕಟ್ಟೆಗಳ ಸೂಕ್ತ ನಿಗಾ, ಪರಿಶೀಲನೆ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಖಾತ್ರಿ ಒದಗಿಸುತ್ತದೆ ಮತ್ತು ಅವುಗಳ ಸುರಕ್ಷಿತ ಕಾರ್ಯಾಚರಣೆಯ ಖಾತ್ರಿ ನೀಡುತ್ತದೆ. ತರುವಾಯ ಇದು, ಎಲ್ಲ  ರಾಜ್ಯಗಳಿಗೂ ರಾಜ್ಯಗಳ ಅಣೆಕಟ್ಟೆ ಸುರಕ್ಷತಾ ಸಂಸ್ಥೆ ರಚನೆಗೆ ಅವಕಾಶ ಒದಗಿಸುತ್ತದೆ, ಇದನ್ನು ಅಣೆಕಟ್ಟು-ವಿನ್ಯಾಸಗಳುಜಲ-ಯಾಂತ್ರಿಕ ಇಂಜಿನಿಯರಿಂಗ್ಜಲ ವಿಜ್ಞಾನಭೂ-ತಾಂತ್ರಿಕ ಶೋಧನೆಉಪಕರಣ ಮತ್ತು ಅಣೆಕಟ್ಟೆ-ಪುನರ್ವಸತಿ ಕ್ಷೇತ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಅದರಲ್ಲೂ ಅಣೆಕಟ್ಟಿನ ಸುರಕ್ಷತೆಯ ಆದ್ಯತೆಯ ಅಧಿಕಾರಿಗಳು ನಿರ್ವಹಿಸುತ್ತಾರೆ.

ಹಿನ್ನೆಲೆ:

ಭಾರತದಲ್ಲಿ 5200ಕ್ಕೂ ಹೆಚ್ಚು ದೊಡ್ಡ ಅಣೆಕಟ್ಟೆಗಳಿವೆ ಮತ್ತು 450 ನಿರ್ಮಾಣ ಹಂತದಲ್ಲಿವೆ. ಇದರ ಜೊತೆಗೆ ಸಾವಿರಾರು ಮಧ್ಯಮ ಮತ್ತು ಸಣ್ಣ ಅಣೆಕಟ್ಟೆಗಳಿವೆ. ಭಾರತದಲ್ಲಿ ಅಣೆಕಟ್ಟೆಗಳ ಸುರಕ್ಷತೆಗಾಗಿ ಕಾನೂನು ಮತ್ತು ಸಾಂಸ್ಥಿಕ ಸ್ವರೂಪದ  ಕೊರತೆಯಿಂದ ಅಣೆಕಟ್ಟೆಗಳ ಸುರಕ್ಷತೆ ಕಾಳಜಿಯ ವಿಷಯವಾಗಿದೆ. ಅಸುರಕ್ಷಿತ ಅಣೆಕಟ್ಟೆಗಳು ಅಪಾಯಕಾರಿಯಾಗಿದ್ದು, ಅಣೆಕಟ್ಟೆ ಒಡೆದರೆ ಅದು ಅಪಾರ ಪ್ರಮಾಣದ ಜೀವಹಾನಿ ಮತ್ತು ಆಸ್ತಿ ಹಾನಿಗೆ ಕಾರಣವಾಗುತ್ತದೆ.

ಅಣೆಕಟ್ಟೆ ಸುರಕ್ಷತೆ ವಿಧೇಯಕ 2018, ಅಣೆಕಟ್ಟೆಗಳ ನಿಯಮಿತ ತಪಾಸಣೆ, ತುರ್ತು ಕ್ರಿಯಾ ಯೋಜನೆ, ಸಮಗ್ರ ಅಣೆಕಟ್ಟೆ ಸುರಕ್ಷತಾ ಪರಾಮರ್ಶೆ, ಸೂಕ್ತ ದುರಸ್ತಿ ಮತ್ತು ಅಣೆಕಟ್ಟೆ ಸುರಕ್ಷತೆಯ ನಿಧಿ ನಿರ್ವಹಣೆ, ಸುರಕ್ಷತೆಯ ಕೈಪಿಡಿ ಮತ್ತು ಉಪಕರಣ ಸೇರಿದಂತೆ ಅಣೆಕಟ್ಟೆಗಳ ಸುರಕ್ಷತೆಯ ಎಲ್ಲ ವಿಚಾರಗಳನ್ನೂ ನಿಭಾಯಿಸುತ್ತದೆ. ಇದು ಅಣೆಕಟ್ಟೆಯ ಮಾಲೀಕರ ಮೇಲೆ ಅಣೆಕಟ್ಟೆಯ ಸುರಕ್ಷತೆಯ ಮೇಲುಸ್ತುವಾರಿಯನ್ನು ಹೊರಿಸುತ್ತದೆ ಮತ್ತು ನಿರ್ದಿಷ್ಟ ಕ್ರಮಗಳಲ್ಲಿನ ತಪ್ಪು ಒಪ್ಪುಗಳಿಗೆ ದಂಡನೆಯ ಅವಕಾಶ ಒದಗಿಸುತ್ತದೆ.

*****

AKT/VBA