Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಲ ನಿರ್ವಹಣೆ ಮತ್ತು ಸಾರ್ವಜನಿಕ ಭಾಗವಹಿಸುವಿಕೆಯ ಕುರಿತಾದ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ


ಕೇಂದ್ರ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಅವರು ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

ಸಮಗ್ರ ಮತ್ತು ಪರಸ್ಪರ ಸಂಪರ್ಕಿತ ವಿಧಾನದ ಮೂಲಕ ಕುಡಿಯುವ ನೀರು, ನೈರ್ಮಲ್ಯ, ನದಿ ಸಂರಕ್ಷಣೆ, ನೀರಾವರಿ ದಕ್ಷತೆ, ಅಂತರ್ಜಲ ಮರುಪೂರಣ ಮತ್ತು ತ್ಯಾಜ್ಯ ನೀರಿನ ಮರುಬಳಕೆಗೆ ಸಂಬಂಧಿಸಿದ ಸವಾಲುಗಳನ್ನು ಸರ್ಕಾರಿ ಉಪಕ್ರಮಗಳು ಹೇಗೆ ನಿಭಾಯಿಸಿವೆ ಎಂಬುದನ್ನು ಲೇಖನವು ವಿವರಿಸುತ್ತದೆ. ಕಳೆದ ದಶಕದ ಸಾಧನೆಗಳನ್ನು ಹಾಗೂ ಪ್ರತಿಕ್ರಿಯಾತ್ಮಕ ಆಡಳಿತ ಮತ್ತು ಹಂಚಿತ ರಾಷ್ಟ್ರೀಯ ಮುನ್ನೋಟ ಸಾಕಾರವು ಸಕ್ರಿಯ ಸಾರ್ವಜನಿಕ ಭಾಗವಹಿಸುವಿಕೆಯಿಂದ ನಡೆಸಲ್ಪಡುತ್ತಿರುವ ಬಗ್ಗೆ ಲೇಖನ ವಿಸ್ತಾರವಾಗಿ ತಿಳಿಸಿದೆ.

ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಬರೆದಿದೆ:

“ಸರ್ಕಾರದ ಉಪಕ್ರಮಗಳು ಕುಡಿಯುವ ನೀರು, ನೈರ್ಮಲ್ಯ, ನದಿ ಸಂರಕ್ಷಣೆ, ಸಮರ್ಥ ನೀರಾವರಿ, ಅಂತರ್ಜಲ ಮರುಪೂರಣ ಮತ್ತು ತ್ಯಾಜ್ಯ ನೀರಿನ ಮರುಬಳಕೆಗೆ ಸಂಬಂಧಿಸಿದ ಸವಾಲುಗಳನ್ನು ಸಮಗ್ರ ಮತ್ತು ಪರಸ್ಪರ ಸಂಬಂಧಿತ ವಿಧಾನದ ಮೂಲಕ ಹೇಗೆ ನಿಭಾಯಿಸಿವೆ ಎಂಬುದನ್ನು ಕೇಂದ್ರ ಸಚಿವರಾದ ಶ್ರೀ @CRPaatil ಅವರು ಈ ಲೇಖನದಲ್ಲಿ ವಿವರಿಸಿದ್ದಾರೆ.

ಹಂಚಿತ ರಾಷ್ಟ್ರೀಯ ದೃಷ್ಟಿಕೋನದ ಸಾಕಾರಕ್ಕೆ ಪ್ರತಿಕ್ರಿಯಾತ್ಮಕ ಆಡಳಿತ ಮತ್ತು ಸಕ್ರಿಯ ಸಾರ್ವಜನಿಕ ಭಾಗವಹಿಸುವಿಕೆಯಿಂದ ನಡೆಸಲ್ಪಟ್ಟ ಕಳೆದ ದಶಕದ ಸಾಧನೆಗಳನ್ನು ಅವರು ವಿವರಿಸಿದ್ದಾರೆ.”

 

*****