Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜವಳಿ ಮತ್ತು ಉಡುಪು ಕ್ಷೇತ್ರದಲ್ಲಿ ರಫ್ತು ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ವಿಶೇಷ ಪ್ಯಾಕೇಜ್ ಗೆ ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜವಳಿ ಮತ್ತು ಉಡುಪು ವಲಯದಲ್ಲಿ ಉದ್ಯೋಗ ಸೃಷ್ಟಿ ಮತ್ತು ರಫ್ತು ಉತ್ತೇಜನಕ್ಕಾಗಿ ವಿಶೇಷ ಪ್ಯಾಕೇಜ್ ಗೆ ತನ್ನ ಅನುಮೋದನೆ ನೀಡಿದೆ.

ಮುಂದಿನ ಮೂರು ವರ್ಷಗಳಲ್ಲಿ ಉಡುಪು ಮತ್ತು ಜವಳಿ ಕ್ಷೇತ್ರದಲ್ಲ 1 ಕೋಟಿ ಉದ್ಯೋಗ ಸೃಷ್ಟಿಸುವ ಸಲುವಾಗಿ ಸುಧಾರಣೆಯ ಪ್ಯಾಕೇಜ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತಳೆಯಲಾಗಿದೆ. ಈ ಪ್ಯಾಕೇಜ್ ಕಾರ್ಮಿಕ ಸ್ನೇಹಿ ಮತ್ತು ಉದ್ಯೋಗ ಸೃಷ್ಟಿಯನ್ನು ಪ್ರೋತ್ಸಾಹಿಸುವಂಥ, ಆರ್ಥಿಕತೆಯ ಮಾನದಂಡ ಮತ್ತು ರಫ್ತು ಉತ್ತೇಜಿಸುವ ಕ್ರಮಗಳನ್ನೂ ಒಳಗೊಂಡಿದೆ. ಈ ಕ್ರಮಗಳು ಸಮಗ್ರವಾಗಿ 30 ಶತಕೋಟಿ ಅಮೆರಿಕನ್ ಡಾಲರ್ ರಫ್ತು ಹೆಚ್ಚಳಕ್ಕೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ 74 ಸಾವಿರ ಕೋಟಿ ರೂಪಾಯಿ ಹೂಡಿಕೆಗೆ ದಾರಿ ಮಾಡಿಕೊಡಲಿದೆ.

ಸಿದ್ಧ ಉಡುಪು ಕ್ಷೇತ್ರದಲ್ಲಿ ಸುಮಾರು ಶೇಕಡ 70ರಷ್ಟು ಮಹಳಾ ಉದ್ಯೋಗಿಗಳ ಪಡೆಯೇ ಇರುವ ಹಿನ್ನೆಲೆಯಲ್ಲಿ ಬಹುತೇಕ ಹೊರ ಉದ್ಯೋಗಗಳೂ ಮಹಿಳೆಯರಿಗೇ ಹೋಗುವ ಸಾಧ್ಯತೆ ಇದೆ. ಹೀಗಾಗಿ ಈ ಪ್ಯಾಕೇಜ್ ಮಹಿಳಾ ಸಬಲೀಕರಣದೊಂದಿಗೆ ಸಾಮಾಜಿಕ ಪರಿವರ್ತನೆಗೆ ನೆರವಾಗಲಿದೆ.

ಪ್ರಕಟಿತ ಪ್ಯಾಕೇಜ್ ನ ಪ್ರಮುಖ ಲಕ್ಷಣಗಳು:

ಎ. ಕಾರ್ಮಿಕರ ಭವಿಷ್ಯ ನಿಧಿ ಯೋಜನೆ ಸುಧಾರಣೆಗಳು

• ತಿಂಗಳಿಗೆ 15 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ಸಿದ್ಧ ಉಡುಪು ಕೈಗಾರಿಕೆ ಹೊಸ ಉದ್ಯೋಗಿಗಳಿಗೆ ಮಾಲೀಕರ ಭವಿಷ್ಯ ನಿಧಿ ಕಾಯಿದೆಯಡಿ ಮಾಲೀಕರು ಪಾವತಿಸಬೇಕಾದ ಶೇ.12ರಷ್ಟು ದೇಣಿಗೆಯನ್ನು ಮೊದಲ ಮೂರು ವರ್ಷಗಳ ಕಾಲ ಸರ್ಕಾರವೇ ಭರಿಸಲಿದೆ.

• ಪ್ರಸಕ್ತ ಮಾಲೀಕರ ಶೇ.8.33ರ ವಂತಿಗೆಯನ್ನು ಸರ್ಕಾರ ಪ್ರಧಾನಮಂತ್ರಿಯವರ ಉದ್ಯೋಗ ಪ್ರೋತ್ಸಾಹ ಯೋಜನೆ (ಪಿ.ಎಂ.ಆರ್.ಪಿ.ವೈ.) ಅಡಿ ಭರಿಸುತ್ತಿದೆ. ಜವಳಿ ಸಚಿವಾಲಯ ಮಾಲೀಕರ ವಂತಿಕೆಯ ಹೆಚ್ಚುವರಿ ಶೇ.3.67ರಷ್ಟನ್ನೂ ತಾನೇ ಭರಿಸಲಿದ್ದು, ಇದು ಮುಂದಿನ ಮೂರು ವರ್ಷಗಳಲ್ಲಿ 1,170 ಕೋಟಿ ರೂಪಾಯಿಗಳಾಗಲಿವೆ. ಮಾಸಿಕ 15 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವವರಿಗೆ ಇ.ಪಿ.ಎಫ್. ಅನ್ನು ಐಚ್ಛಿಕಗೊಳಿಸಲಾಗಿದೆ. ಇದು ಕಾರ್ಮಿಕರ ಕೈಯಲ್ಲಿ ಹೆಚ್ಚು ಹಣ ಇರುವಂತೆ ಮಾಡುತ್ತದೆ ಮತ್ತು ಔಪಚಾರಿಕ ವಲಯದಲ್ಲಿ ಉದ್ಯೋಗ ಉತ್ತೇಜಿಸುತ್ತದೆ.

ಬಿ. ಹೆಚ್ಚಿನ ಅವಧಿಯ ಕೆಲಸದ ಮಿತಿ ಹೆಚ್ಚಳ

• ಐ.ಎಲ್.ಓ. ನಿಯಮಗಳ ರೀತ್ಯ ಕಾರ್ಮಿಕರ ಹೆಚ್ಚುವರಿ ಕೆಲಸದ ಅವಧಿ (ಓವರ್ ಟೈಂ) ವಾರದಲ್ಲಿ 8 ಗಂಟೆ ಮೀರುವಂತಿಲ್ಲ.

• ಇದು ಕಾರ್ಮಿಕರ ಗಳಿಕೆಯನ್ನು ಹೆಚ್ಚಿಸುತ್ತದೆ.

ಸಿ. ನಿರ್ದಿಷ್ಟ ಅವಧಿಯ ಉದ್ಯೋಗದ ಪರಿಚಯ.

• ಕೈಗಾರಿಕೆಯ ಋತುಮಾನದ ಪ್ರಕೃತಿಯನ್ನು ಗಮನದಲ್ಲಿಟ್ಟುಕೊಂಡು, ಸಿದ್ಧ ಉಡುಪು ವಲಯಕ್ಕೆ ನಿರ್ಧಿಷ್ಟ ಅವಧಿಯ ಉದ್ಯೋಗ ಪರಿಚಯಿಸಲಾಗುತ್ತಿದೆ.

ಕೆಲಸದ ಅವಧಿ, ವೇತನ, ಭತ್ಯೆ ಮತ್ತು ಇತರ ಶಾಸನಾತ್ಮಕ ಬಾಕಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಅವಧಿಯ ಕಾರ್ಮಿಕರನ್ನು ಖಾಯಂ ನೌಕರರಂತೆಯೇ ಪರಿಗಣಿಸಲಾಗುತ್ತದೆ.

ಡಿ. ಎ.ಟಿ.ಯು.ಎಫ್.ಎಸ್. ಅಡಿ ಹೆಚ್ಚುವರಿ ಪ್ರೋತ್ಸಾಹಕ (ಇನ್ಸೆಂಟೀವ್)

• ಈ ಪ್ಯಾಕೇಜ್ ಉದ್ಯೋಗ ಸೃಷ್ಟಿಯನ್ನು ಪ್ರೋತ್ಸಾಹಿಸಲು ಸಿದ್ಧ ಉಡುಪು ವಲಯಕ್ಕೆ ಪರಿಷ್ಕೃತ ಟಿಯುಎಫ್ಎಸ್ ಅಡಿ ಸಬ್ಸಿಡಿಯನ್ನು ಶೇ.15ರಿಂದ 25ಕ್ಕೆ ಹೆಚ್ಚಿಸುವ ಮೂಲಕ ಇನ್ಪುಟ್ ನಿಂದ ಫಲಿತಾಂಶ ಆಧಾರಿತ ಪ್ರೋತ್ಸಾಹಕವಾಗಿ ಮಾಡಲು ಹೊಸ ದಾರಿ ತೋರಿದೆ.

• ಈ ಯೋಜನೆಯ ವಿಶಿಷ್ಠ ಲಕ್ಷಣ ಏನೆಂದರೆ ಸಬ್ಸಿಡಿಯನ್ನು ನಿರೀಕ್ಷಿತ ಉದ್ಯೋಗ ಸೃಷ್ಟಿಯಾದ ಬಳಿಕವಷ್ಟೇ ನೀಡಲಾಗುತ್ತದೆ.

ಇ. ಹೆಚ್ಚಿನ ಅವಧಿ ಕೆಲಸದ ನ್ಯೂನತೆಯ ವ್ಯಾಪ್ತಿ

• ಇದೇ ಮೊದಲ ಬಾರಿಗೆ ಕೈಗೊಂಡಿರುವ ಕ್ರಮದಲ್ಲಿ, ಈವರೆಗೆ ಮರು ಪಾವತಿ ಮಾಡದೇ ಇರುವ ರಾಜ್ಯದ ಲೆವಿಯನ್ನು ಮರು ಪಾವತಿ ಮಾಡುವ ನೂತನ ಯೋಜನೆ ತರಲಾಗುತ್ತಿದೆ.

• ಈ ನಡೆಯಿಂದಾಗಿ ಬೊಕ್ಕಸಕ್ಕೆ 5500 ಕೋಟಿ ರೂಪಾಯಿಗಳ ಹೊರೆ ಆಗಲಿದೆ, ಆದರೆ ಇದು ವಿದೇಶೀ ಮಾರುಕಟ್ಟೆಯಲ್ಲಿ ಭಾರತದ ರಫ್ತು ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುತ್ತದೆ.

• ಎಲ್ಲ ಕೈಗಾರಿಕೆಗಳಲ್ಲಿ ಸ್ಥಳೀಯ ಸುಂಕ ಪಾವತಿ ಇನ್ಪುಟ್ಸ್ ದರದಲ್ಲಿ ನ್ಯೂನತೆ ಇದೆ. ಇದು ಪೂರ್ವಾಧಿಕಾರ ಯೋಜನೆಯಡಿ ಫ್ಯಾಬ್ರಿಕ್ಸ್ ಆಮದು ಮಾಡಿಕೊಳ್ಳುವುದರಿಂದಲೂ ಇದೆ.

ಎಫ್. ಆದಾಯ ತೆರಿಗೆ ಕಾಯಿದೆಯ 80 ಜೆಜೆಎಎ ಸೆಕ್ಷನ್ ವ್ಯಾಪ್ತಿಯ ವರ್ಧನೆ

• ಸಿದ್ಧ ಉಡುಪು ವಲಯದ ಋತುಮಾನದ ಪ್ರಕೃತಿಯನ್ನು ಗಮನದಲ್ಲಿಟ್ಟುಕೊಂಡು, ಸಿದ್ಧ ಉಡುಪು ವಲಯಕ್ಕೆ ಆದಾಯ ತೆರಿಗೆ ಕಾಯಿದೆಯ 80 ಜೆಜೆಎಎ ಸೆಕ್ಷನ್ ನ 240 ದಿನಗಳ ಪ್ರಾವಿಷನ್ ಅನ್ನು 150 ದಿನಗಳಿಗೆ ಸಡಿಲಿಸಿದೆ.

ಜವಳಿ ಮತ್ತು ಉಡುಪು ವಲಯದ ಸುಧಾರಣೆ ಪ್ಯಾಕೇಜ್ ಕುರಿತ ಪಿಪಿಟಿ :

***