Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಾಗತಿಕ ಪ್ರವಾಸೋದ್ಯಮ ತಾಣವಾಗಿ ಭಾರತದ ಬೆಳವಣಿಗೆಯ ಕುರಿತಾದ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ಭಾರತವು ಜಾಗತಿಕ ಪ್ರವಾಸೋದ್ಯಮ ತಾಣವಾಗಿರುವ ಕುರಿತು ಬರೆದ ಲೇಖನವೊಂದನ್ನು ಹಂಚಿಕೊಂಡಿದ್ದಾರೆ.

ಉತ್ತಮ ಸಂಪರ್ಕ ವ್ಯವಸ್ಥೆ, ಸುಧಾರಿತ ಪ್ರವಾಸಿ ವ್ಯವಸ್ಥೆಗಳು ಮತ್ತು ಸುಲಭ ಡಿಜಿಟಲ್ ಸೌಲಭ್ಯಗಳೊಂದಿಗೆ ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಭಾರತದ ಏಳಿಗೆಯನ್ನು ಈ ಲೇಖನವು ಉಲ್ಲೇಖಿಸುತ್ತದೆ. ಈ ಬೆಳವಣಿಗೆಯು ಸ್ಥಳೀಯ ಉದ್ಯಮಗಳು, ಮಾರ್ಗದರ್ಶಿಗಳು, ಕುಶಲಕರ್ಮಿಗಳು ಮತ್ತು ಸಮುದಾಯಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಲೇಖನದಲ್ಲಿ ತಿಳಿಸಲಾಗಿದೆ.

ಪ್ರವಾಸೋದ್ಯಮದ ಮುಂದಿನ ಹಂತದಲ್ಲಿ ‘ಸುಸ್ಥಿರತೆ’ಗೆ ಪ್ರಮುಖ ಆದ್ಯತೆ ನೀಡುವುದನ್ನು ಈ ಲೇಖನವು ಮತ್ತಷ್ಟು ಒತ್ತಿಹೇಳುತ್ತದೆ; ಇದು ಭಾರತದ ಶ್ರೀಮಂತ ಪರಂಪರೆಯನ್ನು ಆರ್ಥಿಕ ಅವಕಾಶಗಳೊಂದಿಗೆ ಜೋಡಿಸುವುದರ ಜೊತೆಗೆ ಪ್ರಯಾಣಿಕರಿಗೆ ಉತ್ತಮ ಅನುಭವಗಳನ್ನು ಒದಗಿಸುತ್ತದೆ.

ಪ್ರಧಾನಮಂತ್ರಿಯವರ ಕಚೇರಿಯು ‘ಎಕ್ಸ್’ ಪೋಸ್ಟ್‌ನಲ್ಲಿ ಹೀಗೆ ಹೇಳಿದೆ:

“ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಭಾರತದ ಏಳಿಗೆಯು ಉತ್ತಮ ಸಂಪರ್ಕ, ಸುಧಾರಿತ ಪ್ರವಾಸಿ ಸೌಲಭ್ಯಗಳು ಮತ್ತು ಸುಲಭ ಡಿಜಿಟಲ್ ಪ್ರವೇಶವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಬರೆದಿದ್ದಾರೆ. ಈ ಬೆಳವಣಿಗೆಯು ಸ್ಥಳೀಯ ಉದ್ಯಮಗಳು, ಮಾರ್ಗದರ್ಶಿಗಳು, ಕುಶಲಕರ್ಮಿಗಳು ಮತ್ತು ಸಮುದಾಯಗಳಿಗೆ ಹೊಸ ಅವಕಾಶಗಳನ್ನು ತೆರೆದುಕೊಡುತ್ತಿದೆ.

ಪ್ರವಾಸೋದ್ಯಮದ ಮುಂದಿನ ಹಂತದಲ್ಲಿ ಸುಸ್ಥಿರತೆಯು ಕೇಂದ್ರಬಿಂದುವಾಗಿದ್ದು, ಭಾರತವು ತನ್ನ ಶ್ರೀಮಂತ ಪರಂಪರೆಯನ್ನು ಆರ್ಥಿಕ ಅವಕಾಶಗಳೊಂದಿಗೆ ಜೋಡಿಸುತ್ತಿದೆ ಹಾಗೂ ಪ್ರಯಾಣಿಕರಿಗೆ ಉತ್ತಮ ಅನುಭವಗಳನ್ನು ಸೃಷ್ಟಿಸುತ್ತಿದೆ.”

 

*****