ಪಿಎಂಇಂಡಿಯಾ
ನವದೆಹಲಿಯಲ್ಲಿ ವಿಶ್ವದಾದ್ಯಂತ ಎಲ್ಲಡೆಯಿಂದ ಬಂದ ವಿವಿಧ ವಾಹನ ಉತ್ಪಾದನಾ ಮತ್ತು ಸಾರಿಗೆ ಸಾಗಾಟ ಸಂಸ್ಥೆಗಳ ನಾಯಕರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪ್ರತಿಯೊಬ್ಬರ ಜೊತೆ ಖುದ್ದಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.
ಟೊಯೊಟೋ, ಸಾಯಿಕ್ ಮೋಟರ್ ಕೊರ್ಪೊರೇಷನ್ ಶಾಂಘೈ, ಬೋಸ್ಚ್ , ಎ.ಬಿ.ಬಿ. ನಿಯಮಿತ., ಹ್ಯೂಂಡೈ ಮೋಟರ್ ಕಂಪನಿ., ಫೋರ್ಡ್ ಸ್ಮಾರ್ಟ್ ಮೊಬಿಲಿಟಿ ಎಲ್.ಎಲ್.ಸಿ., ಊಬರ್ ಏವಿಯೇಷನ್ ಮುಂತಾದ ವಿವಿಧ ಸಂಸ್ಥೆಗಳ ಉನ್ನತ ಹಂತದ ನಿಯೋಗ ಪ್ರಧಾನಮಂತ್ರಿ ಅವರನ್ನು ಭೇಟಿಯಾಯಿತು.
ಈ ಸಂಸ್ಥೆಗಳು ನವದೆಹಲಿಯಲ್ಲಿ ಜರಗುವ ಗ್ಲೋಬಲ್ ಮೊಬಿಲಿಟಿ ಸುಮಿತ್ – ಮೂವ್ ಜಾಗತಿಕ ಸಮಾವೇಶದಲ್ಲಿ ಭಾಗವಹಿಸುತ್ತವೆ.