Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಾಫ್ನಾದ ನವೀಕೃತ ದುರೈಯಪ್ಪ ಕ್ರೀಡಾಂಗಣವನ್ನು ವಿಡಿಯೋ ಸಂಪರ್ಕದ ಮೂಲಕ ಶ್ರೀಲಂಕಾ ಜನತೆಗೆ ಸಮರ್ಪಿಸುವ ವೇಳೆ ಪ್ರಧಾನಿ ಹೇಳಿಕೆ

ಜಾಫ್ನಾದ ನವೀಕೃತ ದುರೈಯಪ್ಪ ಕ್ರೀಡಾಂಗಣವನ್ನು ವಿಡಿಯೋ ಸಂಪರ್ಕದ ಮೂಲಕ ಶ್ರೀಲಂಕಾ ಜನತೆಗೆ ಸಮರ್ಪಿಸುವ ವೇಳೆ ಪ್ರಧಾನಿ ಹೇಳಿಕೆ

ಜಾಫ್ನಾದ ನವೀಕೃತ ದುರೈಯಪ್ಪ ಕ್ರೀಡಾಂಗಣವನ್ನು ವಿಡಿಯೋ ಸಂಪರ್ಕದ ಮೂಲಕ ಶ್ರೀಲಂಕಾ ಜನತೆಗೆ ಸಮರ್ಪಿಸುವ ವೇಳೆ ಪ್ರಧಾನಿ ಹೇಳಿಕೆ


ಸುಭ್ ಉದೇಸನಕ್ ವೇವ, ಅಯುಬೋವನ್

ಕಳೆದ ವರ್ಷ ಮಾರ್ಚ್ ನಲ್ಲಿ ನಾನು ಜಾಫ್ನಾದಲ್ಲಿದ್ದೆ.

ಜಾಫ್ನಾದ ಜನತೆಯು ನನಗೆ ತೋರಿದ ಪ್ರೀತಿ ಮತ್ತು ವಾತ್ಸಲ್ಯ ಇನ್ನೂ ನನ್ನ ಮನದಲ್ಲಿ ಹಸಿರಾಗಿದೆ.

ಅದೊಂದು ಐತಿಹಾಸಿಕ ದಿನ. ಕಾರಣ ಅದು ಭಾರತದ ಪ್ರಧಾನಮಂತ್ರಿಯೊಬ್ಬರು ಜಾಫ್ನಾಗೆ ನೀಡಿದ ಪ್ರಥಮ ಭೇಟಿ.

ಇಂದು ಮತ್ತೊಂದು ಮೈಲಿಗಲ್ಲಿನ ದಿನ.

ನಾವು ಮತ್ತೊಮ್ಮೆ ಶ್ರೀಲಂಕಾದ ಜನರೊಂದಿಗೆ ಮತ್ತು ಜಾಫ್ನಾದ ನಿವಾಸಿಗಳೊಂದಿಗೆ ನಮ್ಮ ಸಹಭಾಗಿತ್ವವನ್ನು ಆಚರಿಸುತ್ತಿದ್ದೇವೆ.

ಇಂದು, ಅಧ್ಯಕ್ಷ ಸಿರಿಸೇನಾ ಅವರೊಂದಿಗೆ ನಾವು ನವೀಕೃತ ದುರೈಯಪ್ಪ ಕ್ರೀಡಾಂಗಣವನ್ನು ಶ್ರೀಲಂಕಾದ ಜನತೆಗೆ ಸಮರ್ಪಿಸಿದ್ದೇವೆ.

ಮತ್ತು, ನಾವು ಒಂಟಿಯಾಗಿಲ್ಲ.

ಆಧುನಿಕ ಸಂವಹನ ಸಾಧನಗಳು 125 ಕೋಟಿ ಭಾರತೀಯರನ್ನು ಮತ್ತು ಶ್ರೀಲಂಕಾದ ಸ್ನೇಹಪರ ಜನರವನ್ನು ಈ ಸಂಭ್ರಮದಲ್ಲಿ ಒಗ್ಗೂಡಿಸಿವೆ.

ಸ್ನೇಹಿತರೇ,

ಸುಮಾರು 20 ವರ್ಷಗಳ ಕಾಯುವಿಕೆಯ ಬಳಿಕ, ಮತ್ತೊಮ್ಮೆ ನಿಮ್ಮ ಹರ್ಷೋದ್ಗಾರ ಮತ್ತು ಚಪ್ಪಾಳೆ ದುರೈಯಪ್ಪ ಕ್ರೀಡಾಂಗಣದಲ್ಲಿ ಮಾರ್ದನಿಸಿದೆ.

ನಾವು ಸಾವಿರಾರು ಕಿಲೋ ಮೀಟರ್ ದೂರದ ದೆಹಲಿಯಲ್ಲಿ ಕುಳಿತಿದ್ದರೂ, ನಾವು ಜಾಫ್ನಾದಲ್ಲಿ ಆಗುತ್ತಿರುವ ಬದಲಾವಣೆಯ ನಾಡಿ ಮಿಡಿತವನ್ನು ಅನುಭವಿಸಬಲ್ಲವರಾಗಿದ್ದೇವೆ.

ದುರೈಯಪ್ಪ ಕ್ರೀಡಾಂಗಣ ಕೇವಲ ಇಟ್ಟಿಗೆ ಮತ್ತು ಗಾರೆಯಷ್ಟೇ ಅಲ್ಲ.

ಇದು ಆಶಾಭಾವನೆ ಮತ್ತು ಆರ್ಥಿಕ ಅಭಿವೃದ್ಧಿಯ ಸಂಕೇತ.

ಇದು ಜಾಫ್ನಾ ಯುವಜನರ ಪ್ರಗತಿಪರ ಮತ್ತು ಆರೋಗ್ಯದ ಭವಿಷ್ಯದ ಅಖಾಡ.

ಇದು ಹಿಂಸೆಯ ಪರಂಪರೆಯನ್ನು ದೂರಮಾಡಿ ಮತ್ತು ಆರ್ಥಿಕ ಪ್ರಗತಿಯ ದಾರಿಯನ್ನು ತೋರುವ ನಿಮ್ಮ ಸಂಕಲ್ಪದ ಪ್ರದರ್ಶನವಾಗಿದೆ.

ಇದರ ಬುನಾದಿಗಳು ನಿಮ್ಮ ಧೈರ್ಯ ಮತ್ತು ಶ್ರೇಷ್ಠ ಬಲಿದಾನದ ಬೆಂಬಲದಿಂದ ಕೂಡಿವೆ.

ಇದರ ಯಶಸ್ವೀ ನಿರ್ಮಾಣ ಕಳೆದುದನ್ನು ಮರೆತು ಭವಿಷ್ಯದ ವಿಶ್ವಾಸಪೂರ್ಣ ಭವಿಷ್ಯದತ್ತ ನಿಮ್ಮ ನೋಟದ ಸಂಕೇತವಾಗಿದೆ.

ಘನತೆವೆತ್ತ ಸಿರಿಸೇನಾ ಅವರೇ,

ಈ ಯೋಜನೆಯ ಯಶಸ್ಸಿಗೆ ನಿಮ್ಮ ಮತ್ತು ಪ್ರಧಾನಮಂತ್ರಿ ಶ್ರೀ ವಿಕ್ರಮ ಸಿಂಘೆ, ಉತ್ತರ ಪ್ರಾಂತ್ಯದ ಗೌರ್ನರ್ ಮತ್ತು ಮುಖ್ಯಮಂತ್ರಿಗಳ ದೂರದರ್ಶಿತ್ವದ ನಾಯಕತ್ವಕ್ಕೆ ನಾನು ವಂದಿಸುತ್ತೇನೆ.

ಸ್ನೇಹಿತರೇ,

ನಮ್ಮ ಸಂಬಂಧಗಳು ಕೇವಲ ಸರ್ಕಾರಗಳಿಗೆ ಮಾತ್ರವೇ ಸೀಮಿತವಾದ್ದಲ್ಲ. ಅದು ನಮ್ಮ ಶ್ರೀಮಂತ ಇತಿಹಾಸ, ಸಂಸ್ಕೃತಿ, ಕಲೆ ಮತ್ತು ಭೂಗೋಳದಲ್ಲಿ ಅಡಕವಾಗಿದೆ.
ತನ್ನ ಆರ್ಥಿಕ ಪ್ರಗತಿಯು ನೆರೆಯ ದೇಶಗಳಿಗೆ ಲಾಭವನ್ನು ತರಬೇಕು, ಪ್ರಗತಿಯ ಚಾಲನೆ ನೀಡಬೇಕು ಎಂದು ಭಾರತ ಬಲವಾಗಿ ನಂಬಿದೆ.

ದೈರೈಯಪ್ಪ ಕ್ರೀಡಾಂಗಣ ನಮ್ಮ ಸಹಕಾರದ ಸ್ಫೂರ್ತಿಯನ್ನು ಸ್ಪುರಿಸುತ್ತದೆ. ಶ್ರೀಲಂಕಾದ ಅಭಿವೃದ್ಧಿಗೆ ಭಾರತದ ಬೆಂಬಲ ನಮ್ಮ ಸ್ನೇಹದ ವಿಶ್ವಾಸವಾಗಿದೆ.

ಮತ್ತು, ಇದು ನಿಮ್ಮ ಆದ್ಯತೆಗಳು ಮತ್ತು ನಿಮ್ಮ ಅಗತ್ಯಗಳಿಗನುಗುಣವಾಗಿ ಮತ್ತು ನೀವು ಅವಲಂಬಿಸಿರಬಹುದಾದ ಭರವಸೆಗಳ ಮೇಲಿದೆ.

ಇದುವೇ ನಮ್ಮ ಬಾಂಧವ್ಯವನ್ನು ಪ್ರಸ್ತುತಗೊಳಿಸಿದೆ ಮತ್ತು ಭವಿಷ್ಯದ ಆಸರೆಯಾಗಿದೆ.

ಸ್ನೇಹಿತರೇ,

ಭಾರತವು ಆರ್ಥಿಕವಾಗಿ ಸಮೃದ್ಧವಾದ ಶ್ರೀಲಂಕಾವನ್ನು ನೋಡ ಬಯಸುತ್ತದೆ.

ಶ್ರೀಲಂಕಾವು: – ಏಕತೆ ಮತ್ತು ಸಮಗ್ರತೆ; – ಶಾಂತಿ, ಸೌಹಾರ್ದತೆ ಮತ್ತು ಭದ್ರತೆ; ಮತ್ತು -ಸಮಾನ ಅವಕಾಶ ಮತ್ತು ಗೌರವ ಹೊಂದಿರಬೇಕೆಂದು ಬಯಸುತ್ತದೆ.

ಇದು ದೇಶದೆಲ್ಲೆಡೆ ಎಲ್ಲ ಜನರಲ್ಲಿ ಉಳಿದುಕೊಂಡಿದೆ.

ಘನತೆವೆತ್ತ ಸಿರಿಸೇನಾ ಅವರೇ ಮತ್ತು ಗೆಳೆಯರೇ,

ಇನ್ನು ಈಗಿನಿಂದ 72 ಗಂಟೆಗಳ ಬಳಿಕ ವಿಶ್ವವು ಎರಡನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಜೂನ್ 21ರಂದು ಆಚರಿಸಲಿದೆ.

ಶ್ರೀಲಂಕಾ 2014ರಲ್ಲಿ ವಿಶ್ವಸಂಸ್ಥೆಯ ಈ ನಿರ್ಣಯದ ಮೊದಲ ಬೆಂಬಲಿಗನಾಗಿತ್ತು.

ಮತ್ತು ಇಂದು, ನಾವು ಜಾಫ್ನಾದ ಈ ದೊರೈಯಪ್ಪ ಕ್ರೀಡಾಂಗಣದ ಮೂಲಕ, ಅಂತಾರಾಷ್ಟ್ರೀಯ ಯೋಗ ದಿನ ಆರಂಭದ ಆಚರಣೆಯ ಪರದೆಯನ್ನು ಎಳೆದಿದ್ದೇವೆ.

ಸೂರ್ಯ ನಮಸ್ಕಾರ, ಈಗ್ಗೆ ಸ್ವಲ್ಪ ಹೊತ್ತಿನ ಮೊದಲು ನಡೆಯಿತು. ಇದು ಪ್ರಕೃತಿಯೊಂದಿಗೆ ಬದುಕುವ ವಿಶ್ವದ ಸಮಗ್ರ ಆರೋಗ್ಯ, ಸಾಮರಸ್ಯದ ಸಂದೇಶ ಸಾರುತ್ತದೆ.

ಇದಕ್ಕಿಂತ ಸೂಕ್ತ ಆರಂಭವನ್ನು ನಾವು ಯೋಗ ದಿನಕ್ಕೆ ಕೇಳುವುದಿಲ್ಲ.

ಘನತೆವೆತ್ತ ಅಧ್ಯಕ್ಷ ಸಿರಿಸೇನಾ ಅವರೇ,

ಈ ಸಂದರ್ಭದಲ್ಲಿ ನಿಮ್ಮ ನಾಯಕತ್ವ ಮತ್ತು ನಿಮ್ಮೊಂದಿಗೆ ನಿಂತಿರುವ ಜಾಫ್ನಾದ ಎಲ್ಲ ಪ್ರೀತಿಪೂರ್ವಕ ಜನತೆಗೆ ನಾನು ಮತ್ತೊಮ್ಮೆ ನಿಮಗೆ ಧನ್ಯವಾದ ಅರ್ಪಿಸುತ್ತೇನೆ,
ದುರೈಯಪ್ಪ ಕ್ರೀಡಾಂಗಣವು ನಮ್ಮ ದೀರ್ಘಕಾಲೀನ ಸ್ನೇಹದ ಮತ್ತೊಂದು ಸಂಕೇತವಾಗಿ ನಿಲ್ಲಲಿದೆ.

ತನ್ನ ಎಲ್ಲ ಪ್ರಜೆಗಳ ಪ್ರಗತಿ ಮತ್ತು ಸಮೃದ್ಧಿಗಾಗಿ ತನ್ನದೇ ದಾರಿಯನ್ನು ರೂಪಿಸಿರುವ ಶ್ರೀಲಂಕಾದ ಜೊತೆ ಭಾರತ ಜೊತೆಗೂಡಿ ನಡೆಯಲಿದೆ.

ನಾನು ಮತ್ತೊಮ್ಮೆ ಭಾರತದ 125 ಕೋಟಿ ಜನತೆಯ ಪರವಾಗಿ ಶುಭ ಕೋರುತ್ತೇನೆ.

ಬೊಹೋಮಾ ಸ್ತುತಿ, ಮಿಕ್ಕ ನಂಡ್ರಿ, ಧನ್ಯವಾದಗಳು.

AKT/HS