Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಜಿಸಾಟ್ -11’ರ ಯಶಸ್ವೀ ಉಡಾವಣೆಗಾಗಿ ಪ್ರಧಾನಮಂತ್ರಿ ಅವರು ಇಸ್ರೋವನ್ನು ಅಭಿನಂದಿಸಿದರು.


‘ಜಿಸಾಟ್ -11’ರ ಯಶಸ್ವೀ ಉಡಾವಣೆಗಾಗಿ ಇಸ್ರೋವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು.

“ಸಂಪರ್ಕರಹಿತ ಪ್ರದೇಶಗಳನ್ನು ಸಂಪರ್ಕಿಸುವ ಮೂಲಕ ಭಾರತದ ಕೋಟ್ಯಾಂತರ ಜನರ ಜೀವನವನ್ನು ಬದಲಾಯಿಸಲಿರುವ ಈ ಉಪಗ್ರಹವು , ನಮ್ಮ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಬೃಹತ್ ಮೈಲುಗಲ್ಲಾಗಿದೆ. ಭಾರತದ ಅತಿದೊಡ್ಡ , ಅತ್ಯಾಧುನಿಕ ಮತ್ತು ಅತ್ಯಧಿಕ ಗಾತ್ರದ ಸಂವಹನ ಉಪಗ್ರಹ ಜಿಸಾಟ್ -11’ರ ಯಶಸ್ವೀ ಉಡಾವಣೆಗಾಗಿ ಇಸ್ರೋಗೆ ಅಭಿನಂದನೆಗಳು.

ಸದಾ ಆವಿಷ್ಕಾರದಲ್ಲಿರುವ, ಉತ್ಕೃಷ್ಟತೆಯ ಗೂಣಮಟ್ಟದಲ್ಲಿ ನೂತನ ಉನ್ನತಿ, ಸಾಧನೆ ಮತ್ತು ಯಶಸ್ಸುಗಳನ್ನು ಕಾಣುತ್ತಿರುವ ನಮ್ಮ ವಿಜ್ಞಾನಿಗಳ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ. ಅವರ ಪ್ರಶಂಸಾರ್ಹ ಕಾರ್ಯಗಳು ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆಯಾಗಿದೆ.” ಎಂದು ಪ್ರಧಾನಮಂತ್ರಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

*****