Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜೈಪುರ ಮೆಟ್ರೋ ಯೋಜನೆ ಹಂತ-2ಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಜೈಪುರ ಮೆಟ್ರೋ ಹಂತ -2 ಕ್ಕೆ ಅನುಮೋದನೆ ನೀಡಿದೆ. ಇದು ಪ್ರಹ್ಲಾದಪುರದಿಂದ ತೋಡಿ ಮೋಡ್‌ವರೆಗಿನ 41 ಕಿ.ಮೀ ಉದ್ದದ ಪರಿವರ್ತಕ ಉತ್ತರ-ದಕ್ಷಿಣ ಕಾರಿಡಾರ್‌ ಆಗಿದ್ದು, 36 ನಿಲ್ದಾಣಗಳನ್ನು ಒಳಗೊಂಡಿದ್ದು, ಒಟ್ಟು ಯೋಜನಾ ವೆಚ್ಚ 13,037.66 ಕೋಟಿ ರೂ. ಈ ಯೋಜನೆಯನ್ನು ಭಾರತ ಸರ್ಕಾರ ಮತ್ತು ರಾಜಸ್ಥಾನ ಸರ್ಕಾರದ 50:50 ಜಂಟಿ ಉದ್ಯಮವಾದ ರಾಜಸ್ಥಾನ ಮೆಟ್ರೋ ರೈಲು ನಿಗಮ ನಿಯಮಿತ (ಆರ್‌ಎಂಆರ್‌ಸಿಎಲ್‌) ಅನುಷ್ಠಾನಗೊಳಿಸಲಿದೆ.

ಹಂತ -2 ಕಾರಿಡಾರ್‌ ಪ್ರಮುಖ ಚಟುವಟಿಕೆ ನೋಡ್‌ಗಳಾದ ಸೀತಾಪುರ ಕೈಗಾರಿಕಾ ಪ್ರದೇಶ, ವಿಕೆಐಎ, ಜೈಪುರ ವಿಮಾನ ನಿಲ್ದಾಣ, ಟೋಂಕ್‌ ರಸ್ತೆ, ಎಸ್‌ಎಂಎಸ್‌ ಆಸ್ಪತ್ರೆ ಮತ್ತು ಕ್ರೀಡಾಂಗಣ, ಅಂಬಾಬರಿ ಮತ್ತು ವಿದ್ಯಾಧರ್‌ ನಗರಕ್ಕೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಇದು ವಿಮಾನ ನಿಲ್ದಾಣ ಪ್ರದೇಶದಲ್ಲಿಭೂಗತ ನಿಲ್ದಾಣಗಳನ್ನು ಒಳಗೊಂಡಿದೆ ಮತ್ತು ಯೋಜಿತ ಇಂಟರ್ಚೇಂಜ್‌ಗಳು ಮತ್ತು ಫೀಡರ್‌ ವ್ಯವಸ್ಥೆಗಳ ಮೂಲಕ ಕಾರ್ಯಾಚರಣೆಯ ಹಂತ -1 ರೊಂದಿಗೆ ಸಂಯೋಜಿಸುತ್ತದೆ. ಜತೆಗೆ ನಗರದಾದ್ಯಂತ ಏಕೀಕೃತ ಮತ್ತು ನಿರಂತರ ಮೆಟ್ರೋ ಜಾಲವನ್ನು ಖಚಿತಪಡಿಸುತ್ತದೆ.

ಪ್ರಸ್ತುತ, ಜೈಪುರ ಮೆಟ್ರೋ ಹಂತ -1 ಕಡಿಮೆ ಆದರೆ ನಿರ್ಣಾಯಕ 11.64 ಕಿ.ಮೀ ಕಾರಿಡಾರ್‌ನಲ್ಲಿ ಸರಾಸರಿ ದೈನಂದಿನ ಸುಮಾರು 60,000 ಪ್ರಯಾಣಿಕರನ್ನು ದಾಖಲಿಸುತ್ತದೆ. ಹಂತ -2 ರ ಕಾರ್ಯಾರಂಭದೊಂದಿಗೆ, ಮೆಟ್ರೋ ಜಾಲವು ಪ್ರಯಾಣಿಕರ ಸಂಖ್ಯೆಯಲ್ಲಿಅನೇಕ ಪಟ್ಟು ಹೆಚ್ಚಳಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ, ಜೈಪುರದಲ್ಲಿಸಾರ್ವಜನಿಕ ಸಾರಿಗೆಯ ಪಾಲನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಮತ್ತು ಖಾಸಗಿ ವಾಹನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.

ಜೈಪುರ ಮೆಟ್ರೋ ಹಂತ -2 ಅಂತರ-ಸಚಿವಾಲಯ ಸಮಾಲೋಚನೆ, ನೆಟ್‌ವರ್ಕ್‌ ಪ್ಲಾನಿಂಗ್‌ ಗ್ರೂಪ್‌ ಪರಿಶೀಲನೆ ಮತ್ತು ಸಾರ್ವಜನಿಕ ಹೂಡಿಕೆ ಮಂಡಳಿಯ ಮೌಲ್ಯಮಾಪನ ಸೇರಿದಂತೆ ಅನೇಕ ಹಂತಗಳಲ್ಲಿಸಮಗ್ರ ಮೌಲ್ಯಮಾಪನಕ್ಕೆ ಒಳಗಾಗಿದೆ. ಈ ಯೋಜನೆಯು ಆರ್ಥಿಕ ಆಂತರಿಕ ಆದಾಯ ದರವನ್ನು (ಇಐಆರ್‌ಆರ್‌) ಹೊಂದಿದೆ, ಇದು ಮಿತಿಗಿಂತ (ಶೇ.14) ಹೆಚ್ಚಾಗಿದೆ, ಇದು ಬಲವಾದ ಸಾಮಾಜಿಕ-ಆರ್ಥಿಕ ಕಾರ್ಯಸಾಧ್ಯತೆಯನ್ನು ಸೂಚಿಸುತ್ತದೆ. ಮೆಟ್ರೋ ರೈಲು ನೀತಿ, 2017 ರ ಪ್ರಕಾರ, ಭಾರತ ಸರ್ಕಾರ ಮತ್ತು ರಾಜಸ್ಥಾನ ಸರ್ಕಾರದ ಈಕ್ವಿಟಿ ಬೆಂಬಲ, ಅಧೀನ ಸಾಲ ಮತ್ತು ಬಹುಪಕ್ಷೀಯ ಹಣಕಾಸು ಮೂಲಕ ಧನಸಹಾಯವನ್ನು ರೂಪಿಸಲಾಗಿದೆ.

ಈ ಯೋಜನೆಯು ರಾಜಸ್ಥಾನ ಟಿಒಡಿ ನೀತಿ -2025, ಪ್ರಸ್ತಾವಿತ ಯುಎಂಟಿಎ ಸುಧಾರಣೆಗಳು ಮತ್ತು ರಾಷ್ಟ್ರೀಯ ಸುಸ್ಥಿರ ನಗರ ಸಾರಿಗೆ ಉದ್ದೇಶಗಳೊಂದಿಗೆ ಹೊಂದಿಕೆಯಾಗಿದೆ. 2031ರ ಸೆಪ್ಟೆಂಬರ್‌ ರೊಳಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿರುವ ಜೈಪುರ ಮೆಟ್ರೋ ಹಂತ -2 ಸಂಚಾರ ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ವಾಹನ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿವಾಸಿಗಳು, ಕಾರ್ಮಿಕರು ಮತ್ತು ಪ್ರವಾಸಿಗರಿಗೆ ಚಲನಶೀಲತೆಯನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದು ಜೈಪುರದ ಸ್ಥಾನವನ್ನು ಆಧುನಿಕ, ಭವಿಷ್ಯಕ್ಕೆ ಸಿದ್ಧವಾದ ನಗರವಾಗಿ ಬಲಪಡಿಸುತ್ತದೆ ಮತ್ತು ವಿಕಸಿತ ಭಾರತ ಮತ್ತು ವಿಕಸಿತ ರಾಜಸ್ಥಾನದತ್ತ ಒಂದು ಹೆಜ್ಜೆಯಾಗಿದೆ.

ಜೈಪುರವು ಈಗಾಗಲೇ ಹಂತ -1 ರ ಅಡಿಯಲ್ಲಿಕಾರ್ಯಾಚರಣಾ ಮೆಟ್ರೋ ವ್ಯವಸ್ಥೆಯನ್ನು ಹೊಂದಿದೆ. ಇದು ಪೂರ್ವ-ಪಶ್ಚಿಮ ಕಾರಿಡಾರ್‌ ಉದ್ದಕ್ಕೂ ಮಾನಸ ಸರೋವರದಿಂದ ಬಡಿ ಚೌಪರ್‌ವರೆಗೆ ಚಲಿಸುತ್ತದೆ. ಇದು 11 ನಿಲ್ದಾಣಗಳೊಂದಿಗೆ 11.64 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ, ಇದು ಪ್ರಮುಖ ವಸತಿ ಮತ್ತು ವಾಣಿಜ್ಯ ಪ್ರದೇಶವನ್ನು ಜೈಪುರದ ಕೇಂದ್ರ ವ್ಯಾಪಾರ ಜಿಲ್ಲೆಯೊಂದಿಗೆ ಅಂದರೆ ಪಾರಂಪರಿಕ ಗೋಡೆಯ ನಗರದೊಂದಿಗೆ ಸಂಪರ್ಕಿಸುತ್ತದೆ. ಉತ್ತರ-ದಕ್ಷಿಣ ಅಕ್ಷ ದಲ್ಲಿಯೋಜಿಸಲಾದ ಜೈಪುರ ಮೆಟ್ರೋ ಹಂತ-2 ಅಸ್ತಿತ್ವದಲ್ಲಿರುವ ಕಾರಿಡಾರ್‌ಗೆ ಪೂರಕವಾಗಿದೆ ಮತ್ತು ನಗರವ್ಯಾಪಿ, ಜೈಪುರ ಮೆಟ್ರೋ ಸಂಪರ್ಕವನ್ನು ಒದಗಿಸುತ್ತದೆ, ಸಂಚಾರ ದಟ್ಟಣೆಯನ್ನು ಗಮನಾರ್ಹವಾಗಿ ಸರಾಗಗೊಳಿಸುತ್ತದೆ ಮತ್ತು ಒಟ್ಟಾರೆ ನಗರ ಚಲನಶೀಲತೆಯನ್ನು ಸುಧಾರಿಸುತ್ತದೆ.

 

******