Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜೋಗಬಾನಿ-ಬಿರಾತ್ನಗರ್‌ ನ ಎರಡನೇ ಸಮಗ್ರ ತಪಾಸಣೆ ಠಾಣೆ, ಪ್ರಧಾನಿಯವರಿಂದ ಉದ್ಘಾಟನೆ


ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿ ಕೆ.ಪಿ. ಓಲಿ ಜತೆ ಜಂಟಿಯಾಗಿ ಎರಡನೇ ಸಮಗ್ರ ತಪಾಸಣೆ ಠಾಣೆಯನ್ನು ಜೋಗಬಾನಿ-ಬಿರಾತ್ನಗರ್‌ ಅನ್ನು ಉದ್ಘಾಟಿಸಲಿದ್ದಾರೆ. ಭಾರತ-ನೇಪಾಳ ಗಡಿಯಲ್ಲಿ ಜನರ ಸಂಚಾರಕ್ಕೆ ಮತ್ತು ವ್ಯಾಪಾರ ವಹಿವಾಟಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಭಾರತದ ನೆರವಿನೊಂದಿಗೆ ಈ ತಪಾಸಣೆ ಠಾಣೆಯನ್ನು ಜೋಗಬಾನಿ-ಬಿರಾತ್ನಗರ್‌ನಲ್ಲಿ ಸ್ಥಾಪಿಸಲಾಗಿದೆ.

ನೇಪಾಳದಲ್ಲಿ ಸಂಭವಿಸಿದ ಭೂಕಂಪದ ಬಳಿಕ ಭಾರತದ ಹಣಕಾಸಿನ ನೆರವಿನಲ್ಲಿ ಕೈಗೊಂಡಿರುವ ವಸತಿ ನಿರ್ಮಾಣದ ಪ್ರಗತಿಯನ್ನು ಇಬ್ಬರು ಪ್ರಧಾನಿಗಳು ಪರಿಶೀಲಿಸಲಿದ್ದಾರೆ. ಗೋರ್ಖಾ ಮತ್ತು ನುವಾಕೋತ್‌ ಜಿಲ್ಲೆಗಳಲ್ಲಿ 50,000 ವಸತಿ ನಿರ್ಮಾಣಕ್ಕೆ ಭಾರತ ಸರ್ಕಾರ ಒಪ್ಪಿಕೊಂಡಿದ್ದು, ಈಗಾಗಲೇ 45,000 ವಸತಿ ನಿರ್ಮಾಣ ಪೂರ್ಣಗೊಂಡಿದೆ.