Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಡಾ. ಭೂಪೇನ್ ಹಜಾರಿಕಾ ಅವರ 100ನೇ ಜನ್ಮ ದಿನಾಚರಣೆಯಂದು ಪ್ರಧಾನಮಂತ್ರಿ ಅವರಿಂದ ಗೌರವ ನಮನ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿಗ್ಗಜರಾದ ಡಾ. ಭೂಪೇನ್ ಹಜಾರಿಕಾ ಅವರ ಜನ್ಮ ಶತಮಾನೋತ್ಸವ ದಿನಾಚರಣೆಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಡಾ. ಭೂಪೇನ್ ಹಜಾರಿಕಾ ಅವರ ಧ್ವನಿಯು ಅಸ್ಸಾಂನ ಅಂತರಾಳ ಮತ್ತು ಈಶಾನ್ಯದ ಚೈತನ್ಯವನ್ನು ಇಡೀ ರಾಷ್ಟ್ರಕ್ಕೆ ಕೊಂಡೊಯ್ದಿತು ಎಂದು ಸ್ಮರಿಸಿರುವ ಪ್ರಧಾನಮಂತ್ರಿ, ಡಾ. ಹಜಾರಿಕಾ ಅವರು ತಮ್ಮ ಸಂಗೀತದ ಮೂಲಕ ಅಸಂಖ್ಯಾತ ಜನರ ಭಾವ ಮತ್ತು ಚೈತನ್ಯವನ್ನು ಸುಂದರವಾಗಿ ಅಭಿವ್ಯಕ್ತಗೊಳಿಸಿ ಜನರ ನಡುವಿನ ಬಾಂಧವ್ಯ ನಿಕಟಗೊಳಿಸಿದರು ಎಂದು ಹೇಳಿದ್ದಾರೆ.

ಗುವಾಹಟಿಯಲ್ಲಿ ಕಳೆದ ವರ್ಷ ಆಯೋಜಿಸಲಾಗಿದ್ದ ಡಾ. ಹಜಾರಿಕಾ ಅವರ ಜನ್ಮ ಶತಮಾನೋತ್ಸವದ ಆರಂಭದಲ್ಲಿ ಪಾಲ್ಗೊಂಡಿದ್ದನ್ನು ಶ್ರೀ ಮೋದಿ ಅವರು ಹೃದಯಾಂತರಾಳದಿಂದ ನೆನಪು ಮಾಡಿಕೊಂಡಿದ್ದಾರೆ.

ಭೂಪೇನ್ ದಾ ಅವರ ಜೀವನ ಮತ್ತು ಕಾರ್ಯವು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತಲೇ ಇರಲಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:

“ದಿಗ್ಗಜರಾದ ಡಾ. ಭೂಪೇನ್ ಹಜಾರಿಕಾ ಅವರ 100ನೇ ಜನ್ಮ ವಾರ್ಷಿಕೋತ್ಸವದಂದು ಅವರ ಸ್ಮರಣೆ.

ಅವರ ಧ್ವನಿ ಅಸ್ಸಾಂನ ಅಂತರಾಳ ಮತ್ತು ಈಶಾನ್ಯದ ಚೈತನ್ಯವನ್ನು ಇಡೀ ರಾಷ್ಟ್ರಕ್ಕೆ ಪಸರಿಸಿತು.

ಅವರು ತಮ್ಮ ಸಂಗೀತದ ಮೂಲಕ ಅಸಂಖ್ಯಾತ ಜನರ ಭಾವನೆ ಮತ್ತು ಚೈತನ್ಯಕ್ಕೆ ಸುಂದರ ಅಭಿವ್ಯಕ್ತಿ ನೀಡಿದರು. ಅವರ ಹಾಡುಗಳು ಜನರನ್ನು ಹತ್ತಿರ ತಂದವು.

ಗುವಾಹಟಿಯಲ್ಲಿ ಕಳೆದ ವರ್ಷ ಅವರ ಜನ್ಮ ಶತಮಾನೋತ್ಸವ ಆಚರಣೆಯ ಆರಂಭದಲ್ಲಿ ಪಾಲ್ಗೊಂಡಿದ್ದನ್ನು ನಾನು ಮನಃಪೂರ್ವಕವಾಗಿ ನೆನಪಿಸಿಕೊಳ್ಳುತ್ತೇನೆ. ಭೂಪೇನ್ ದಾ ಅವರ ಜೀವನ ಮತ್ತು ಕೆಲಸವು ಪೀಳಿಗೆಗೆ ಸ್ಫೂರ್ತಿ ನೀಡುತ್ತಲಿರಲಿದೆ.”

 

*****