Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಡಾ. ಸುಭಾಷ್ ಸಿ. ಕಶ್ಯಪ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಡಾ ಸುಭಾಷ್ ಸಿ ಕಶ್ಯಪ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಡಾ. ಕಶ್ಯಪ್ ಅವರು ಭಾರತದ ಪ್ರಮುಖ ಸಂವಿಧಾನ ತಜ್ಞರಲ್ಲಿ ಒಬ್ಬರಾಗಿದ್ದು, ಸಂಸತ್ತಿನ ಹಾಗೂ ಸಂವಿಧಾನ ಸಂಬಂಧಿತ ಚರ್ಚೆಗಳಿಗೆ ನೀಡಿದ ಕೊಡುಗೆಗಳು ಸಮಾಜವನ್ನು ಸಮೃದ್ಧಗೊಳಿಸಿವೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಅವರ ಬರಹಗಳು ಮತ್ತು ಬದ್ಧತೆ ಗಮನಾರ್ಹವಾಗಿದ್ದವು ಎಂದು ಅವರು ಪ್ರಶಂಸಿಸಿದ್ದಾರೆ.

ಅಲ್ಲದೆ, ಡಾ. ಕಶ್ಯಪ್ ಅವರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ಪ್ರಧಾನ ಮಂತ್ರಿಗಳು ತಮ್ಮ ಹೃತ್ಪೂರ್ವಕ ಸಂತಾಪ ಸೂಚಿಸಿದ್ದಾರೆ. 

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ;

“ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಡಾ. ಸುಭಾಷ್ ಸಿ. ಕಶ್ಯಪ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ಭಾರತದ ಪ್ರಮುಖ ಸಂವಿಧಾನ ತಜ್ಞರಲ್ಲಿ ಒಬ್ಬರಾಗಿದ್ದರು. ಸಂಸತ್ತಿನ ಹಾಗೂ ಸಂವಿಧಾನ ಸಂಬಂಧಿತ ವಿಚಾರಗಳಿಗೆ ಅವರು ನೀಡಿದ ಕೊಡುಗೆಗಳು ನಮ್ಮ ಸಮಾಜವನ್ನು ಸಮೃದ್ಧಗೊಳಿಸಿವೆ. ಅವರ ಬರಹಗಳು ಹಾಗೂ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸುವ ಬದ್ಧತೆ ಗಮನಾರ್ಹವಾಗಿತ್ತು. ಅವರ ಕುಟುಂಬ ವರ್ಗದವರು ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಓಂ ಶಾಂತಿ.”

 

*****