Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಡಾ. ಹರೇಕೃಷ್ಣ ಮಹತಾಬ್ ಜೀಯವರು ಭಾರತವನ್ನು ಸ್ವತಂತ್ರಗೊಳಿಸಿ ಪ್ರತಿಯೊಬ್ಬ ಭಾರತೀಯನಿಗೂ ಘನತೆ ಮತ್ತು ಸಮಾನತೆಯ ಜೀವನವನ್ನು ನೀಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಅತ್ಯುನ್ನತ ವ್ಯಕ್ತಿತ್ವ: ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಡಾ. ಹರೇಕೃಷ್ಣ ಮಹಾತಾಬ್ ಜೀ ಅವರನ್ನು ಭಾರತವನ್ನು ಸ್ವತಂತ್ರಗೊಳಿಸಿ, ಪ್ರತಿಯೊಬ್ಬ ಭಾರತೀಯನಿಗೂ ಘನತೆ ಮತ್ತು ಸಮಾನತೆಯ ಜೀವನವನ್ನು ನೀಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಅತ್ಯುನ್ನತ ವ್ಯಕ್ತಿತ್ವ ಎಂದು ಶ್ಲಾಘಿಸಿದ್ದಾರೆ. ಅವರ 125ನೇ ಜನ್ಮ ದಿನಾಚರಣೆಯಂದು ಗೌರವ ನಮನ ಸಲ್ಲಿಸಿದ ಶ್ರೀ ಮೋದಿಯವರು, ಡಾ. ಮಹತಾಬ್ ಅವರ ಆದರ್ಶಗಳನ್ನು ಈಡೇರಿಸುವುದು ಸರ್ಕಾರದ ಬದ್ಧತೆ ಎಂದು ಹೇಳಿದರು.

ಭಾರತದ ರಾಷ್ಟ್ರಪತಿಯವರು ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ಗೆ ಪ್ರತಿಕ್ರಿಯಿಸುತ್ತಾ ಪ್ರಧಾನಿಯವರು:

“ಡಾ.ಹರೇಕೃಷ್ಣ ಮಹಾತಾಬ್ ಜಿಯವರು ಭಾರತವನ್ನು ಸ್ವತಂತ್ರಗೊಳಿಸಲು ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಘನತೆ ಮತ್ತು ಸಮಾನತೆಯ ಜೀವನವನ್ನು ನೀಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಅತ್ಯುನ್ನತ ವ್ಯಕ್ತಿತ್ವ. ಒಡಿಶಾದ ಅಭಿವೃದ್ಧಿಗೆ ಅವರ ಕೊಡುಗೆ ಮಹತ್ತರವಾಗಿ ಗಮನಾರ್ಹವಾಗಿದೆ. ಅವರು ಸಮೃದ್ಧ ಚಿಂತಕ ಮತ್ತು ಬುದ್ಧಿಜೀವಿಯೂ ಆಗಿದ್ದರು. ಅವರ 125ನೇ ಜನ್ಮ ದಿನಾಚರಣೆಯಂದು ನಾನು ಅವರಿಗೆ ಗೌರವ ನಮನ ಸಲ್ಲಿಸುತ್ತಾ ಅವರ ಆದರ್ಶಗಳನ್ನು ಪೂರೈಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇನೆ” ಎಂದು ಬರೆದಿದ್ದಾರೆ.

 

 

*****