ಪಿಎಂಇಂಡಿಯಾ
ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ಸಭೆ ಸೇರಿದ್ದ ಕೇಂದ್ರ ಸಚಿವ ಸಂಪುಟವು, ಹೊಸದಾಗಿ ತಿರುಪತಿ (ಆಂಧ್ರಪ್ರದೇಶ), ಪಾಲಕ್ಕಾಡ್ (ಕೇರಳ), ಧಾರವಾಡ (ಕರ್ನಾಟಕ), ಭಿಲಾಯ್ (ಛತ್ತೀಸ್ಗಢ), ಗೋವಾ, ಜಮ್ಮು (ಜಮ್ಮು ಮತ್ತು ಕಾಶ್ಮೀರ)ಗಳಲ್ಲಿ ಸ್ಥಾಪಿಸಿರುವ ಆರು ನೂತನ ಐ.ಐ.ಟಿ.ಗಳನ್ನು ಮತ್ತು ಧನ್ಬಾದ್ನಲ್ಲಿರುವ ಐಎಸ್ಎಂ ಸಂಸ್ಥೆಯನ್ನು ಐಐಟಿಯಾಗಿ ಪರಿವರ್ತಿಸುವ ಉದ್ದೇಶದಿಂದ `1961ರ ಭಾರತೀಯ ತಂತ್ರಜ್ಞಾನ ಸಂಸ್ಥೆ ಕಾಯ್ದೆ’ಗೆ ತಂದಿರುವ ತಿದ್ದುಪಡಿಗೆ ಕೇಂದ್ರ ಸಂಪುಟದ ತಾತ್ಪೂರ್ತಿಕ ಅನುಮೋದನೆ ನೀಡಿದೆ.
ಈ ಅನುಮೋದನೆಯಿಂದಾಗಿ, ಈ ಆರು ನೂತನ ಐಐಟಿಗಳು `1961ರ ಭಾರತೀಯ ತಂತ್ರಜ್ಞಾನ ಸಂಸ್ಥೆ ಕಾಯ್ದೆ’ ವ್ಯಾಪ್ತಿಗೆ ಸೇರಿಕೊಂಡಿವೆ. ಜೊತೆಗೆ, ಈ ಸಂಸ್ಥೆಗಳನ್ನು `ರಾಷ್ಟ್ರೀಯ ಮಹತ್ವದ ಸಂಸ್ಥೆಗಳು’ ಎಂದು ಘೋಷಿಸಲು ಇದು ಅನುವು ಮಾಡಿಕೊಡಲಿದೆ. ಅಲ್ಲದೆ, ಮೇಲ್ಕಂಡ ತಿದ್ದುಪಡಿಯು, ಧನಬಾದ್ನಲ್ಲಿರುವ ಐಎಸ್ಎಂ ಸಂಸ್ಥೆಯನ್ನು ಐಐಟಿಯನ್ನಾಗಿ ಪರಿವರ್ತಿಸಲು ಕೂಡ ಅವಕಾಶ ಕೊಡಲಿದೆ. ಅಲ್ಲದೆ, ಈ ಸಂಸ್ಥೆಯು ಕೂಡ 1961ರ ಐಐಟಿ ಕಾಯ್ದೆಯಡಿ ಬರಲಿದ್ದು, ಇದೂ ಸಹ `ರಾಷ್ಟ್ರೀಯ ಮಹತ್ವದ ಸಂಸ್ಥೆ’ ಎನಿಸಿಕೊಳ್ಳಲು ಹಾದಿ ಸುಗಮವಾಗಿದೆ.