ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತೆಲಂಗಾಣ ರಾಜ್ಯ ಸಂಸ್ಥಾಪನಾ ದಿನದ ವಿಶೇಷ ಸಂದರ್ಭದಲ್ಲಿ ತೆಲಂಗಾಣ ಜನತೆಗೆ ಶುಭಾಶಯ ಕೋರಿದ್ದಾರೆ.
ತೆಲಂಗಾಣದ ಜನರು ತಮ್ಮ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮನೋಭಾವಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ರಾಜ್ಯದ ಭವ್ಯ ಸಂಸ್ಕೃತಿ ಮತ್ತು ಧೈರ್ಯ ಮತ್ತು ದೃಢನಿಶ್ಚಯದ ಇತಿಹಾಸವನ್ನು ಬಿಂಬಿಸಿದರು. ‘ವಿಕಸಿತ ಭಾರತ’ದ ಕನಸನ್ನು ನನಸು ಮಾಡುವಲ್ಲಿ ತೆಲಂಗಾಣದ ಬೆಳವಣಿಗೆಯ ಪಥವನ್ನು ಬೆಂಬಲಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಶ್ರೀ ನರೇಂದ್ರ ಮೋದಿ ಅವರು ದೃಢಪಡಿಸಿದರು ಮತ್ತು ರಾಜ್ಯದ ಜನರ ಉತ್ತಮ ಆರೋಗ್ಯ ಮತ್ತು ಯಶಸ್ಸಿಗಾಗಿ ಪ್ರಾರ್ಥಿಸಿದರು.
ಪ್ರಧಾನಮಂತ್ರಿ ಅವರು ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ:
“ತೆಲಂಗಾಣ ರಾಜ್ಯ ಸಂಸ್ಥಾಪನಾ ದಿನದ ವಿಶೇಷ ಸಂದರ್ಭದಲ್ಲಿ ತೆಲಂಗಾಣ ಜನತೆಗೆ ಶುಭಾಶಯಗಳು. ತೆಲಂಗಾಣದ ಜನರು ತಮ್ಮ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮನೋಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಈ ರಾಜ್ಯವು ತನ್ನ ವೈಭವಯುತ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಧೈರ್ಯ ಮತ್ತು ದೃಢನಿಶ್ಚಯದಿಂದ ಕೂಡಿದೆ. ವಿಕಸಿತ ಭಾರತದ ನಮ್ಮ ಕನಸನ್ನು ಸಾಕಾರಗೊಳಿಸುವಲ್ಲಿ ತೆಲಂಗಾಣದ ಬೆಳವಣಿಗೆಯ ಪಥವನ್ನು ಬೆಂಬಲಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ರಾಜ್ಯದ ಜನರ ಉತ್ತಮ ಆರೋಗ್ಯ ಮತ್ತು ಯಶಸ್ಸಿಗಾಗಿ ಪ್ರಾರ್ಥಿಸುತ್ತೇನೆ.”
*****
Greetings to the people of Telangana on the special occasion of Telangana Statehood Day. The people of Telangana are known for their spirit of innovation and enterprise. The State is known for its glorious culture and history...one of courage and determination. The Central…
— Narendra Modi (@narendramodi) June 2, 2026
తెలంగాణ రాష్ట్ర ఆవిర్భావ దినోత్సవం సందర్భంగా తెలంగాణ ప్రజలకు హృదయపూర్వక శుభాకాంక్షలు.తెలంగాణ ప్రజలు తమ సృజనాత్మకతకు, వ్యాపార దృక్పథానికి ప్రసిద్ధులు. ఈ రాష్ట్రం ధైర్యానికి, సంకల్పానికి,పోరాట స్ఫూర్తికి ప్రతీకగా నిలిచిన గొప్ప చరిత్ర, వైభవోపేతమైన సంస్కృతిని కలిగి ఉంది.
— Narendra Modi (@narendramodi) June 2, 2026
వికసిత భారత్…