ಪಿಎಂಇಂಡಿಯಾ
ಭಾರತೀಯ ವಾಯುಪಡೆಗೆ ತೇಜಸ್ ಯುದ್ಧ ವಿಮಾನ ಸೇರ್ಪಡೆಯಾಗಿರುವ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ಮತ್ತು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ತೇಜಸ್ ಸೇರ್ಪಡೆಯ ಸಂದರ್ಭದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್) ಮತ್ತು ಏರೋನಾಟಿಕಲ್ ಡೆವಲಪ್ ಮೆಂಟ್ ಏಜೆನ್ಸಿ (ಎಡಿಎ)ಬಗ್ಗೆಯೂ ಪ್ರಧಾನಿಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
“ದೇಶೀ ನಿರ್ಮಿತ ತೇಜಸ್ ಯುದ್ಧ ವಿಮಾನವನ್ನು ವಾಯುಪಡೆಗೆ ಸೇರ್ಪಡೆ ಮಾಡಿರುವುದು, ನಮ್ಮ ಹೃದಯಕ್ಕೆ ಅತೀವ ಸಂತಸ ಮತ್ತು ಹೆಮ್ಮೆ ತಂದಿದೆ.
ನಾನು ಎಚ್.ಎ.ಎಲ್ ಮತ್ತು ಎಡಿಎಗೆ ಅದರ ತೇಜಸ್ ಯುದ್ಧ ವಿಮಾನದ ಸೇರ್ಪಡೆ ಸಂದರ್ಭದಲ್ಲಿ ಪ್ರಶಂಸಿಸುತ್ತೇನೆ. ಇದು ದೇಶೀಯ ರಕ್ಷಣಾ ಉತ್ಪಾದನೆಯಲ್ಲಿ ನಮ್ಮ ಕೌಶಲ ಮತ್ತು ಬಲವನ್ನು ಬಿಂಬಿಸುತ್ತದೆ”, ಎಂದು ಪ್ರಧಾನಿ ತಿಳಿಸಿದ್ದಾರೆ.
Induction of indigenously made Tejas fighter jet into the Air Force fills our hearts with unparalleled pride & happiness. #TransformingIndia
— Narendra Modi (@narendramodi) July 1, 2016
I laud HAL & ADA on the induction of Tejas fighter jet. This illustrates our skills & strengths to enhance indigenous defence manufacturing.
— Narendra Modi (@narendramodi) July 1, 2016