Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದಂತ ವೈದ್ಯರ (ತಿದ್ದುಪಡಿ) ವಿಧೇಯಕ 2017 ಮಂಡನೆಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದಂತವೈದ್ಯರ ಕಾಯಿದೆ 1948 (1948ರ 16)ಯ ತಿದ್ದುಪಡಿಗೆ ಶಾಸಕಾಂಗ ಇಲಾಖೆ ಅಗತ್ಯವೆಂದು ಪರಿಗಣಿಸುವ ಕರಡು ಮಾರ್ಪಾಡು ಅಥವಾ ಪರಿಣಾಮಕಾರಿ ಸ್ವರೂಪದ ತಿದ್ದುಪಡಿಗಳೊಂದಿಗೆ ದಂತವೈದ್ಯ (ತಿದ್ದುಪಡಿ) ಮಸೂದೆ 2017ನ್ನು ಸಂಸತ್ತಿನಲ್ಲಿ ಮಂಡಿಸಲು ತನ್ನ ಅನುಮೋದನೆ ನೀಡಿದೆ. ಈ ತಿದ್ದುಪಡಿಯು ಅಗತ್ಯಕ್ಕಿಂತಲೂ ಹೆಚ್ಚಾಗಿರುವ ನಿಬಂಧನೆಗಳನ್ನು ಕಡಿಮೆ ಮಾಡುತ್ತದೆ.

1948 ರ ದಂತವೈದ್ಯ ಕಾಯಿದೆಯ ನಿಬಂಧನೆಗಳ ಕೆಲವು ಬದಲಾವಣೆಗಳು ಈ ಕೆಳಕಂಡ ಖಂಡಗಳನ್ನು ಒಳಗೊಂಡಿರುತ್ತವೆ:

1. ಸೆಕ್ಷನ್ 3ರ ಕ್ಲಾಸ್ (ಎಫ್) ಅಡಿಯಲ್ಲಿ ಭಾರತೀಯ ದಂತವೈದ್ಯ ಮಂಡಳಿಯ ಸದಸ್ಯತ್ವ ಮತ್ತು

2. ಸದರಿ ಕಾಯಿದೆಯ ಸೆಕ್ಷನ್ 23ರ ಕ್ಲಾಸ್ (ಬಿ) ಮತ್ತು ಸೆಕ್ಷನ್ 21ರ ಕ್ಲಾಸ್ (ಬಿ) ಅಡಿಯಲ್ಲಿ ರಾಜ್ಯ ಮತ್ತು ಜಂಟಿ ರಾಜ್ಯ ದಂತವೈದ್ಯ ಮಂಡಳಿಗಳ ಸದಸ್ಯತ್ವ.

ಹಿನ್ನೆಲೆ:

ಹಾಲಿ ಇರುವ ಕಾಯಿದೆಯ ಅನ್ವಯ, ಭಾರತೀಯ ದಂತವೈದ್ಯ ಮಂಡಳಿಯಲ್ಲಿ ಭಾಗ (ಬಿ)ಯಲ್ಲಿ ನೋಂದಣಿಯಾದ ದಂತವೈದ್ಯರನ್ನು ಕೇಂದ್ರ ಸರ್ಕಾರದಿಂದ ನಾಮನಿರ್ದೇಶಿತರಾದವರ ಪ್ರತಿನಿಧಿತ್ವ ಮತ್ತು ರಾಜ್ಯ/ಜಂಟಿ ರಾಜ್ಯ ದಂತವೈದ್ಯ ಮಂಡಳಿಗಳಿಗೆ ಭಾಗ(ಬಿ) ರೀತ್ಯ ನಾಲ್ಕು/ಎರಡು ಸದಸ್ಯರ ಚುನಾವಣೆ ನಡೆಸುವುದು ಅಗತ್ಯವಾಗಿರುತ್ತದೆ. ಆದಾಗ್ಯೂ, ಇದು ತನ್ನ ಔಚಿತ್ಯವನ್ನು ಕಳೆದುಕೊಂಡಿದೆ. ಅನಗತ್ಯವಾದ ಈ ಪ್ರತಿನಿಧಿತ್ವದ ನಿಬಂಧನೆಗಳ ಹೊರೆಯನ್ನು ತಗ್ಗಿಸುವ ದೃಷ್ಟಿಯೊಂದಿಗೆ, ಕೇಂದ್ರ ಸರ್ಕಾರವು ಈ ನಿಬಂಧನೆಗಳನ್ನು ಕೈಬಿಡಲು ನಿರ್ಧರಿಸಿದೆ, ಹೀಗಾಗಿ ಇನ್ನು ಮುಂದೆ ಅದರ ಪ್ರತಿನಿಧಿತ್ವ ಕಡ್ಡಾಯವಾಗಿರುವುದಿಲ್ಲ.