Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೆಹಲಿಯ ಅನಧಿಕೃತ ಬಡಾವಣೆಗಳ 40 ಲಕ್ಷ ನಿವಾಸಿಗಳಿಗೆ ಮಾಲೀಕತ್ವ ಅಥವಾ ಅಡಮಾನ / ವರ್ಗಾವಣೆ ಹಕ್ಕುಗಳನ್ನು ನೀಡಲು ಸಂಪುಟ ಸಭೆ ಅನುಮೋದನೆ


ದೆಹಲಿಯ ಅನಧಿಕೃತ ಬಡಾವಣೆಗಳ ನಿವಾಸಿಗಳಿಗೆ ಮಾಲೀಕತ್ವ ಅಥವಾ ಅಡಮಾನ / ವರ್ಗಾವಣೆ ಹಕ್ಕುಗಳನ್ನು ನೀಡುವ ನಿಯಮಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಸ್ತಾವನೆಯನ್ನು ಕಾರ್ಯಗತಗೊಳಿಸಲು ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲೂ ಸಹ ಸಂಪುಟ ಅನುಮೋದನೆ ನೀಡಿತು.

ದೆಹಲಿಯ ಅನಧಿಕೃತ ಬಡಾವಣೆಗಳಲ್ಲಿ ವಾಸಿಸುತ್ತಿರುವರಿಗೆ ಇದರ ಪ್ರಮುಖ ಪರಿಣಾಮ ಮತ್ತು ಪ್ರಯೋಜನಗಳು:

•ಈ ನಿರ್ಧಾರವು ಸುಮಾರು 175 ಚದರ ಕಿ.ಮೀ ವಿಸ್ತೀರ್ಣದಲ್ಲಿರುವ ಅನಧಿಕೃತ ಬಡಾವಣೆಗಳ 40 ಲಕ್ಷಕ್ಕೂ ಹೆಚ್ಚು ನಿವಾಸಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಏಕೆಂದರೆ ಈ ವಸಾಹತುಗಳಲ್ಲಿ ಈಗ ಅಭಿವೃದ್ಧಿ / ಪುನರಾಭಿವೃದ್ಧಿ ನಡೆಯಬಹುದು, ಇದರಿಮದಾಗಿ ಸ್ವಚ್ಛ, ಸುರಕ್ಷಿತ ಮತ್ತು ಆರೋಗ್ಯಕರ ವಾಸಯೋಗ್ಯ ವಾತಾವರಣ ಉಂಟಾಗುತ್ತದೆ.

•ಈ ಪ್ರಮುಖ ಉಪಕ್ರಮವು ಅನಧಿಕೃತ ಬಡಾವಣೆಗಳ ನಿವಾಸಿಗಳು ಎದುರಿಸುತ್ತಿದ್ದ ಮಾಲೀಕತ್ವ / ವರ್ಗಾವಣೆ ಹಕ್ಕುಗಳಿಲ್ಲದ, ಮೂಲಸೌಕರ್ಯ ಮತ್ತು ನಾಗರಿಕ ಸೌಲಭ್ಯಗಳಂತಹ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುತ್ತದೆ.

•ಆಸ್ತಿ ದಾಖಲೆಗಳ ಗುರುತಿಸುವಿಕೆಯೊಂದಿಗೆ, ಈ ವಸಾಹತುಗಳಲ್ಲಿ ಆಸ್ತಿ ಹೊಂದಿರುವವರು ಈಗ ಸೂಕ್ತ ಆಸ್ತಿ ವಹಿವಾಟಿಗೆ ಪ್ರವೇಶಿಸಬಹುದು. ಆಸ್ತಿಗೆ ಕಾನೂನುಬದ್ಧ ಹಕ್ಕು ನೀಡುವುದರ ಜೊತೆಗೆ, ಈ ನಿರ್ಧಾರವು ಆಸ್ತಿ ಹೊಂದಿರುವವರಿಗೆ ಸುರಕ್ಷಿತ ಕಟ್ಟಡಗಳಲ್ಲಿ ಹೂಡಿಕೆ ಮಾಡಲು ಉತ್ತೇಜಿಸುತ್ತದೆ, ಇದರಿಂದಾಗಿ ಈ ಬಡಾವಣೆಗಳಲ್ಲಿನ ಜೀವನ ಪರಿಸ್ಥಿತಿಗಳು ಗಣನೀಯವಾಗಿ ಸುಧಾರಿಸುತ್ತವೆ.

•ಈ ನಿರ್ಧಾರವು ಕಡಿಮೆ ಆದಾಯದ ಜನರು ವಾಸಿಸುತ್ತಿರುವ 1,797 ಗುರುತಿಸಲ್ಪಟ್ಟ ಅನಧಿಕೃತ ಬಡಾವಣೆಗಳಿಗೆ ಅನ್ವಯಿಸುತ್ತದೆ. ಸೈನಿಕ್ ಫಾರ್ಮ್ಸ್, ಮಹೇಂದ್ರು ಎನ್ಕ್ಲೇವ್ ಮತ್ತು ಅನಂತ್ ರಾಮ್ ಡೈರಿ ಸೇರಿದಂತೆ ಡಿಡಿಎ ಗುರುತಿಸಿದ 69 ಶ್ರೀಮಂತ ಬಡಾವಣೆಗಳಿಗೆ ಈ ನಿರ್ಧಾರ ಅನ್ವಯಿಸುವುದಿಲ್ಲ.

•ಕಾರ್ಪೆಟ್ ಪ್ರದೇಶ / ನಿವೇಶನ ಗಾತ್ರವನ್ನು ಆಧರಿಸಿ ಶುಲ್ಕವನ್ನು ಪಾವತಿಸಿದಾಗ ಹಕ್ಕುಗಳನ್ನು ನೀಡಲಾಗುತ್ತದೆ. ಸರ್ಕಾರಿ ಭೂಮಿಯಲ್ಲಿನ ಬಡಾವಣೆಗಳಿಗೆ, ಶುಲ್ಕವು 0.5% (100 ಚದರ ಮೀ ಗಿಂತ ಕಡಿಮೆ), 1% (100 – 250 ಚದರ ಮೀಟರ್ಗೆ) ಮತ್ತು 2.5% (250 ಚದರ ಮೀಟರ್ಗಿಂತ ಹೆಚ್ಚು) ಆಗಿರುತ್ತದೆ.

•ಖಾಸಗಿ ಭೂಮಿಯಲ್ಲಿನ ಬಡಾವಣೆಗಳಿಗೆ, ಸರ್ಕಾರಿ ಭೂಮಿಯಲ್ಲಿನ ಶುಲ್ಕದ ಅರ್ಧದಷ್ಟು ಶುಲ್ಕವಿರುತ್ತದೆ.

ವಿವರಗಳು:

•ಕೇಂದ್ರ ಸರ್ಕಾರವು ಸಂಸತ್ತಿನ ಮುಂದಿನ ಅಧಿವೇಶನದಲ್ಲಿ, ಅನಧಿಕೃತ ಬಡಾವಣೆಗಳ ನಿವಾಸಿಗಳಿಗೆ ಒಂದು ಬಾರಿ ವಿನಾಯ್ತಿ ನೀಡುವ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ), ವಿಲ್, ಮಾರಾಟ ಮಾಡಲು ಒಪ್ಪಂದ, ಖರೀದಿ ಮತ್ತು ಸ್ವಾಧೀನ ದಾಖಲೆಗಳನ್ನು ಗುರುತಿಸುವ ಮಸೂದೆಯನ್ನು ಮಂಡಿಸುತ್ತದೆ.

•ಮಸೂದೆಯು ಕೊನೆಯ ವಹಿವಾಟಿನಲ್ಲಿ ನೋಂದಣಿ ಶುಲ್ಕ ಮತ್ತು ಮುದ್ರಾಂಕ ಸುಂಕವನ್ನು ಒದಗಿಸುತ್ತದೆ ಮತ್ತು ವಲಯ ದರ ಶುಲ್ಕಕ್ಕಿಂತ ಕಡಿಮೆ ಇರುವ ಕಾರಣ ಆದಾಯ ತೆರಿಗೆ ಸಮಸ್ಯೆಯನ್ನು ಸಹ ಪರಿಹರಿಸುತ್ತದೆ.

•ಡಿಡಿಎ ಬಳಕೆಯ ಪತ್ರ ಮತ್ತು ಆಸ್ತಿ ನೋಂದಣಿಗಾಗಿ ಸರಳೀಕೃತ ಕಾರ್ಯವಿಧಾನವನ್ನು ರೂಪಿಸುತ್ತದೆ.

•ಅನಧಿಕೃತ ಬಡಾವಣೆಗಳ ಗಡಿಗಳು / ಅನಧಿಕೃತ ಬಡಾವಣೆಗಳ ಕ್ಲಸ್ಟರ್ಗಳನ್ನು ಡಿಡಿಎ ವಿವರಿಸುತ್ತದೆ.

•ಡಿಡಿಎ ಎಲ್ಲಾ ಅನಧಿಕೃತ ಬಡಾವಣೆಗಳಿಗೆ ಸ್ಥಳೀಯ ಪ್ರದೇಶ ಯೋಜನೆಯನ್ನು (ಎಲ್ಎಪಿ) ಸಿದ್ಧಪಡಿಸುತ್ತದೆ.

•ದಂಡ ಮತ್ತು ಬಾಹ್ಯ ಅಭಿವೃದ್ಧಿ ಶುಲ್ಕಗಳು (ಇಡಿಸಿ) ಇರುವುದಿಲ್ಲ.

•ಬಹು ನಿವೇಶನಗಳು / ಫ್ಲಾಟ್ಗಳನ್ನು ಹೊಂದಿರುವವರಿಗೆ ಎಲ್ಲಾ ಆಸ್ತಿಗಳನ್ನು ಒಟ್ಟುಗೂಡಿಸುವ ಮೂಲಕ ಪ್ರದೇಶಕ್ಕೆ ಅನ್ವಯವಾಗುವ ದರದಲ್ಲಿ ಶುಲ್ಕ ವಿಧಿಸಲಾಗುತ್ತದೆ.

•ನಿವಾಸಿಗಳು ಪಾವತಿಸಬೇಕಾದ ಶುಲ್ಕವನ್ನು ಒಂದು ವರ್ಷದಲ್ಲಿ ಮೂರು ಸಮಾನ ಕಂತುಗಳಲ್ಲಿ ಪಾವತಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಯಾವುದೇ ವ್ಯಕ್ತಿಯು ಒಂದು ಕಂತಿನಲ್ಲಿ ಪೂರ್ಣ ಮೊತ್ತವನ್ನು ಪಾವತಿಸಿದರೆ ತಕ್ಷಣ ಮಾಲೀಕತ್ವದ ಹಕ್ಕುಗಳನ್ನು ಪಡೆಯುತ್ತಾರೆ. ಎರಡು ಕಂತುಗಳನ್ನು ಪಾವತಿಸುವವರಿಗೆ ತಾತ್ಕಾಲಿಕ ಹಕ್ಕುಗಳನ್ನು ನೀಡಲಾಗುವುದು, ಅದನ್ನು ಪೂರ್ಣ ಮತ್ತು ಅಂತಿಮ ಪಾವತಿಯ ನಂತರ ಶಾಶ್ವತ ಹಕ್ಕುಗಳಾಗಿ ಪರಿವರ್ತಿಸಲಾಗುತ್ತದೆ.

•ತಡವಾಗಿ ಪಾವತಿಸುವವರಿಗೆ ಶೇ. 8 ರ ಸರಳ ಬಡ್ಡಿಯನ್ನು ವಿಧಿಸಲಾಗುವುದು.

•ಯಾವುದೇ ತೆರನಾದ ಬಳಕೆಯಲ್ಲಿದ್ದರೂ ಬಳಕೆಯ ಪತ್ರವನ್ನು ವಸತಿ ಉದ್ದೇಶಕ್ಕಾಗಿ ಕಾರ್ಯಗತಗೊಳಿಸಲಾಗುತ್ತದೆ.

ಹಿನ್ನೆಲೆ:

•ಸದ್ಯ ಅಸ್ತಿತ್ವದಲ್ಲಿರುವ 2008 ರ ನಿಯಮಾವಳಿಗಳ ಪ್ರಕಾರ, ಕ್ರಮಬದ್ಧಗೊಳಿಸುವಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ದೆಹಲಿಯ ರಾಷ್ಟ್ರೀಯ ರಾಜಧಾನಿ ಸರ್ಕಾರವು (ಜಿಎನ್ಸಿಟಿಡಿ) ಸಮನ್ವಯಗೊಳಿಸಿ ಮೇಲ್ವಿಚಾರಣೆ ಮಾಡಬೇಕಾಗಿತ್ತು. ಅನಧಿಕೃತ ಬಡಾವಣೆಗಳ ಗಡಿಯನ್ನು ರೂಪಿಸುವುದು ನಿಯಮಗಳ ಪ್ರಕಾರ ಪ್ರಕ್ರಿಯೆಯ ಆರಂಭಿಕ ಹಂತವಾಗಿದೆ. ಆದಾಗ್ಯೂ, ಜಿಎನ್ಸಿಟಿಡಿ ಈ ಬಡಾವಣೆಗಳ ಗಡಿಗಳನ್ನು 11 ವರ್ಷಗಳ ನಿಯಮಗಳ ನಂತರವೂ ರೂಪಿಸಲು ಸಾಧ್ಯವಾಗಲಿಲ್ಲ ಮತ್ತು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 2021 ರವರೆಗೆ ಹೆಚ್ಚಿನ ಸಮಯವನ್ನು ಕೋರಿದೆ.

•ಈ ಅನಧಿಕೃತ ಬಡಾವಣೆಗಳಲ್ಲಿ ವಾಸಿಸುವ ಜನರು ಸುರಕ್ಷಿತ ಕಟ್ಟಡಗಳಲ್ಲಿ ಹೂಡಿಕೆ ಮಾಡಿಲ್ಲ ಅಥವಾ ಅನುಮೋದಿತ ಲೇ ಔಟ್ ಯೋಜನೆ (ಎಲ್ಒಪಿ) ಇಲ್ಲದೆ ಈ ಬಡಾವಣೆಗಳು ಅಭಿವೃದ್ಧಿ ಹೊಂದಿದ ಕಾರಣ ಸರ್ಕಾರಕ್ಕೆ ಯಾವುದೇ ಸಾಮಾಜಿಕ ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ. ಮೂಲಭೂತ ಸೌಕರ್ಯಗಳ ಕೊರತೆಯಲ್ಲಿ, ಈ ಬಡಾವಣೆಗಳ ನಿವಾಸಿಗಳು ವಾಸಯೋಗ್ಯವಲ್ಲದ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಮಾಸ್ಟರ್ ಪ್ಲಾನ್ ದೆಹಲಿ -2021 ಶೇ. 50 ಹೆಚ್ಚುವರಿ ಕಟ್ಟಡ ಪ್ರದೇಶ ಅನುಪಾತ (ಎಫ್ಎಆರ್) ಹೊಂದಿರುವ ಬಡಾವಣೆಗಳ ಪುನರಾಭಿವೃದ್ಧಿಗೆ ಪ್ರೋತ್ಸಾಹಕ ಅವಕಾಶ ನೀಡಿದ್ದರೂ ಸಹ , ನಿವಾಸಿಗಳಿಗೆ ಮಾಲೀಕತ್ವದ ಹಕ್ಕುಗಳಿಲ್ಲದ ಕಾರಣ ಇಲ್ಲಿಯವರೆಗೆ ಯಾವುದೇ ಪುನರಾಭಿವೃದ್ಧಿ ನಡೆದಿಲ್ಲ.

•ಅನಧಿಕೃತ ಬಡಾವಣೆಗಳ ನಿವಾಸಿಗಳಿಗೆ ಮಾಲೀಕತ್ವ ಅಥವಾ ಅಡಮಾನ / ವರ್ಗಾವಣೆ ಹಕ್ಕುಗಳನ್ನು ನೀಡುವ / ಗುರುತಿಸುವ ಸಲುವಾಗಿ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನೇತೃತ್ವದ ಸಮಿತಿಯನ್ನು ಕೇಂದ್ರ ಸಚಿವ ಸಂಪುಟದ ಅನುಮೋದನೆಯೊಂದಿಗೆ ರಚಿಸಲಾಯಿತು. ಈ ಹಕ್ಕುಗಳನ್ನು ನೀಡುವ / ಗುರುತಿಸುವ ಪ್ರಕ್ರಿಯೆಯನ್ನು ಶಿಫಾರಸು ಮಾಡಲು ಆಸ್ತಿಯ ಮಾಲೀಕತ್ವ ಅಥವಾ ವರ್ಗಾವಣೆ / ಅಡಮಾನ ಮತ್ತು ಆ ಮೂಲಕ ಅಂತಹ ಪ್ರದೇಶಗಳನ್ನು ಯೋಜಿತ ರೀತಿಯಲ್ಲಿ ಪುನರಾಭಿವೃದ್ಧಿಗೆ ಅವಕಾಶವನ್ನು ಸೃಷ್ಟಿಸುತ್ತದೆ.

•ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮತ್ತು ಪರಿಷ್ಕೃತ ನಿಬಂಧನೆಗಳನ್ನು ಪ್ರಕಟಿಸಲು ಮತ್ತು ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಲು ಮೇಲಿನ ಪ್ರಸ್ತಾಪಗಳನ್ನು ಎಲ್ಲಾ ಪಾಲುದಾರರೊಂದಿಗೆ ಸವಿಸ್ತಾರವಾಗಿ ಸಮಾಲೋಚಿಸಲಾಗಿದೆ.